twitter
    For Quick Alerts
    ALLOW NOTIFICATIONS  
    For Daily Alerts

    ರಾಜಮೌಳಿಗೆ ಸ್ಟೋರಿ ಆಯ್ಕೆಯಲ್ಲಿ ಗೊಂದಲ: ಮಹೇಶ್ ಬಾಬು ಸಿನಿಮಾ ಸೆಟ್ಟೇರಲ್ವಾ?

    |

    'ಸರ್ಕಾರು ವಾರಿ ಪಾಟ' ರಿಲೀಸ್ ಆಗಿದ್ದೂ ಆಯ್ತು. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದೂ ಆಯ್ತು. ಆದರೆ, ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಾಜಮೌಳಿ ಹಾಗೂ ಪ್ರಿನ್ಸ್ ಕಾಂಬಿನೇಷನ್ ಸಿನಿಮಾ ಮಾತ್ರ ಸೆಟ್ಟೇರಿಲ್ಲ. ಯಾವ ಸೆಟ್ಟೇರುತ್ತೆ ಅನ್ನುವುದೂ ಗೊತ್ತಿಲ್ಲ.

    ಇನ್ನೊಂದು ಕಡೆ ರಾಜಮೌಳಿಯ RRR ಸಿನಿಮಾ ರಿಲೀಸ್ ಆಗಿದ್ದೂ ಆಗಿದೆ. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದೂ ಆಗಿದೆ. ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿರುವ ಈ ಸಿನಿಮಾದ ಬಳಿಕ ಮಹೇಶ್ ಬಾಬುಗೆ ರಾಜಮೌಳಿ ಸಿನಿಮಾ ಮಾಡಬೇಕಿತ್ತು. ಆದ್ರೀಗ ಆ ಸಿನಿಮಾ ಬಗ್ಗೆ ಸುದ್ದಿನೇ ಇಲ್ಲ.

    2024ರ ಚುನಾವಣೆ ಲೆಕ್ಕಾಚಾರ: ಆಂಧ್ರ ಸಿಎಂ ಮಹೇಶ್ ಬಾಬು ತಂದೆಗೆ ವಿಶ್ ಮಾಡಿದ ಗುಟ್ಟೇನು? 2024ರ ಚುನಾವಣೆ ಲೆಕ್ಕಾಚಾರ: ಆಂಧ್ರ ಸಿಎಂ ಮಹೇಶ್ ಬಾಬು ತಂದೆಗೆ ವಿಶ್ ಮಾಡಿದ ಗುಟ್ಟೇನು?

    ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾದಂತೆ, ರಾಜಮೌಳಿ ಸಿನಿಮಾ ಬಗ್ಗೆನೂ ನಿರೀಕ್ಷೆಯೇನು ಜೋರಾಗೇ ಇದೆ. ಇನ್ನು ಎರಡು ಪವರ್‌ಹೌಸ್‌ಗಳು ಒಂದೇ ಕಡೆ ಸೇರಿದೆ ಅಂದ್ಮೇಲೆ ಅದೇ ನಿರೀಕ್ಷೆ ದುಪ್ಪಟ್ಟಾಗಿರುವುದಂತೂ ನಿಜ. ಆದ್ರೀಗ ಟಾಲಿವುಡ್‌ ಅಂಗಳದಲ್ಲಿ ಬೇರೆಯದ್ದೇ ಸುದ್ದಿ ಹರಿದಾಡುತ್ತಿದೆ.

    ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತ ಸೂಪರ್‌ಸ್ಟಾರ್ ಮಹೇಶ್ ಬಾಬು! ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತ ಸೂಪರ್‌ಸ್ಟಾರ್ ಮಹೇಶ್ ಬಾಬು!

    ಸೂಪರ್‌ಸ್ಟಾರ್‌ಗೆ ಕಥೆನೇ ಸಿಗುತ್ತಿಲ್ಲ

    ಸೂಪರ್‌ಸ್ಟಾರ್‌ಗೆ ಕಥೆನೇ ಸಿಗುತ್ತಿಲ್ಲ

    ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬುಗೆ ರಾಜಮೌಳಿ ಸಿನಿಮಾ ಮಾಡುತ್ತಾರೆ ಅಂತ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಯಾವಾಗ ಸೆಟ್ಟೇರುತ್ತೆ ಅನ್ನುವ ಸುಳಿವೇ ಸಿಗುತ್ತಿಲ್ಲ. ಈ ಬೆನ್ನಲ್ಲೇ ಟಾಲಿವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮಹೇಶ್ ಬಾಬುಗೆ ಯಾವ ರೀತಿ ಸಿನಿಮಾ ಮಾಡಬೇಕು ಅನ್ನುವ ಗೊಂದಲಕ್ಕೆ ಬಿದ್ದಿದ್ದಾರಂತೆ ರಾಜಮೌಳಿ. ಇನ್ನೊಂದು ಮೂಲದ ಪ್ರಕಾರ, ರಾಜಮೌಳಿಗೆ ಕಥೆನೇ ಸಿಗುತ್ತಿಲ್ಲ ಎನ್ನುತ್ತಿದೆ.

    ರಾಜಮೌಳಿ-ಮಹೇಶ್ ಬಾಬು ಸಿನಿಮಾ ಆಗಲ್ವಾ?

    ರಾಜಮೌಳಿ-ಮಹೇಶ್ ಬಾಬು ಸಿನಿಮಾ ಆಗಲ್ವಾ?

    RRR ಸೇರಿದ ಕೆಲವು ದಿನಗಳಲ್ಲೇ ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಎನ್ನಲಾಗಿತ್ತು. RRR ಸಿನಿಮಾ ರಿಲೀಸ್ ಆದ ಮೇಲೂ ಇದೇ ಟಾಕ್ ಮುಂದುವರೆದಿತ್ತು. ಆದರೆ, RRR ಸಿನಿಮಾ ಮುಗಿದ ಬಳಿಕವೂ ರಾಜಮೌಳಿ ತನ್ನ ಮುಂದಿನ ಸಿನಿಮಾ ಯಾರಿಗೆ ಅನ್ನುವುದನ್ನು ಅನೌನ್ಸ್ ಮಾಡಿಲ್ಲ. ಮೂಲಗಳ ಪ್ರಕಾರ, ಮಹೇಶ್ ಬಾಬು ಯಾವ ರೀತಿ ಸಿನಿಮಾ ಮಾಡಬೇಕು ಅಂತಾನೇ ರಾಜಮೌಳಿಗೆ ಗೊತ್ತಾಗುತ್ತಿಲ್ಲವಂತೆ. ಇಂತಹದ್ದೊಂದು ಚರ್ಚೆ ಟಾಲಿವುಡ್‌ನಲ್ಲಾಗುತ್ತಿದೆ. ಹಾಗಂತ ಇಬ್ಬರ ಕಾಂಬಿನೇಷನ್‌ ಸಿನಿಮಾ ನಿಂತಿಲ್ಲ ಅಂತಿದೆ.

    ಆಫ್ರಿಕಾದಲ್ಲಿ ಅಡ್ವೆಂಚರ್ ಸಿನಿಮಾ ನಡೆಯಲ್ಲ

    ಆಫ್ರಿಕಾದಲ್ಲಿ ಅಡ್ವೆಂಚರ್ ಸಿನಿಮಾ ನಡೆಯಲ್ಲ

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆಯನ್ನು ರಿವೀಲ್ ಮಾಡಿದ್ದರು. ಮಹೇಶ್ ಬಾಬು ಅಡ್ವೆಂಚರ್ ಕಥೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ. ಆಫ್ರಿಕಾದಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಅಲ್ಲಿಯದ್ದೇ ಅಡ್ವೆಂಚರ್ ಕತೆ ಎಂದಿದ್ದರು. ಆದ್ರೀಗ 'ಮೇಜರ್' ಸಿನಿಮಾ ಪ್ರಚಾರದ ವೇಳೆ ಸ್ವತ: ಮಹೇಶ್ ಬಾಬು ಆಫ್ರಿಕಾದ ಕಥೆಯಲ್ಲ ಎಂದು ಹೇಳಿದ್ದಾರೆ. "ರಾಜಮೌಳಿ ಜೊತೆ ಸಿನಿಮಾದ ಕಥೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಆಫ್ರಿಕಾದ ಅಡ್ವೆಂಚರ್ ಕಥೆಯಲ್ಲ. ಇನ್ನೂ ಸಿನಿಮಾ ಸ್ಟೋರಿ ಬಗ್ಗೆ ಯಾವುದೂ ಫೈನಲ್ ಆಗಿಲ್ಲ." ಎಂದಿದ್ದಾರೆ.

    ತ್ರಿವಿಕ್ರಮ್ ಜೊತೆ ಮಹೇಶ್ ಮುಂದಿನ ಸಿನಿಮಾ

    ತ್ರಿವಿಕ್ರಮ್ ಜೊತೆ ಮಹೇಶ್ ಮುಂದಿನ ಸಿನಿಮಾ

    ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಆರಂಭ ಆಗುವ ಮುನ್ನ ಮತ್ತೊಂದು ಸಿನಿಮಾ ಸೆಟ್ಟೆರಲಿದೆ. ತ್ರಿವಿಕ್ರಮ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಆರಂಭ ಆಗುತ್ತಿದೆ. ಸದ್ಯ ಮಹೇಶ್ ಬಾಬು ಯುರೋಪ್ ಪ್ರವಾಸದಲ್ಲಿದ್ದು ಹಿಂತಿರುಗಿದ ಕೂಡಲೇ ತ್ರಿವಿಕ್ರಮ್ ಸಿನಿಮಾ ಸೆಟ್ಟೇರಲಿದೆ. ಅಷ್ಟರಲ್ಲೇ ರಾಜಮೌಳಿ ಕಥೆಯನ್ನು ಫೈನಲ್ ಮಾಡಲಿದ್ದು, ಸಿನಿಮಾಗೆ ತಯಾರಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

    English summary
    Rajamouli in confusion to Choose A Story For Mahesh Babu, Know More.
    Friday, June 3, 2022, 21:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X