ಹೊಂಬಾಳೆ ಫಿಲ್ಮ್ಸ್ ಜೊತೆ ಸಂಬಂಧ ಮುರಿದುಕೊಂಡ್ರಾ ರಕ್ಷಿತ್ ಶೆಟ್ಟಿ?'ರಿಚರ್ಡ್ ಆಂಟೋನಿ' ಕಥೆಯೇನು?

ರಕ್ಷಿತ್ ಶೆಟ್ಟಿ ಸಿನಿಮಾ 'ಸಪ್ತಸಾಗರದಾಚೆ ಎಲ್ಲೋ' ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಸೇರಿದೆ. ಥಿಯೇಟರ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗದೇ ಹೋದರೂ, ಓಟಿಟಿಗೆ ಬಂದಾಗ ವೀಕ್ಷಕರು ಮೆಚ್ಚಿಕೊಂಡಾಡಿದ್ದರು. ಆದರೆ, ಇದು ಕೇವಲ ರಕ್ಷಿತ್ ಇಮೇಜ್ ಬಿಲ್ಡ್ ಮಾಡುವ ಸಿನಿಮಾ ಆಗಿಬಿಡ್ತು.

'ಸಪ್ತಸಾಗರದಾಚೆ ಎಲ್ಲೋ' ಅಂತಹ ಕ್ಲಾಸ್ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟೋನಿ' ಕಡೆ ಗಮನ ಹರಿಸಿದ್ದಾರೆ. ಇದು ಪಕ್ಕಾ ಮಾಸ್, ಕಮರ್ಷಿಯಲ್ ಸಿನಿಮಾ. ಈ ಸಿನಿಮಾ ಅನೌನ್ಸ್ ಮಾಡಿದಾಗಲೇ ಕ್ರೇಜ್ ಶುರುವಾಗಿರೋದಂತೂ ನಿಜ. ಅದಕ್ಕೆ ಮೂರು ಕಾರಣವಿತ್ತು.

 Rakshit Shetty is not doing Richard Anthony for Hombale Films.

ಮೊದಲನೆಯದು 'ರಿಚರ್ಡ್ ಆಂಟೋನಿ' ಈ ಹಿಂದೆ ಬಂದಿದ್ದ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಸಿನಿಮಾದ ಸೀಕ್ವೆಲ್. ಎರಡನೆಯದು ರಕ್ಷಿತ್ ಶೆಟ್ಟಿ ನಿರ್ದೇಶನ. ಮೂರನೆಯದ್ದು ಹೊಂಬಾಳೆ ಫಿಲ್ಮ್ಸ್. ಒಂದು ಕ್ರಿಯೇಟಿವ್ ಟೀಮ್‌ಗೆ ಹೊಂಬಾಳೆ ಫಿಲ್ಮ್ಸ್ ಅಂತಹ ನಿರ್ಮಾಣ ಸಂಸ್ಥೆ ಸಿಕ್ಕರೆ ಆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟಕ್ಕೆ ಆರಾಮಾಗಿ ರೀಚ್ ಆಗುತ್ತೆ. ಹೀಗಾಗಿ 'ರಿಚರ್ಟ್ ಆಂಟೋನಿ' ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಈ ಹಿಂದೆ 'ರಿಚರ್ಡ್ ಆಂಟೋನಿ' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವುದಾಗಿ ಅನೌನ್ಸ್ ಆಗಿತ್ತು. ರಕ್ಷಿತ್ ಶೆಟ್ಟಿ ಕೂಡ ಫುಲ್ ಸ್ವಿಂಗ್‌ನಲ್ಲಿ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಸಿನಿಮಾದ ಸ್ಕ್ರಿಪ್ಟ್ ಲಾಕ್ ಮಾಡುವುದಕ್ಕೆ ಕೆಲವು ದಿನಗಳ ಕಾಲ ಯುಎಸ್‌ಗೆ ಹೋಗಿದ್ದರು. ಇನ್ನೇನು 'ಸಪ್ತಸಾಗರದಾಚೆ ಎಲ್ಲೋ' ರಿಲೀಸ್ ಆಗುತ್ತಿದ್ದಂತೆ 'ರಿಚರ್ಟ್ ಆಂಟೋನಿ' ಆರಂಭ ಆಗಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಇದೂವರೆಗೂ ರಕ್ಷಿತ್ ಶೆಟ್ಟಿ ಚಿಕ್ಕದೊಂದು ಸುಳಿವನ್ನೂ ಕೊಟ್ಟಿಲ್ಲ.

ಈಗ ರಕ್ಷಿತ್ ಶೆಟ್ಟಿಯ 'ರಿಚರ್ಡ್ ಆಂಟೋನಿ'ಯನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರ ಒಪ್ಪಂದ ಮುರಿದು ಬಿದ್ದಿದೆ. ಈಗಾಗಲೇ ಸಿನಿಮಾಗಾಗಿ ನೀಡಿದ ಅಡ್ವಾನ್ಸ್ ಹಣವನ್ನು ಹೊಂಬಾಳೆಗೆ ರಕ್ಷಿತ್ ಶೆಟ್ಟಿ ಹಿಂತಿರುಗುತ್ತಿದ್ದಾರೆ ಅನ್ನೋ ಮಾತು ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ರಕ್ಷಿತ್ ಶೆಟ್ಟಿ ಆಗಲಿ, ಹೊಂಬಾಳೆ ಫಿಲ್ಮ್ಸ್ ಆಗಲಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

 Rakshit Shetty is not doing Richard Anthony for Hombale Films.

ಇನ್ನೊಂದು ಮೂಲಗಳ ಪ್ರಕಾರ, 'ರಿಚರ್ಡ್ ಆಂಟೋನಿ' ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮ ಸಂಸ್ಥೆಯಿಂದಲೇ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ರಕ್ಷಿತ್ ಶೆಟ್ಟಿ ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಏಪ್ರಿಲ್ ಹೊತ್ತಿಗೆ ಸಿನಿಮಾ ಸೆಟ್ಟೇರಲಿದೆ. ಸುಮಾರು ಒಂದು ವರ್ಷಗಳ ಕಾಲ ಸಿನಿಮಾದ ಕೆಲಸಗಳು ನಡೆಯಲಿದ್ದು, 2025, ಏಪ್ರಿಲ್ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.

ಒಂದ್ಮೇಲೆ, ಗಾಂಧಿನಗರದ ಮಂದಿ ಹೇಳುತ್ತಿರುವ ಮಾತು ನಿಜವೇ ಆಗಿದ್ದರೆ, 'ರಿಚರ್ಡ್ ಆಂಟೋನಿ'ಯನ್ನು ಹೊಂಬಾಳೆ ಫಿಲ್ಮ್ಸ್ ಯಾಕೆ ನಿರ್ಮಾಣ ಮಾಡುತ್ತಿಲ್ಲ? ರಕ್ಷಿತ್ ಶೆಟ್ಟಿ ದಿಢೀರನೇ ಹೊಂಬಾಳೆಯಿಂದ ಹೊರಬಂದಿದ್ದು ಏಕೆ? ತಮ್ಮದೇ ಸಂಸ್ಥೆಯಲ್ಲಿ ನಿರ್ಮಾಣ ಮಾಡೋಕೆ ಮುಂದಾಗಿರೋದರ ಲೆಕ್ಕಾಚಾರವೇನು? ಇಂತಹದ್ದೇ ಒಂದಿಷ್ಟು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅಧಿಕೃತವಾಗಿ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟೋನಿ' ಬಗ್ಗೆ ಮಾಹಿತಿ ನೀಡಿದಾಗಲೇ ಈ ಬಗ್ಗೆ ಸ್ಪಷ್ಟತೆ ಸಿಗಬಹುದು.

ಸದ್ಯ ಹೊಂಬಾಳೆ ಫಿಲ್ಮ್ಸ್ 'ಸಲಾರ್' ಯಶಸ್ಸನ್ನು ಎಂಜಾಯ್ ಮಾಡುತ್ತಿದೆ. ಹಾಗೇ 'ಸಲಾರ್ 2' ನಿರ್ಮಾಣ ಮಾಡುವುದಕ್ಕೆ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಕೀರ್ತಿ ಸುರೇಶ್ ಅಭಿನಯದ 'ರಘುತಾತ' ಸಿನಿಮಾ ಕೂಡ ರಿಲೀಸ್ ಹೊಸ್ತಿಲಲ್ಲಿ ಇದೆ. ಇತ್ತ ರಕ್ಷಿತ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ' ರಿಲೀಸ್ ಬ್ಯುಸಿಯಾಗಿದ್ದಾರೆ.

More from Filmibeat

English summary
Rakshit Shetty came out of Hombale Films:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X