ಆಧ್ಯಾತ್ಮದ ಕಡೆಗೆ ವಾಲಿದ ಐಶ್ವರ್ಯಾ ಮನಸ್ಸು: ರಜನಿ ಪುತ್ರಿ ಬಗ್ಗೆ ಆಪ್ತರು ಬಿಚ್ಚಿಟ್ಟ ಗುಟ್ಟೇನು?

ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ವಿಚ್ಛೇದನ ಇಂದು, ನಿನ್ನೆಯ ನಿರ್ಧಾರವಲ್ಲವೆಂದು ಆಪ್ತರು ಈಗಾಗಲೇ ಹೇಳಿದ್ದಾರೆ. ಕೆಲವು ವರ್ಷಗಳಿಂದಲೇ ಇಬ್ಬರೂ ಡಿವೋರ್ಸ್ ತೆಗೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು. ಇದೇ ವೇಳೆ ಇಬ್ಬರೂ ತಮ್ಮ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಲು ಯತ್ನಿಸಿದ್ದರು. ಅದು ಸಾಧ್ಯವಾಗದೇ ಹೋದಾಗ, ಇಬ್ಬರೂ ಈ ಸಂಕಷ್ಟದಿಂದ ಹೊರಬರಲು ಬೇರೆ ಮಾರ್ಗಗಳನ್ನು ಕಂಡುಕೊಂಡಿದ್ದರು. ಈ ಹಿಂದೆನೇ ಈ ಜೋಡಿ ವಿಚ್ಛೇದನದ ನಿರ್ಧಾರ ಘೋಷಿಸಬೇಕಿತ್ತು. ಆದರೆ, ರಜನಿಕಾಂತ್ ಮಧ್ಯಸ್ಥಿಕೆಯಿಂದ ಸರಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು ಎಂದು ಆಪ್ತ ಗೆಳೆಯೊಬ್ಬರು ಮಾಧ್ಯಮಗಳಿಗೆ ತಿಳಿದ್ದಾರೆ.

Recommended Video

ಮೊದಲಿನಿಂದಲೂ ಇತ್ತು ಧನುಷ್-ಐಶ್ವರ್ಯ ನಡುವೆ ಮನಸ್ತಾಪ!

ರಜನಿಕಾಂತ್ ಪುತ್ರಿ ತಂದೆಯಂತೆಯೇ ಕಳೆದ ಹಲವು ವರ್ಷಗಳಿಂದ ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದಾರೆ. ಯೋಗ ಇಂತಹ ವಿಷಯಗಳ ಕಡೆಗೆನೇ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ ಎಂಬುವುದನ್ನು ಇಬ್ಬರನ್ನೂ ಹತ್ತಿರದಿಂದ ಕಂಡಿರುವ ಆಪ್ತ ಗೆಳೆಯರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

 ಆಧ್ಯಾತ್ಮದ ಕಡೆ ಐಶ್ವರ್ಯಾ ಒಲವು

ಆಧ್ಯಾತ್ಮದ ಕಡೆ ಐಶ್ವರ್ಯಾ ಒಲವು

ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಧನುಷ್ ಇಬ್ಬರಿಗೆ ತಮ್ಮ ಬಗ್ಗೆ ಯೋಚನೆ ಮಾಡುವುದಕ್ಕೆ ಲಾಕ್‌ಡೌನ್ ಸಹಾಯ ಮಾಡಿತ್ತು. ಸದಾ ಕೆಲಸ ಅಂತಿದ್ದ ಧನುಷ್ ಮನೆಯಲ್ಲಿ ಇರಲೇ ಬೇಕಿತ್ತು. ಈ ವೇಳೆ ಇಬ್ಬರೂ ತಮ್ಮ ಮುಂದಿನ ನಡೆಯ ಬಗ್ಗೆ ಚಿಂತಿಸಿದ್ದರು. ಇಷ್ಟೊತ್ತಿಗಾಗಲೇ ಐಶ್ವರ್ಯಾ ಧನುಷ್‌ರಿಂದ ದೂರ ಉಳಿಯುವ ಬಗ್ಗೆ ಚಿಂತಿಸಿದ್ದರು. " ಕೆಲವು ವರ್ಷಗಳಿಂದ ಐಶ್ವರ್ಯಾ ಮನಸ್ಸು ಆಧ್ಯಾತ್ಮದ ಕಡೆ ವಾಲಿತ್ತು. ಹೀಗಾಗಿ ಕೌಟುಂಬಿಕ ಜೀವನವನ್ನು ಮುಂದುವರೆಸುವ ಬಗ್ಗೆ ಆಸಕ್ತಿಯಿರಲಿಲ್ಲ." ಆಪ್ತರು ಕೊಟ್ಟ ಹೇಳಿಕೆಯನ್ನು ಮಾಧ್ಯಮವೊಂದು ವರದಿ ಮಾಡಿದೆ.

 ಕೌಟುಂಬಿಕ ಜೀವನದ ಬಗ್ಗೆ ನಂಬಿಕೆ ಇಲ್ಲ

ಕೌಟುಂಬಿಕ ಜೀವನದ ಬಗ್ಗೆ ನಂಬಿಕೆ ಇಲ್ಲ

ತಾರೆಯರು ವಿಚ್ಚೇದನ ಅನ್ನುವುದು ಸಾವಿಗಿಂತ ದೊಡ್ಡ ನೋವು ನೀಡುವ ಪ್ರಕ್ರಿಯೆ ಎನ್ನುತ್ತಿದ್ದಾರೆ. ಇಷ್ಟೊಂದು ನೋವು ನೀಡುವ ಪ್ರಕ್ರಿಯೆಗೆ ಯಾಕೆ ಮುಂದಾಗಬೇಕು ಎನ್ನುವುದೇ ಎಲ್ಲರ ಪ್ರಶ್ನೆ. ಆದರೆ, ಹೊಂದಾಣಿಕೆ ಮೂಡದೇ ಇದ್ದಾಗ ವಿಚ್ಛೇದನ ಅನಿವಾರ್ಯ. ಮದುವೆ, ಕುಟುಂಬ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡ ಮೇಲೆ ಅದರಲ್ಲೇ ಮುಂದುವರೆಯುವುದರಲ್ಲಿ ಅರ್ಥವೇ ಇಲ್ಲ ಎನ್ನುತ್ತಾರೆ. ಅದೇ ನಂಬಿಕೆಯಲ್ಲೇ ಐಶ್ವರ್ಯಾ ಕೂಡ ಇದ್ದಾರೆ. " ಮದುವೆ ಬಳಿಕ ಕೌಟುಂಬಿಕ ಜೀವನವನ್ನು ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಲ್ಲವೆಂದು ನಂಬಿದ್ದಾರೆ." ಎಂದು ಧನುಷ್ ಹಾಗೂ ಐಶ್ವರ್ಯಾಗೆ ಹತ್ತಿರವಿರುವ ಆಪ್ತರು ಮಾಧ್ಯಮಕ್ಕೆ ತಿಳಿಸಿದ್ದಾರೆ.

 ಯೋಗ ಕಡೆ ಐಶ್ವರ್ಯಾ ಒಲವು

ಯೋಗ ಕಡೆ ಐಶ್ವರ್ಯಾ ಒಲವು

ಮನಸ್ಸು ಹಗುರವಾಗಿಟ್ಟುಕೊಳ್ಳುವುದಕ್ಕೆ ಐಶ್ವರ್ಯಾ ಯೋಗ ಮೊರೆ ಹೋಗಿದ್ದಾರೆ. ಅಲ್ಲದೆ ದಿನ ನಿತ್ಯ ವ್ಯಾಯಾಮ ಮಾಡುತ್ತಿದ್ದಾರೆ. ಜೊತೆ ಚಾರಿಟಬಲ್ ಟ್ರಸ್ಟ್‌ನಿಂದ ಕೆಲವು ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೀಗಾಗಿಯೇ ಧನುಷ್ ಹಾಗೂ ಐಶ್ವರ್ಯ ತಮ್ಮ ಇಬ್ಬರು ಗಂಡು ಮಕ್ಕಳು ಯಾತ್ರೆ ಹಾಗೂ ಲಿಂಗ ಭವಿಷ್ಯದ ಬಗ್ಗೆ ಅಷ್ಟೇ ಚಿಂತಿಸುತ್ತಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

ತಂದೆ ಜೊತೆ ಐಶ್ವರ್ಯಾ ಕೇದಾರನಾಥ ದರ್ಶನ

ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಹಲವು ವರ್ಷಗಳಿಂದ ಆಧ್ಯಾತ್ಮದ ಕಡೆ ಒಲವು ಬೆಳೆಸಿಕೊಂಡಿದ್ದಾರೆ. ಸಿನಿಮಾ ಮುಗಿದ ಕೂಡಲೇ ಆಗಾಗ ಹಿಮಾಲಯ, ಕೇದಾರನಾಥ ಅಂತ ಹೊರಟು ಬಿಡುತ್ತಾರೆ. ಕೆಲ ದಿನ ರಜನಿಕಾಂತ್ ಯಾರಿಗೂ ಗೊತ್ತಾಗದ ಹಾಗೇ ಧ್ಯಾನದಲ್ಲಿ ತೊಡಗುತ್ತಾರೆ. 2019ರಲ್ಲಿ ತಂದೆ ಜೊತೆ ಪುತ್ರಿ ಐಶ್ವರ್ಯಾ ಕೂಡ ಕೇದಾರನಾಥ ದರ್ಶನ ಪಡೆದಿದ್ದರು. ರಜನಿಕಾಂತ್ ಮಹಾ ಅವತಾರ್ ಬಾಬಾ ಅನುಯಾಯಿ ಆಗಿದ್ದರಿಂದ ಅಲ್ಲಿನ ಗುಹೆಯಲ್ಲಿ ಧ್ಯಾನಕ್ಕೆ ಕೂರುತ್ತಾರೆ. 2019ರಲ್ಲೂ ರಜನಿಯ ಆಧ್ಯಾತ್ಮದ ಜರ್ನಿಯಲ್ಲಿ ಐಶ್ವರ್ಯಾ ಕೂಡ ಭಾಗಿಯಾಗಿದ್ದರು.

More from Filmibeat

English summary
Rajinikanth Daughter Aishwarya developed a spiritual bent of mind. Staying married may no longer be a necessity or priority for her in this phase.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X