»   » ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!

ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!

Posted By: ಸೋನು ಗೌಡ
Subscribe to Filmibeat Kannada

ಬೆಂಗಳೂರಿನ ಭೂಗತ ಜಗತ್ತಿನ ಬಗ್ಗೆ ಖ್ಯಾತ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸದ್ಯದಲ್ಲೇ ಒಂದು ಚಿತ್ರ ಮಾಡಲಿದ್ದಾರೆ ಅಂತ ನಾವು ನಿಮಗೆ ಇದೇ ಫಿಲ್ಮಿ ಬೀಟಲ್ಲಿ ಹೇಳಿದ್ವಿ ತಾನೇ.

ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಗಾಂಧಿನಗರದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ, ಅದೇನಪ್ಪಾ ಅಂದ್ರೆ ಸ್ಯಾಂಡಲ್ ವುಡ್ ನ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ರಾಮ್ ಗೋಪಾಲ್ ವರ್ಮಾ ಅವರ ಅಂಡರ್ ವರ್ಲ್ಡ್ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ ಅಂತ ಎಲ್ಲೆಡೆ ಊಹಾಪೋಹಗಳು ಹರಿದಾಡುತ್ತಿದೆ. [ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ]

Ram Gopal Varma to direct Kichcha Sudeep Kannada film Appa

ಈಗಾಗಲೇ ಶಿವರಾಜ್ ಕುಮಾರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ವರ್ಮಾ ಅವರು ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಮುತ್ತಪ್ಪ ರೈ ಅವರ ಬಗ್ಗೆ ರಾಮ್ ಗೋಪಾಲ್ ವರ್ಮಾ ಚಿತ್ರ ಮಾಡುತ್ತಿದ್ದು, ಅದಕ್ಕೆ 'ಅಪ್ಪ' ಅಂತ ನಾಮಕರಣ ಮಾಡಲಿದ್ದೇನೆ, ಎಂದು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಹಂಚಿಕೊಂಡಿದ್ದರು.

ಇದೀಗ ರಾಮ್ ಗೋಪಾಲ್ ವರ್ಮಾ ಅವರ ಈ ಚಿತ್ರಕ್ಕೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಕಿಚ್ಚ ಸುದೀಪ್ ಅವರನ್ನು ಹಾಕಿಕೊಳ್ಳುವ ಪ್ಲಾನ್ ಮಾಡಿದ್ದಾರಂತೆ ಆದರೆ ಇದಕ್ಕೆ ಸುದೀಪ್ ಒಪ್ಪಿಕೊಳ್ಳಬಹುದೇ ಅನ್ನೋದು ಮುಂದಿನ ದಿನಗಳಲ್ಲಿ ನೋಡಬೇಕಿದೆ.


ಈ ಮೊದಲು ಕಿಚ್ಚ ಸುದೀಪ್ ವರ್ಮಾ ಅವರ 'ಫೂಂಕ್' ಭಾಗ 1', 'ಭಾಗ 2', ಹಾಗೂ 'ರಕ್ತಚರಿತ್ರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದೀಗ ಮತ್ತೆ ವರ್ಮಾ ಅವರ ಈ ಆಫರ್ ಒಪ್ಪಿಕೊಳ್ಳುತ್ತಾರೋ ಅಥವಾ ರಿಜೆಕ್ಟ್ ಮಾಡಲಿದ್ದಾರೋ ಅಂತ ಇನ್ನೂ ಗೊತ್ತಾಗಬೇಕಿದೆ.

ಸದ್ಯಕ್ಕೆ ಕನ್ನಡದ ಕೆಲವು ರಿಯಾಲಿಟಿ ಶೋ ಗಳನ್ನು ನಡೆಸಿಕೊಡುವ ಜೊತೆಗೆ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿರುವ ನಮ್ಮ ಕಿಚ್ಚ ಸುದೀಪ್ ಈ ಆಫರ್ ಗೆ ಏನು ಹೇಳಲಿದ್ದಾರೆ ಅಂತ ಕಾದು ನೋಡಬೇಕಿದೆ. ಈಗಾಗಲೇ ಈ ಬಗ್ಗೆ ಸುದೀಪ್ ಫ್ಯಾನ್ಸ್ ತಮ್ಮ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಲ್ಲಿ ಚರ್ಚೆ ಕೂಡ ನಡೆಸುತ್ತಿದ್ದಾರೆ.

English summary
Ram Gopal Varma to direct Kichcha Sudeep which he announced recently after meeting with former Under world Don Muthappa Rai. Sudeep likely to play lead role in the Appa movie based on Rai's real life story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada