'ಗಾಡ್‌ಫಾದರ್' ಯಶಸ್ಸಿನ ಬಳಿಕ ಮತ್ತೊಂದು ಮಲಯಾಳಂ ಸಿನಿಮಾ ಮೇಲೆ ಚಿರಂಜೀವಿ ಕಣ್ಣು?
'ಆಚಾರ್ಯ' ಸೋಲಿನ ಬಳಿಕ ಮೆಗಾಸ್ಟಾರ್ ಚಿರಂಜೀವಿ 'ಗಾಡ್‌ಫಾದರ್' ಸಿನಿಮಾ ರಿಲೀಸ್ ಆಗಿದ್ದು ಗೊತ್ತೇ ಇದೆ. 'ಆಚಾರ್ಯ' ಹೀನಾಯ ಸೋಲಿನ ಬಳಿಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಗೆಲುವಿಗಾಗಿ ರಿಮೇಕ್ ಮೊರೆ ಹೋಗಿದ್ದ ಮೆಗಾಸ್ಟಾರ್‌ಗೆ ಸಕ್ಸಸ್ ಸಿಕ್ಕಿದೆ.
ಮೋಹನ್ ಲಾಲ್ ಅಭಿನಯದ 'ಲೂಸಿಫರ್' ಸಿನಿಮಾದ ರಿಮೇಕ್ ರೈಟ್ಸ್ ಖರೀದಿಸಿದ್ದರು. ಅದನ್ನೇ ತೆಲುಗು ಆಡಿಯನ್ಸ್‌ಗೆ ತಕ್ಕಂತೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು 'ಗಾಡ್‌ಫಾದರ್' ಮಾಡಿದ್ದರು. ಆ ಸಿನಿಮಾ ಈಗ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಟಾಲಿವುಡ್‌ನಲ್ಲಿ ಗಾಡ್‌ಫಾದರ್ ಅಬ್ಬರ
ಮೆಗಾಸ್ಟಾರ್ ಚಿರಂಜೀವಿ ಕೊನೆಗೂ ಗೆಲುವು ಸಿಕ್ಕಿದೆ. ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದರೋ ಮೆಗಾಸ್ಟಾರ್ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ದಸರಾ ಹಬ್ಬದಂದೇ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದೆ. ಎರಡು ದಿನಗಳಲ್ಲಿ ಮತ್ತೆ ಮೆಗಾಸ್ಟಾರ್ ಚಿರಂಜೀವಿ ಖದರ್ ಏನು ಅನ್ನೋದನ್ನು ಈ ಸಿನಿಮಾ ತೋರಿಸಿಕೊಟ್ಟಿದೆ. ಅದಕ್ಕೆ ಸಾಕ್ಷಿನೇ ಬಾಕ್ಸಾಫೀಸ್ ರಿಪೋರ್ಟ್.

ಎರಡು ದಿನದ ಕಲೆಕ್ಷನ್ ಎಷ್ಟು?
'ಗಾಡ್‌ಫಾದರ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಸುಮಾರು 38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ ಸುಮಾರು 31 ಕೋಟಿ ರೂ.ಗೂ ಅಧಿಕ ಹಣವನ್ನ ಕಲೆಕ್ಷನ್ ಮಾಡಿದೆ. ಒಟ್ಟು ಎರಡು ದಿನಗಳಲ್ಲಿ ಈ ಸಿನಿಮಾ 69.12 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ವೀಕೆಂಡ್‌ನಲ್ಲಿ ಸಿನಿಮಾ ವಿಶ್ವದಾದ್ಯಂತ ಸುಮಾರು ನೂರು ಕೋಟಿಯನ್ನು ಕಲೆಹಾಕಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ಚಿರುಗಾಗಿ ಮತ್ತೊಂದು ರಿಮೇಕ್ ಸಿನಿಮಾ?
'ಗಾಡ್‌ಫಾದರ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿಗಾಗಿ ರಾಮ್ ಚರಣ್ ತೇಜಾ ಮತ್ತೊಂದು ಮಲಯಾಳಂ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಟಾಲಿವುಡ್ ಮೂಲಗಳ ಪ್ರಕಾರ, ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ತೇಜಾ ಮಮ್ಮುಟ್ಟಿ ಅಭಿನಯದ 'ಭೀಷ್ಮ ಪರ್ವಂ' ಸಿನಿಮಾದ ರಿಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. 'ಗಾಡ್‌ಫಾದರ್' ಜೊತೆಗೀಗ 'ಭೀಷ್ಮ ಪರ್ವಂ' ಸಿನಿಮಾ ಕೂಡ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಗ್ಯಾಂಗ್‌ಸ್ಟರ್ ಸಿನಿಮಾ 'ಭೀಷ್ಮ ಪರ್ವಂ'
ಮಮ್ಮುಟ್ಟಿ ಅಭಿನಯದ 'ಭೀಷ್ಮ ಪರ್ವಂ' ಒಂದು ಗ್ಯಾಂಗ್‌ಸ್ಟರ್ ಸಿನಿಮಾ. ಎರಡು ತುಂಬು ಕುಟುಂಬಗಳ ನಡುವಿನ ಕಿತ್ತಾಟವನ್ನು ಸಿನಿಮಾ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಮಲಯಾಳಂ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಸಿನಿಮಾ ಎಂದು ಸಾಬೀತಾಗಿತ್ತು. ಈಗ 'ಗಾಡ್‌ಫಾದರ್' ಸಿನಿಮಾ ಗೆಲ್ಲುತ್ತಿದ್ದಂತೆ 'ಭೀಷ್ಮ ಪರ್ವಂ' ಸಿನಿಮಾ ಕಡೆ ಮೆಗಾ ಫ್ಯಾಮಿಲಿ ಒಲವು ತೋರಿದೆ ಅನ್ನೋದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ.


Click it and Unblock the Notifications











