»   » ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ

ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬೆಂಗಳೂರು ಭೂಗತ ಜಗತ್ತಿನ ಕಥೆ ಕೇಳಿ ಬೆಚ್ಚಿದ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, 'ಬೆಂಗಳೂರಿನ ಅಂಡರ್ ವರ್ಲ್ಡ್(ಬಿ ಕಂಪನಿ) ಮುಂದೆ ನಾನು ತೆಗೆದ 'ಡಿ' ಕಂಪನಿ ಸಿನಿಮಾ ಯಾವುದಕ್ಕೂ ಸಮವಾಗಿಲ್ಲ.

ಬೆಂಗಳೂರಿನ ಕರಾಳ ಜಗತ್ತಿನ ಜಾಲ ದುಬೈ, ಮುಂಬೈ ಸೇರಿದಂತೆ ಅನೇಕ ಕಡೆ ಚಾಚಿಕೊಂಡಿದೆ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Ram Gopal Varma

ಬೆಂಗಳೂರಿನ ಭೂಗತ ಜಗತ್ತು ಅತಿ ದೊಡ್ಡದಾಗಿದ್ದು, ಇದನ್ನು ಭಾರತದ ಅಂಡರ್ ವರ್ಲ್ಡ್ ಎಂದು ಕರೆದರೆ ತಪ್ಪಾಗಲಾರದು. ನಾನು ಮಂಗಳವಾರ ಭೂಗತ ಜಗತ್ತಿನ ಕಥೆ ಕೇಳಿ ನಿಜಕ್ಕೂ ಥ್ರಿಲ್ ಆಗಿದ್ದೇನೆ. ಕನ್ನಡ ಸಿನಿಮಾವೊಂದನ್ನು ಇಷ್ಟರಲ್ಲೇ ಘೋಷಣೆ ಮಾಡುತ್ತೇನೆ.

ರೈ ನಿಜವಾದ ಗಾಡ್ ಫಾದರ್: ಮಾರಿಯೋ ಫ್ಯೂಜೋ ಬರೆದ ಕಾದಂಬರಿ ಇಂಗ್ಲೀಷ್ ನಲ್ಲಿ ಗಾಡ್ ಫಾದರ್ ಚಿತ್ರವಾಗಿ ಜನಪ್ರಿಯತೆ ಗಳಿಸಿರುವುದು ನಿಮಗೆ ತಿಳಿದಿದೆ.

ಗಾಡ್ ಫಾದರ್ ಎಂದು ಕಾಲ್ಪನಿಕ ಪಾತ್ರ ಎಂದೇ ನಾನು ಭಾವಿಸಿದ್ದೆ. ಅದರೆ, ಮುತ್ತಪ್ಪ ರೈ ಅವರನ್ನು ಭೇಟಿ ಮಾಡಿದ ಮೇಲೆ ಅವರೇ ನಿಜವಾದ ಗಾಡ್ ಫಾದರ್, ಬರೀ ಗಾಡ್ ಫಾದರ್ ಅಲ್ಲ ಗಾಡ್ ಫಾದರ್ ಗಳ 'ಅಪ್ಪ' ಎಂದಿದ್ದಾರೆ ಎಂದು ವರ್ಮಾ ಹೊಗಳಿದ್ದಾರೆ.

ಅಂದ ಹಾಗೆ, ವರ್ಮಾ ಅವರ ಹೊಸ ಚಿತ್ರ ಬೆಂಗಳೂರಿನ ಭೂಗತ ಜಗತ್ತಿನ ಕಥೆ ಹೊಂದಿದ್ದು, ಇದಕ್ಕೆ 'ಅಪ್ಪ' ಎಂದು ಹೆಸರಿಡಲಾಗಿದೆಯಂತೆ.

ಚಿತ್ರದ ಟ್ಯಾಗ್ ಲೈನ್ The Father of all Godfathers ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

English summary
Ram Gopal Varma eyes on Bengaluru Underworld announces that he is set to launch a new movie on Bangalore Underworld. He called former Underworld Don Muthappa Rai as real and Father of all Godfathers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada