ಮಗಳ ವಿಚ್ಛೇದನದ ತಲೆಬಿಸಿ ನಡುವೆ ಹೊಸ ಸಿನಿಮಾ ಘೋಷಿಸಿದ್ರಾ ರಜನಿಕಾಂತ್: ಈ ಸುದ್ದಿ ನಿಜವೇ?

ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬೀಸ್ಟ್ ನಿರ್ದೇಶಕನ ಸಿನಿಮಾದಲ್ಲಿ ರಜನಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ, ಇದೂವರೆಗೂ ರಜನಿಕಾಂತ್ ಆಗಲಿ, ಬೀಸ್ಟ್ ಸಿನಿಮಾ ನಿರ್ದೇಶಕ ಆಗಲಿ ಈ ಹೊಸ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ, ತಲೈವಾ ಹೊಸ ಸಿನಿಮಾ ಸೆಟ್ಟೇರುವುದು ಪಕ್ಕಾ ಎನ್ನುತ್ತಿವೆ ತಮಿಳು ಮಾಧ್ಯಮಗಳು.

ಇತ್ತೀಚೆಗೆ ರಜನಿಕಾಂತ್ ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ರಜನಿ ಮಗಳ ಸಂಸಾರ ಸರಿಪಡಿಸುವ ಆತುರದಲ್ಲಿದ್ದು, ಸಿನಿಮಾ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ ಎನ್ನಲಾಗಿತ್ತು. ಮಗಳ ದಾಂಪತ್ಯ ಕಲಹದಿಂದ ರಜನಿಕಾಂತ್ ನೊಂದಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಈ ಮಧ್ಯೆ ರಜನಿಯ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ದಳಪತಿ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನು ಸುದ್ದಿ ಹರಿದಾಡುತ್ತಿದೆ.

169ನೇ ಸಿನಿಮಾಗೆ ರಜನಿ ಗ್ರೀನ್ ಸಿಗ್ನಲ್

169ನೇ ಸಿನಿಮಾಗೆ ರಜನಿ ಗ್ರೀನ್ ಸಿಗ್ನಲ್

'ಅಣ್ಣಾತ್ತೆ' ಸಿನಿಮಾ ಬಿಡುಗಡೆಯಾದಾಗ, ಸೂಪರ್‌ಸ್ಟಾರ್ ರಜನಿಕಾಂತ್ ಕಾಲ ಮುಗೀತು. ಇನ್ನೇನಿದ್ರೂ ವಿಶ್ರಾಂತಿ ಪಡೆಯುವುದೇ ಉತ್ತಮ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಮೊದಲ ದಿನವೇ ಸಿನಿಮಾಗೆ 'ಅಣ್ಣಾತ್ತೆ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಆದರೆ, ಬಾಕ್ಸಾಫೀಸ್‌ನಲ್ಲಿ ಸಿನಿಮಾಗೆ ರಿಸಲ್ಟ್ ಬೇರೆನೇ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಅಣ್ಣಾತ್ತೆ ಚಿಂದಿ ಉಡಾಯಿಸಿಬಿಟ್ಟಿತ್ತು. ರಜನಿ ಮುಡಿಗೆ ಇನ್ನೊಂದು ಸೂಪರ್‌ ಹಿಟ್ ಸಿನಿಮಾ ಸೇರಿಕೊಂಡಿತ್ತು. ಇದೇ ಯಶಸ್ಸಿನ ಬೆನ್ನಲೇ ಬೀಸ್ಟ್ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ನೆಲ್ಸನ್ ಜೊತೆಗಿನ ಭಿನ್ನಾಬಿಪ್ರಾಯಕ್ಕೆ ಬ್ರೇಕ್

ನೆಲ್ಸನ್ ಜೊತೆಗಿನ ಭಿನ್ನಾಬಿಪ್ರಾಯಕ್ಕೆ ಬ್ರೇಕ್

ಈ ಹಿಂದೆ ರಜನಿಕಾಂತ್‌ಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಥೆ ಹೇಳಿದ್ದರಂತೆ. ಆದರೆ, ರಜನಿಗೆ ಈ ನಿರ್ದೇಶಕ ಕಥೆ ಇಷ್ಟ ಆಗಿರಲಿಲ್ಲ. ಕಥೆಯ ನಿರೂಪಣೆಯಲ್ಲಿ ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಇತ್ತಂತೆ. ಆದರೆ, ರಜನಿ ಅದೆಲ್ಲವನ್ನೂ ಬಿಟ್ಟು ನೆಲ್ಸನ್ ದಿಲೀಪ್ ಕುಮಾರ್ ಪ್ರಾಜೆಕ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತ ತಮಿಳು ಚಿತ್ರರಂಗ ಮಾತಾಡುತ್ತಿದೆ. ಈ ಹೊಸ ಕಾಂಬಿನೇಷನ್‌ ಸಿನಿಮಾ ಬೀಸ್ಟ್ ತೆರೆಕಂಡ ಬಳಿ ಸೆಟ್ಟೇರಲಿದೆ.

ಸನ್ ಪಿಕ್ಚರ್ಸ್ ಸಂಸ್ಥೆಯಿಂದ ಸಿನಿಮಾ ನಿರ್ಮಾಣ

ಸನ್ ಪಿಕ್ಚರ್ಸ್ ಸಂಸ್ಥೆಯಿಂದ ಸಿನಿಮಾ ನಿರ್ಮಾಣ

'ಅಣ್ಣಾತ್ತೆ' ಸಿನಿಮಾವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿತ್ತು. ಅದೇ ಸಂಸ್ಥೆ ರಜನಿಕಾಂತ್ ಮತ್ತೊಂದು ಸಿನಿಮಾ ನಿರ್ಮಿಸಲು ಮುಂದಾಗಿದ್ಯಂತೆ. ರಜನಿಕಾಂತ್ 169ನೇ ಸಿನಿಮಾ ಸೆಟ್ಟೇರಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ ಎನ್ನಲಾಗಿದೆ. ಈ ಸಿನಿಮಾಗೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದು, ಈ ವಿಷಯ ಕೇಳಿ ರಜನಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಶೀಘ್ರವೇ ಈ ನಿರೀಕ್ಷೆಯ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

ಬೀಸ್ಟ್ ಸಿನಿಮಾದಲ್ಲಿ ನೆಲ್ಸನ್ ಬ್ಯುಸಿ

ಬೀಸ್ಟ್ ಸಿನಿಮಾದಲ್ಲಿ ನೆಲ್ಸನ್ ಬ್ಯುಸಿ

'ದಳಪತಿ ವಿಜಯ್ ನಟಿಸುತ್ತಿರುವ 'ಬೀಸ್ಟ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಏಪ್ರಿಲ್ 14ಕ್ಕೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರಜನಿಕಾಂತ್ ಸಿನಿಮಾ ಬಗ್ಗೆ ಯೋಚನೆ ಮಾಡುವಷ್ಟು ಸಮಯವಿದೆಯಾ ಅನ್ನುವ ಅನುಮಾನವೂ ಇದೆ. ಆದರೆ, ಕೆಲವು ಮೂಲಗಳ ಪ್ರಕಾರ, ರಜನಿ ಮಗಳ ದಾಂಪತ್ಯ ಕಲಹದ ನೋವಿನಿಂದ ಹೊರಬಂದಿದ್ದು, ವಿಡಿಯೋ ಮೂಲಕ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

More from Filmibeat

English summary
Rajinikanth announced new movie with Beast director Nelson Dilipkumar after daughter divorce. After Annaatthe Rajini's 169 movie will take off this summer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X