'ಬ್ರಹ್ಮಾಸ್ತ್ರ 2'ನಲ್ಲಿ ರಣ್ಬೀರ್ ಕಪೂರ್‌ಗೆ ತಾಯಿ ಆಗಲಿರೋ ಮಾಜಿ ಗೆಳತಿ!

'ಬ್ರಹ್ಮಾಸ್ತ್ರ' ಇತ್ತೀಚೆಗೆ ಬಾಲಿವುಡ್‌ನಲ್ಲಿ ಬೇಜಾನ್ ಸೌಂಡು ಮಾಡಿತ್ತು. ದುಬಾರಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಆದ್ಯಾತ್ಮಿಕ ಆಕ್ಷನ್ ಥ್ರಿಲ್ಲರ್ ಸಿನಿಮಾವಿದು. ಸೆಪ್ಟಂಬರ್ 9ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದ ಇದೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಅತೀ ಹೆಚ್ಚು ನಿರೀಕ್ಷೆಯಿದ್ದ ಈ ಸಿನಿಮಾ ಬಿಡುಗಡೆ ಬಳಿಕ ಅದನ್ನು ಉಳಿಸಿಕೊಂಡಿಲ್ಲ. ಪ್ರೇಕ್ಷಕರ ಮನವನ್ನು ಸೆಳೆಯುವಲ್ಲಿ ಈ ಸಿನಿಮಾ ಸಂಪೂರ್ಣ ಸೋತಿತ್ತು. ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಅದ್ಭುತ ಗಳಿಕೆ ಕಂಡರೂ, ಮುಂದಿನ ದಿನಗಳಲ್ಲಿ ಸಾಧಾರಾಣ ಗಳಿಕೆ ಕಾಣುತ್ತಿದೆ. ಈ ಮಧ್ಯೆ 'ಬ್ರಹ್ಮಾಸ್ತ್ರ 2' ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ.

ಈಗಾಗಲೇ ಬಾಲಿವುಡ್‌ನಲ್ಲಿ 'ಬ್ರಹ್ಮಾಸ್ತ್ರ 2' ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಬೇರೆ ಯಾರೂ ಅಲ್ಲ ರಣ್‌ಬೀರ್ ಕಪೂರ್ ಹಾಗೂ ಅವರ ಮಾಜಿ ಗೆಳತಿ. ಇವರಿಬ್ಬರ ಬಗ್ಗೆ ಬಾಲಿವುಡ್‌ನಲ್ಲೊಂದು ವದಂತಿ ಹರಿದಾಡುತ್ತಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.

 ಮೂರು ಪಾರ್ಟ್‌ಗಳಲ್ಲಿ 'ಬ್ರಹ್ಮಾಸ್ತ್ರ'!

ಮೂರು ಪಾರ್ಟ್‌ಗಳಲ್ಲಿ 'ಬ್ರಹ್ಮಾಸ್ತ್ರ'!

'ಬ್ರಹ್ಮಾಸ್ತ್ರ' ಬಿಡುಗಡೆಗೂ ಮುನ್ನವೇ ಮೂರು ಪಾರ್ಟ್‌ಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಈಗಾಗಲೇ 'ಬ್ರಹ್ಮಾಸ್ತ್ರ' ಮೊದಲ ಭಾಗ ಬಿಡುಗಡೆಯಾಗಿದ್ದು, ಚಿತ್ರತಂಡ ಎರಡನೇ ಭಾಗಕ್ಕೆ ತಯಾರಿ ನಡೆಸುತ್ತಿದೆ. ಸದ್ಯಕ್ಕೆ 'ಬ್ರಹ್ಮಾಸ್ತ್ರ ಪಾರ್ಟ್ 2: ದೇವ್' ಎಂದು ಇಡಲಾಗಿದೆ. ಎರಡನೇ ಭಾಗ 'ದೇವ್' ಪಾತ್ರದ ಮೇಲೆ ನಡೆಯಲಿದೆ. ಅಸಲಿಗೆ ದೇವ್ ಯಾರು ಅಂದರೆ, ಶಿವನ ತಂದೆ. 'ಬ್ರಹ್ಮಾಸ್ತ್ರ' ಸಿನಿಮಾದ ಎರಡನೇ ಭಾಗದಲ್ಲಿ ದೇವ್ ಪಾತ್ರದಲ್ಲಿ ರಣ್‌ವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣ್‌ಬೀರ್ ಮಾಜಿ ಗರ್ಲ್‌ಫ್ರೆಂಡ್ ಅಮ್ಮನಾಗಿ ನಟಿಸುತ್ತಿರೋದು ವಿಶೇಷ.

 ರಣ್‌ಬೀರ್ ಮಾಜಿ ಗೆಳತಿ ಯಾರು?

ರಣ್‌ಬೀರ್ ಮಾಜಿ ಗೆಳತಿ ಯಾರು?

ರಣ್‌ಬೀರ್‌ ಕಪೂರ್ ಮಾಜಿ ಗೆಳತಿಯರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಆದರೆ, 'ಬ್ರಹ್ಮಾಸ್ತ್ರ 2'ನಲ್ಲಿ ರಣ್‌ಬೀರ್ ಮಾಜಿ ಗೆಳತಿನೇ ಅಮ್ಮನಾಗುತ್ತಾರೆ ಅಂದಾಗ ಅಭಿಮಾನಿಗಳಿಗೆ ಕುತೂಹಲ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಮತ್ಯಾರೂ ಅಲ್ಲ ದೀಪಿಕಾ ಪಡುಕೋಣೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಶಿವನ ಪಾತ್ರದಲ್ಲಿ ನಟಿಸಿದ್ದ ರಣ್‌ಬೀರ್ ಕಪೂರ್‌ಗೆ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ ಬಾಲಿವುಡ್‌ನಲ್ಲಿ ಈ ವಿಷಯದ ಬಗ್ಗೆನೇ ಚರ್ಚೆಯಾಗುತ್ತಿದೆ.

 ದೀಪಿಕಾ ಪಡುಕೋಣೆ ಜಲದೇವತೆನಾ?

ದೀಪಿಕಾ ಪಡುಕೋಣೆ ಜಲದೇವತೆನಾ?

ದೀಪಿಕಾ ಪಡುಕೋಣೆಯನ್ನು 'ಬ್ರಹ್ಮಾಸ್ತ್ರ 2'ನಲ್ಲಿ ಪ್ರಮುಖ ಪಾತ್ರದಲ್ಲಿ ತೋರಿಸಲು ಅಯಾನ್ ಮುಖರ್ಜಿ ಮುಂದಾಗಿದ್ದಾರಂತೆ. ಹೀಗಾಗಿ ದೀಪಿಕಾ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ದೀಪಿಕಾ 'ಬ್ರಹ್ಮಾಸ್ತ್ರ 2'ನಲ್ಲಿ ಜಲದೇವತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಲ್ಲದೆ ದೇವ್ ಪಾತ್ರ ಮಾಡುತ್ತಿರುವ ರಣ್‌ವೀರ್ ಸಿಂಗ್‌ನ ಪತ್ನಿಯಾಗಿ ಕಾಣಿಸಿಕೊಳ್ಳಿದ್ದಾರೆ. ಹೀಗಾಗಿ ದೀಪಿಕಾ ಪಡುಕೋಣೆ ಶಿವ ಅಂದ್ರೆ, ರಣ್‌ಬೀರ್ ಕಪೂರ್‌ಗೆ ಆಗುತ್ತಾರೆ ಎಂದು ಲೆಕ್ಕಾ ಹಾಕಲಾಗಿದೆ.

 ದುಬಾರಿ ಸಿನಿಮಾ

ದುಬಾರಿ ಸಿನಿಮಾ

'ಬ್ರಹ್ಮಾಸ್ತ್ರ 2' ಕೂಡ ದುಬಾರಿ ಸಿನಿಮಾವಾಗಲಿದೆ. 'ಬ್ರಹ್ಮಾಸ್ತ್ರ' ಸುಮಾರು 410 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಸ್ಟಾರ್ ಸ್ಟುಡಿಯೋ, ಧರ್ಮಾ ಪ್ರೊಡಕ್ಷನ್, ಪ್ರೈಮ್ ಪೋಕಸ್ ಹಾಗೂ ಸ್ಟಾರ್ ಲೈಟ್ ಪಿಕ್ಚರ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಈ ಬಾರಿ ಕೂಡ ಎರಡನೇ ಭಾಗವನ್ನೂ ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Ranbir Kapoor Ex Girl Friend Deepika Padukone Will Be His Mother In Brahmastra 2, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X