ಆರ್‌ಜಿವಿ ಸಿನಿಮಾದಲ್ಲಿ 'ಪವನ್ ಕಲ್ಯಾಣ್' ಆಗಲು ಭಯಪಡುತ್ತಿದ್ದಾರಂತೆ ಈ ನಟ!

ಖ್ಯಾತ ನಟ ಪವನ್ ಕಲ್ಯಾಣ್ ಅವರನ್ನು ಅಣಕಿಸುವಂತಹ 'ಸೂಪರ್ ಸ್ಟಾರ್' ಎಂಬ ಸಿನಿಮಾ ಮಾಡಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊರಟಿದ್ದಾರೆ. ಈ ಸುದ್ದಿ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕೆರಳಿಸಿದೆ. ವಿವಾದ ಪ್ರಿಯ ರಾಮ್ ಗೋಪಾಲ್ ವರ್ಮಾ ತಮ್ಮ ವಿರುದ್ಧದ ಟೀಕೆ ಮತ್ತು ಆರೋಪಗಳಿಗೆ ತಲೆಕೆಡಿಸಿಕೊಂಡವರಲ್ಲ. ಕೊರೊನಾ ವೈರಸ್ ಹಾವಳಿಯ ನಡುವೆಯೂ ಹೊಸ ನಿರ್ದೇಶಕರ ಸಿನಿಮಾಗಳಿಗೆ ಅವಕಾಶ ನೀಡುತ್ತಾ, ಒಟಿಟಿ ಪ್ಲಾಟ್‌ಫಾರ್ಮ್‌ಗೆ ಸೂಕ್ತವಾಗುವ ಕಂಟೆಂಟ್‌ಗಳುಳ್ಳ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಪವನ್ ಕಲ್ಯಾಣ್ ಅವರ ಹೆಸರನ್ನು ಉಲ್ಲೇಖಿಸದೆಯೇ ಪರೋಕ್ಷವಾಗಿ ಆರ್‌ಜಿವಿ ಅವರನ್ನು ತಿವಿದಿದ್ದರು. 'ಪವರ್ ಸ್ಟಾರ್' ಹೆಸರಿನ ಸಿನಿಮಾದಲ್ಲಿ ಪಿ.ಕೆ, ಎಂ.ಎಸ್., ಎನ್‌ಬಿ, ಟಿಎಸ್, ರಷ್ಯಾದ ಮಹಿಳೆ, ನಾಲ್ಕು ಮಕ್ಕಳು, ಎಂಟು ಎಮ್ಮೆಗಳು ಮತ್ತು ಆರ್‌ಜಿವಿ ನಟಿಸಲಿದ್ದಾರೆ. ಆರ್‌ಜಿವಿಯ ಪವರ್ ಸ್ಟಾರ್ ಚಿತ್ರದ ಪಾತ್ರಗಳನ್ನು ಅರ್ಥ ಮಾಡಿಕೊಂಡವರಿಗೆ ಯಾವ ಪ್ರಶಸ್ತಿಯನ್ನೂ ನೀಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಮುಂದೆ ಓದಿ...

ಮುಂದಿನ ವಾರ ಚಿತ್ರೀಕರಣ

ಮುಂದಿನ ವಾರ ಚಿತ್ರೀಕರಣ

ಪವನ್ ಕಲ್ಯಾಣ್ ಅವರ ಕುರಿತಾದ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಆರ್‌ಜಿವಿ ತೊಡಗಿಸಿಕೊಂಡಿದ್ದಾರೆ. ಮುಂದಿನ ವಾರವೇ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೈದರಾಬಾದ್‌ನ ಹೊರವಲಯದಲ್ಲಿ ಇಡೀ ಚಿತ್ರೀಕರಣ ನಡೆಯಲಿದ್ದು, ಒಂದು ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಜನ್ಮದಿನದಂದು ಬಿಡುಗಡೆ

ಪವನ್ ಕಲ್ಯಾಣ್ ಜನ್ಮದಿನದಂದು ಬಿಡುಗಡೆ

ಸೆಪ್ಟೆಂಬರ್ 2ರಂದು ಪವನ್ ಕಲ್ಯಾಣ್ ಜನ್ಮದಿನವಿದ್ದು, ಅದೇ ದಿನ ಸಿನಿಮಾ ಬಿಡುಗಡೆ ಮಾಡಲು ಆರ್‌ಜಿವಿ ಬಯಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಪವನ್ ಕಲ್ಯಾಣ್ ಪಾತ್ರದಲ್ಲಿ ನಟಿಸುವ ಪಾತ್ರಧಾರಿಯ ವಿಡಿಯೋವನ್ನು ಇತ್ತೀಚೆಗೆ ಅವರು ಬಿಡುಗಡೆ ಮಾಡಿದ್ದರು. ಅದರಲ್ಲಿದ್ದ ವ್ಯಕ್ತಿ ಪವನ್ ಕಲ್ಯಾಣ್ ಅವರನ್ನೇ ಹೋಲುತ್ತಿದ್ದರು. 'ಪವರ್ ಸ್ಟಾರ್' ಚಿತ್ರದ ನಮ್ಮ ನಟ. ನಮ್ಮ ಕಚೇರಿಗೆ ಭೇಟಿ ನೀಡಿದ್ದಾಗ ತೆಗೆದ ವಿಡಿಯೋ. ಇದು ಯಾವುದೇ ವ್ಯಕ್ತಿಗೆ ಹೋಲಿಕೆಯಾದರೆ ಅದು ಆಕಸ್ಮಿಕವಾಗಿ ಕಾಕತಾಳೀಯ ಮತ್ತು ಉದ್ದೇಶಪೂರ್ವಕವಾಗಿ ಉದ್ದೇಶಪೂರ್ವಕವಲ್ಲ ಎಂದು ವಿಚಿತ್ರವಾಗಿ ಹೇಳಿದ್ದರು.

ನಟಿಸಲು ಹಿಂಜರಿಕೆ

ನಟಿಸಲು ಹಿಂಜರಿಕೆ

ಆದರೆ, ಸದ್ಯದ ಬೆಳವಣಿಗೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಹೋಲುವ ವ್ಯಕ್ತಿ ಈ ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರ ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಈಗಾಗಲೇ ಆಕ್ರೋಶ ಮೂಡಿಸಿದೆ. ಒಂದು ವೇಳೆ ತಮ್ಮ ವೈಯಕ್ತಿಕ ಮಾಹಿತಿ ಬಹಿರಂಗವಾದರೆ ತಮಗೆ ಅಪಾಯವಾಗಲಿದೆ ಎಂಬ ಭಯ ಅವರಲ್ಲಿ ಮೂಡಿದೆ. ಹೀಗಾಗಿ ಸಿನಿಮಾಕ್ಕೆ ಸಹಿ ಹಾಕಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ಅವರ ಮೇಲಾಣೆ ನನಗ ಗೊತ್ತಿಲ್ಲ!

ಅವರ ಮೇಲಾಣೆ ನನಗ ಗೊತ್ತಿಲ್ಲ!

ಪವನ್ ಕಲ್ಯಾಣ್ ತಮ್ಮ 'ಕಾಪು ನೇಸ್ತಮ್' ಚಿತ್ರ ಪ್ರಕಟಿಸಿದ ದಿನವೇ ನನ್ನ 'ಪವರ್ ಸ್ಟಾರ್' ಚಿತ್ರದ ಘೋಷಣೆ ಕೇವಲ ಆಕಸ್ಮಿಕ. ನನ್ನ ಕಡೆಯಿಂದ ಯಾವುದೇ ಸಂಚು ಇಲ್ಲ. 'ಕಾಪು ನೇಸ್ತಮ್' ಬಗ್ಗೆ ನನಗೆ ಏನೂ ತಿಳಿದಿಲ್ಲ. ಅವರಿಗೆ 'ಪವರ್ ಸ್ಟಾರ್' ಬಗ್ಗೆಯೂ ಏನೂ ತಿಳಿದಿಲ್ಲ ಎಂದು ಭರವಸೆ ಇದೆ. ನನ್ನನ್ನು ಸೇರಿದಂತೆ ಅವರ ಎಲ್ಲ ಅಭಿಮಾನಿಗಳ ಮೇಲಾಣೆ ಎಂದು ಆರ್‌ಜಿವಿ ಮತ್ತೊಂದು ಹೇಳಿಕೆ ನೀಡಿದ್ದಾರೆ.

More from Filmibeat

English summary
Director Ram Gopal Varma wants to release his Power Star movie on Pawan Kalyan's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X