'ಪ್ರೇಮಂ' ಬ್ಯೂಟಿ ಅಲ್ಲ ಸೀತೆ.. ಜಾಹ್ನವಿ ಕಪೂರ್;'ರಾಮಾಯಣ' ಸಾಯಿ ಪಲ್ಲವಿಯನ್ನು ಕೈಬಿಟ್ಟಿದ್ದೇಕೆ?
ಈ ವರ್ಷ ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ 'ರಾಮಾಯಣ'. ನಿರ್ದೇಶಕ ನಿತೇಶ್ ತಿವಾರಿಯ ಡ್ರೀಮ್ ಪ್ರಾಜೆಕ್ಟ್ ಇದು. ಇವರು ಬಾಕ್ಸಾಫೀಸ್‌ನಲ್ಲಿ ಸರ್ವಕಾಲಿಕ ದಾಖಲೆ ಬರೆದ 'ದಂಗಲ್' ಅಂತಹ ಸಿನಿಮಾ ಕೊಟ್ಟಿರೋ ನಿರ್ದೇಶಕರು. ಹೀಗಾಗಿ ಅತ್ಯಂತ ದುಬಾರಿ ಪೌರಾಣಿಕ ಸಿನಿಮಾ ಬಗ್ಗೆ ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದೆ.
ಕನ್ನಡಿಗರೂ ಕೂಡ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್. ಇದೇ 'ರಾಮಾಯಣ' ಸಿನಿಮಾದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಹಲವು ದಿನಗಳಿಂದ ಸುದ್ದಿ ಓಡಾಡುತ್ತಲೇ ಇದೆ. ಆದರೆ, ಈ ಬಗ್ಗೆ ಇನ್ನೂ ಚಿತ್ರತಂಡ ಆಗಲಿ, ಯಶ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಯಶ್ ಫ್ಯಾನ್ಸ್ ಇನ್ನೂ ಗೊಂದಲದಲ್ಲೇ ಇದ್ದಾರೆ.

'ರಾಮಾಯಣ' ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಪ್ರತಿಯೊಂದು ಪಾತ್ರವನ್ನೂ ಅಳೆದು ತೂಗಿ ಆಯ್ಕೆ ಮಾಡಬೇಕಿದೆ. ಸ್ವಲ್ಪ ಯಡವಟ್ಟು ಆದರೂ, 'ಆದಿಪುರುಷ್'ಗೆ ಬಂದ ಪರಿಸ್ಥಿತಿಯೇ ಈ ಸಿನಿಮಾಗೂ ಬಂದು ಬಿಡುತ್ತೆ. ಹೀಗಾಗಿ ನಿರ್ದೇಶಕ ನಿತೇಶ್ ತಿವಾರಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಆದ್ರೀಗ ಸೀತೆಯ ಪಾತ್ರಕ್ಕೆ ಬಾಲಿವುಡ್ ನಟಿಯನ್ನೇ ಆಯ್ಕೆ ಮಾಡಿರುವ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಈ ಬಗ್ಗೆ ಸಾಯಿ ಪಲ್ಲವಿಯ ಹಾರ್ಡ್ ಕೋರ್ ಫ್ಯಾನ್ಸ್‌ಗೆ ನಿರಾಸೆ ಆಗಿದೆ.
ಈ ಮೊದಲು 'ರಾಮಾಯಣ' ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆ ಆಗಿರುವ ಬಗ್ಗೆ ವರದಿಗಳಾಗಿದ್ದವು. ಆದ್ರೀಗ ಸೀತೆ ಪಾತ್ರದಲ್ಲಿಸ ಸಾಯಿ ಪಲ್ಲವಿ ನಟಿಸುತ್ತಿಲ್ಲ ಅಂತ ಕೆಲವು ಹಿಂದಿ ವೆಬ್‌ಸೈಟ್‌ಗಳು ವರದಿ ಮಾಡಿವೆ. ಸಾಯಿ ಪಲ್ಲವಿ ಬಂದು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರಂತೆ. ಈ ಹಿಂದೆ ನಿತೇಶ್ ತಿವಾರಿ ಸಿನಿಮಾದಲ್ಲಿ ಜಾಹ್ನವಿ ನಟಿಸಿದ್ದರಿಂದ ಪ್ಲಸ್ ಅಂಡ್ ಮೈನಸ್ ಗೊತ್ತಿದೆ. ಈ ಕಾರಣಕ್ಕೆ ಸಾಯಿ ಪಲ್ಲವಿಯನ್ನು ಸಿನಿಮಾದಿಂದ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಆದರೆ, 'ರಾಮಾಯಣ' ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನೋದನ್ನು ನಿರ್ದೇಶಕರು ಇನ್ನು ರಿವೀಲ್ ಮಾಡಿಲ್ಲ. ಅಷ್ಟರೊಳಗೆ ಕೆಲವು ಹೆಸರುಗಳು ಓಡಾಡುತ್ತಿವೆ. ಅದರಲ್ಲಿ ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಹೆಸರು ಇತ್ತು. ಈಗ ಜಾಹ್ನವಿ ಕಪೂರ್ ಹೆಸರು ಸೇರಿಕೊಂಡಿದೆ. ಏನಕ್ಕೂ ಸಿನಿಮಾ ಏಪ್ರಿಲ್, ಮೇ ಬಳಿಕ ಸೆಟ್ಟೇರುವ ಸಾಧ್ಯತೆಯಿದೆ. ಈ ವೇಳೆ ಅಸಲಿ ಸ್ಟಾರ್ ಕಾಸ್ಟ್ ಹೊರಬೀಳಬಹುದು.
ಈ ಹಿಂದೆ ವರದಿಯಾದಂತೆ ಸೀತೆ ಪಾತ್ರಕ್ಕೆ ಮೊದಲು ಆಲಿಯಾ ಭಟ್‌ಗೆ ಅಪ್ರೋಚ್ ಮಾಡಿರುವ ಬಗ್ಗೆ ಸುದ್ದಿ ಓಡಾಡಿತ್ತು. 'ಬ್ರಹ್ಮಾಸ್ರ' ರಣ್‌ಬೀರ್ ಹಾಗೂ ಆಲಿಯಾ ಒಟ್ಟಿಗೆ ನಟಿಸು ಸಾಧ್ಯತೆಯಿತ್ತು. ಆದರೆ, ರಣ್‌ಬೀರ್ ಕಪೂರ್ ಕೆಲವು ದಿನಗಳ ಹಿಂದೆ ಸೀತೆ ಪಾತ್ರಕ್ಕೆ ಆಲಿಯಾ ಭಟ್ ಅನ್ನು ಕೇಳಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಸಾಯಿ ಪಲ್ಲವಿ ಹೆಸರು ಓಡಾಡಿತ್ತು.
ಬಹುಕೋಟಿ ವೆಚ್ಚದ 'ರಾಮಾಯಣ' ಎರಡು ಭಾಗಗಳಲ್ಲಿ ನಿರ್ಮಾಣಗೊಳ್ಳಲಿದೆ. ಈ ಸಿನಿಮಾದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಎನ್ನಲಾಗಿತ್ತು. ಆದ್ರೀಗ ಸಾಯಿ ಪಲ್ಲವಿ ಬದಲು ಜಾಹ್ನವಿ ಕಪೂರ್ ಅನ್ನುವ ಸುದ್ದಿ ವೈರಲ್ ಆಗುತ್ತಿದೆ. ಹೀಗಾಗಿ 'ರಾಮಾಯಣ' ಸ್ಟಾರ್ ಕಾಸ್ಟ್ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ.


Click it and Unblock the Notifications











