For Quick Alerts
  ALLOW NOTIFICATIONS  
  For Daily Alerts

  ರಣಬೀರ್ ಕತ್ರೀನಾ ಪೀ ಪೀ ಪೀ ಢುಂ ಢುಂ ಅಂತೆ !

  By Mahesh
  |

  'ಯೇ ಜವಾನಿ ಹೇ ದೀವಾನಿ' ಚಿತ್ರ ಹಿಟ್ ಆಗಿದ್ದೇ ತಡ ಮುರಿದು ಬಿದ್ದ ರಣಬೀರ್ ಹಾಗೂ ದೀಪಿಕಾ ಮತ್ತೊಮ್ಮೆ ಪ್ರೇಮ ಹಕ್ಕಿಗಳಾಗಿ ವಿಹರಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಹಬ್ಬಿತ್ತು. ಆದರೆ, ಲವರ್ ಬಾಯ್ ರಣಬೀರ್ ಯಾರ ಅಂಕೆಗೂ ಸಿಗದ ದುಂಬಿಯಂತೆ ಹಾರುತ್ತಲೇ ಇದ್ದಾನೆ. ಹೊಚ್ಚ ಹೊಸ ಗಾಳಿ ಸುದ್ದಿ ಪ್ರಕಾರ ರಣಬೀರ್ ಹಾಗೂ ಕತ್ರೀನಾ ಕೈಫ್ ಮದುವೆಗೆ ರಣಬೀರ್ ಅಪ್ಪ-ಅಮ್ಮ ಓಕೆ ಎಂದಿದ್ದಾರಂತೆ

  ರಣಬೀರ್ ಕಪೂರ್ ಸುತ್ತಾ ಯಾವಾಗಲೂ ಗಾಳಿಸುದ್ದಿ ಸುತ್ತತ್ತಲೇ ಇರುತ್ತದೆ. ದೀಪಿಕಾ ಪಡುಕೋಣೆ ಜೊತೆ ಇದ್ದ ವೈಮನಸ್ಯ ಮುರಿದು ಕೊಂಡು ಮತ್ತೆ ರಣಬೀರ್ ಒಂದಾಗಲು ಸಿದ್ಧವಾಗಿದ್ದಾನೆ ಎಂದು ಸುದ್ದಿ ಹಬ್ಬಿತ್ತು. ಇದಕ್ಕೂ ಇಂಬುಕೊಡುವಂತೆ ದೀಪಿಕಾಗೆ ರಣಬೀರ್ ಚುಂಬನವನ್ನು ನೀಡಿದ್ದ (ಶೂಟಿಂಗ್ ಸಮಯದಲ್ಲಿ) ಹಿಮಾಚಲ ಪ್ರದೇಶದಲ್ಲಿ ಈ ಜೋಡಿ ಜೊತೆ ಜೊತೆಗೆ ಒಂದೇ ರೂಮಿನಲ್ಲಿ ನೆಲೆಸಿತ್ತು, ಕೈ ಹಿಡಿದುಕೊಂಡು ಅಮರ ಪ್ರೇಮಿಗಳಂತೆ ನಡೆದಾಡಿತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ.

  ಆದರೆ, ಈ ಪ್ರೇಮ ಕಥೆಗೆ ಟ್ವಿಸ್ಟ್ ಸಿಕ್ಕಿದೆ ಎಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ. ದೀಪಿಕಾ ಜೊತೆ ರಣಬೀರ್ ಕಾಣಿಸಿಕೊಂಡರೂ ಅದರಲ್ಲಿ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ರಣಬೀರ್ ಪ್ರೀತಿಸುತ್ತಿರುವುದು ಕತ್ರೀನಾ ಕೈಫ್ ರನ್ನು ಮಾತ್ರ ಎಂದು ಪತ್ರಿಕೆ ಹೇಳಿದೆ.

  ಮದುವೆ ಮಂಟಪದ ತನಕ

  ಮದುವೆ ಮಂಟಪದ ತನಕ

  ರಣಬೀರ್ -ಕತ್ರೀನಾ 'ಅಜಬ್ ಪ್ರೇಮ್ ಕಿ ಖಜಬ್ ಪ್ರೇಮ್ ಕಹಾನಿ' ಈಗ ಮದುವೆ ಮಂಟಪದ ತನಕ ಬಂದಿದೆಯಂತೆ. ರಣಬೀರ್ ಹಾಗೂ ಕತ್ರೀನಾ ಕೈಫ್ ಅವರ ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರಂತೆ.

  ರಣಬೀರ್ ಅಪ್ಪ ರಿಷಿ ಕಪೂರ್ ಹಾಗೂ ಅಮ್ಮ ನೀತು ಕಪೂರ್ ಅವರು ಕತ್ರೀನಾ ಕೈಫ್ ಜೊತೆ ಮಗನ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆಯೇ? ನಂಬಲು ಕಷ್ಟ

  ರಣಬೀರ್ ಒತ್ತಾಯ

  ರಣಬೀರ್ ಒತ್ತಾಯ

  ಸಲ್ಮಾನ್ ಖಾನ್ ಸದ್ಯಕ್ಕೆ ರೋಮಾನಿಯಾದ ಬೆಡಗಿ ಜೊತೆ ಸುತ್ತುತ್ತಿದ್ದಾನೆ. ಸಲ್ಲೂ ಮಿಯಾ ಸಂಗ ಬಿಟ್ಟ ಮೇಲೆ ಒಂಟಿಯಾಗಿದ್ದ ಕತ್ರೀನಾಗೆ ರಣಬೀರ್ ಆಸರೆಯಾಗಿದ್ದು ನಿಜ.

  ಇಬ್ಬರ ಜೋಡಿಗೆ ರಣಬೀರ್ ಕಪೂರ್ ಮನೆಯಲ್ಲಿ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ರಣಬೀರ್ ಒತ್ತಾಯದ ಮೇರೆಗೆ ಮದುವೆ ತನಕ ವಿಷಯ ಮುಂದುವರೆದಿದೆಯಂತೆ

  ಕೋಳಿ ಜಗಳ

  ಕೋಳಿ ಜಗಳ

  ರಣಬೀರ್ ಕಪೂರ್ ಜೊತೆ ನಟಿಸಿ ಹಿಟ್ ಚಿತ್ರಗಳನ್ನು ನೀಡಿದ ಕತ್ರೀನಾ ಕೈಫ್ ಅವರು ರಣಬೀರ್ ಜೊತೆ ಇದ್ದಾಗ ಸಲ್ಮಾನ್ ಕೂಡಾ ಮುನಿಸಿಕೊಂಡಿದ್ದ. ದೀಪಿಕಾ ಜೊತೆ ನಟಿಸಿದ ರಣಬೀರ್ ಆಕೆ ಜೊತೆ ಹೆಚ್ಚು ಓಡಾಡಲು ಶುರು ಮಾಡಿದ್ದ.

  ಕತ್ರೀನಾ ಹಾಗೂ ದೀಪಿಕಾ ಇಬ್ಬರು ರಣಬೀರ್ ಒಲಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡಿದ್ದು, ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದು ಪರಸ್ಪರ ಕಿತ್ತಾಡಿದ್ದು ಗುಟ್ಟಿನ ವಿಷಯವೇನಲ್ಲ.

  ದುಬೈನಲ್ಲಿ ಜೋಡಿ

  ದುಬೈನಲ್ಲಿ ಜೋಡಿ

  ಈ ಹಿಂದೆ ದೀಪಿಕಾ ಜೊತೆ ಸುತ್ತಾಡಿದ್ದ ರಣಬೀರ್ ಈಗ ಕತ್ರೀನಾ ಜೊತೆ ಇತ್ತೀಚೆಗೆ ದುಬೈಗೆ ಹಾರಿದ್ದನಂತೆ. ಈ ವಿಷಯವನ್ನು ಅವರ ಅಭಿಮಾನಿಗಳು ಟ್ವೀಟ್ ಮಾಡಿ ತಿಳಿಸಿದ್ದರು.

  Katrina Kaif and Ranbir Kapoor chilling at La Petite Maison, DIFC." ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದರು. ಒಟ್ಟಾರೆ, ರಣಬೀರ್ ಯಾರಿಗೆ ಒಲಿಯುತ್ತಾನೋ ಕಾದು ನೋಡಬೇಕಿದೆ.

  ಅಭಿಮಾನಿಗಳು ಕೂಡಾ ಓಕೆ

  ಅಭಿಮಾನಿಗಳು ಕೂಡಾ ಓಕೆ

  ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಜೋಡಿಗೆ ಅಭಿಮಾನಿಗಳು ಕೂಡಾ ಓಕೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇಬ್ಬರ ಮದುವೆಗೆ ಶುಭ ಹಾರೈಕೆ ಈಗಲೇ ಆರಂಭವಾಗಿದೆ. ಕೆಲವರು ದೀಪಿಕಾನೇ ಸರಿ ಎಂದಿದ್ದಾರೆ ಕೂಡಾ

  English summary
  There are endless rumours and speculations over Ranbir Kapoor, Katrina Kaif and Deepika Padukone's love triangle. A while ago, we heard Ranbir and Deepika have reconciled and are going strong in their newfound relationship. But the latest rumours say that Ranbir is only interested in Katrina Kaif

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X