For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಯೇ ಜವಾನಿ ಹೇ...ಕಾಕ್ ಟೇಲ್ ಕಥೆ

  By Mahesh
  |

  ಯೇ ಜವಾನಿ ಹೇ ದೀವಾನಿ' ಹೌದು ಹದಿಹರೆಯದಲ್ಲಿ ಹುಚ್ಚುಕೋಡಿ ಮನಸ್ಸುಗಳಿಗೆ ಹೇಳಿ ಮಾಡಿಸಿದಂಥ ಚಿತ್ರ. ನಾಯಕ, ನಾಯಕಿ ವಿಭಿನ್ನ ರೀತಿಯಲ್ಲಿ ಜೀವನವನ್ನು ನೋಡುತ್ತಾ ಕೊನೆಗೆ ತಮ್ಮದೇ ಜಾಲದಲ್ಲಿ ಒಂದಾಗುವ ಕಥೆ ಹೊಸ ಬಗೆಯಲ್ಲಿ ನೀಡಿದ್ದಾರೆ ಅಯಾನ್ ಮುಖರ್ಜಿ.

  ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ಯಾಕೋ ಲಕ್ ಮತ್ತೆ ತಿರುಗುವಂತೆ ಕಾಣುತ್ತಿದೆ. ಶಾರುಖ್ ಖಾನ್ ಜೊತೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಕಾಣಿಸಿಕೊಂಡಿರುವ ದೀಪಿಕಾ ತನ್ನ ಹಳೆ ಲವರ್ ರಣಬೀರ್ ನಟಿಸಿರುವ ಯೇಜವಾನಿ ಚಿತ್ರದ ಹಿಮತಾಣದ ದೃಶ್ಯಗಳು ಪ್ರೇಕ್ಷಕರಿಗೆ ರಸದೌತಣ ನೀಡುತ್ತಿದೆ.

  ರಣಬೀರ್ ಹಾಗೂ ದೀಪಿಕಾ ಅವರ ಹಾಟ್ ಜೋಡಿ ಅಷ್ಟೇ ಇಡೀ ಚಿತ್ರದ ಆಕರ್ಷಣೆ ಅಲ್ಲ ಎಂಬುದನ್ನು ನಿರ್ದೇಶಕ ಅಯಾನ್ ಮುಖರ್ಜಿ ಆಗಾಗ ಮನವರಿಕೆ ಮಾಡಿಕೊಡುತ್ತಾರೆ. ಹದಿ ಹರೆಯದ ಕನಸು, ಭರವಸೆ, ಕಲ್ಪನೆ, ಕಾತುರತೆ, ಸಂಗೀತ, ಗೆಳೆತನ, ಪ್ರೇಮ ಹೀಗೆ ಎಲ್ಲದರ ಸಕತ್ ಕಾಕ್ ಟೇಲ್ ಆಗಿರುವ ಈ ಚಿತ್ರ ಯುವ ಮನಸ್ಸುಗಳನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.

  ರಣಬೀರ್ ದೀಪಿಕಾ ರೋಮಾನ್ಸ್, ಮಾಧುರಿ ದೀಕ್ಷಿತ್ ಡ್ಯಾನ್ಸ್ ಜೊತೆಗೆ ಇನ್ನೇನಿದೆ ಈ ಸಿನಿಮಾದಲ್ಲಿ ಮುಂದಿನ ಚಿತ್ರ ಸರಣಿಯಲ್ಲಿ ತಪ್ಪದೇ ಓದಿ..

  ಚಿತ್ರದ ಕಥೆ ಏನು?

  ಚಿತ್ರದ ಕಥೆ ಏನು?

  ಯೇ ಜವಾನಿ ಹೇ ದಿವಾನಿ ಚಿತ್ರದ ಮುಖ್ಯ ಪಾತ್ರಗಳಾಸ ಬನ್ನಿ(ರಣಬೀರ್ ಕಪೂರ್) ಸಾಹಸಮಯ, ಮುಕ್ತ ಜೀವನ ಬಯಸುವ ಹುಚ್ಚು ಕೋಡಿ ಯುವಕ. ನಾಯಕಿ ನೈನಾ ತಲ್ವಾರ್ (ದೀಪಿಕಾ ಪಡುಕೋಣೆ) ಸರಳ ಸುಂದರ ಸುಶೀಲೆ, ಕುಡುಮಿ ಎನ್ನಬಹುದಾದಂಥ ವಿದ್ಯಾರ್ಥಿ.

  ಬನ್ನಿ, ನೈನಾ, ಅವಿ(ಆದಿತ್ಯಾ ರಾಯ್ ಕಪೂರ್) ಹಾಗೂ ಅದಿತಿ(ಕಲ್ಕಿ ಕೋಚ್ಲಿನ್) ಅವರ ಸುತ್ತಾ ಚಿತ್ರಕಥೆ ಸುತ್ತುತ್ತದೆ.

  ರಜೆ ಮಜಾ ಅನುಭವಿಸಲು ಟ್ರೆಕ್ಕಿಂಗ್ ಮುಂತಾದ ಸಾಹಸ ಕ್ರೀಡೆಗೆ ತಮ್ಮ ತೊಡಗಿಸಿಕೊಂಡು ನಲಿದಾಡುತ್ತಾರೆ. ಮುಂದೆ ಬನ್ನಿ ಹಾಗೂ ನೈನಾ ಗೆಳೆತನ ಕಮ್ ಪ್ರೀತಿ ಬ್ರೇಕ್ ಅಪ್ ಆಗಿ ಮದುವೆ ಮನೆಯಲ್ಲಿ ಭೇಟಿ ಆಗುತ್ತಾರೆ.

  ಅದ್ಭುತವೇನಲ್ಲ ಸರಳ ಸುಂದರ ಚಿತ್ರ

  ಅದ್ಭುತವೇನಲ್ಲ ಸರಳ ಸುಂದರ ಚಿತ್ರ

  ಈ ಚಿತ್ರದ ಪಾತ್ರಗಳೊಡನೆ ತಮ್ಮನ್ನು ಯುವ ಜನತೆ ಹೋಲಿಸಿಕೊಂಡು ನೋಡುವ ಸಾಧ್ಯತೆ ಇರುವುದರಿಂದ ಪಾತ್ರಗಳ ಆಯ್ಕೆ, ಪಾತ್ರ ಪೋಷಣೆಯಲ್ಲಿ ಅಯಾನ್ ನಿಗಾ ವಹಿಸಿದ್ದಾರೆ. ಸಿಂಪಲ್ ಚಿತ್ರಕಥೆಯನ್ನು ತಮ್ಮ ನಿರೂಪಣೆಯಿಂದ ಚೆಂದಗಾಣಿಸಿದ್ದಾರೆ.

  ರಣಬೀರ್ ಹಾಗೂ ದೀಪಿಕಾ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವಂತೆ ಮಾಡುವಲ್ಲಿ ನಿರ್ದೇಶಕನ ಶ್ರಮ ಎದ್ದು ಕಾಣುತ್ತದೆ.

  ರಣಬೀರ್ -ದೀಪಿಕಾ ಉತ್ತಮ ನಟನೆ

  ರಣಬೀರ್ -ದೀಪಿಕಾ ಉತ್ತಮ ನಟನೆ

  ಬಾಲಿವುಡ್ ಶೋ ಮ್ಯಾನ್ ರಾಜ್ ಕಪೂರ್ ಮೊಮ್ಮಗ ರಣಬೀರ್ ಕಪೂರ್ ಪರದೆ ಮೇಲೆ ಕಂಡಷ್ಟು ಕಾಲ ಚಿತ್ರದಲ್ಲಿ ಲವಲವಿಕೆ ಪುಟಿಯುತ್ತದೆ. ಕಾಕ್ ಟೈಲ್ ನಂತರ ದೀಪಿಕಾ ಅವರಿಂದ ಉತ್ತಮ ನಟನೆ ಹೊರ ಹೊಮ್ಮಿದೆ.

  ಚಿತ್ರದಲ್ಲಿ ಪ್ರೇಕ್ಷಕರಿಗೆ ಇವರಿಬ್ಬರಲ್ಲಿ ಯಾರನ್ನು ಮೆಚ್ಚುವುದು ಎಂಬ ಗೊಂದಲ ಶುರುವಾಗುತ್ತದೆ.ಆದಿತ್ಯಾ ರಾಯ್ ಕಪೂರ್ ಹಾಗೂ ಕಲ್ಕಿ ಕೂಡಾ ಸಿಕ್ಕ ಅವಕಾಶದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

  ಮಾಧುರಿ ಡ್ಯಾನ್ಸ್ ಹಾಗೂ ಚಿತ್ರ ಸಂಗೀತ

  ಮಾಧುರಿ ಡ್ಯಾನ್ಸ್ ಹಾಗೂ ಚಿತ್ರ ಸಂಗೀತ

  ಡ್ಯಾನ್ಸಿಂಗ್ ಸ್ಟಾರ್ ಮಾಧುರಿ ದೀಕ್ಷಿತ್ ಅವರು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಫರ್ಹಾ ಖಾನ್ ಅವರ ನೃತ್ಯ ಸಂಯೋಜನೆಯಲ್ಲಿ ಬಂದಿರುವ ಹಾಡು ವಿಶೇಷವಾಗಿ ರಣಬೀರ್ ಗಾಗಿ ಮೀಸಲು.

  ಮಾಧುರಿ ನೃತ್ಯದ ಜೊತೆಗೆ ಚಿತ್ರದ ಸಂಗೀತ ಕೂಡಾ ಪ್ರೇಕ್ಷಕರನ್ನು ಮುಟ್ಟಿದೆ. ಬಲಂ ಪಿಚ್ ಕಾರಿ ಹೋಳಿ ಹಾಡು, ದಿಲ್ಲಿವಾಲಿ ಗರ್ಲ್ ಫಂಡ್ ಹಿಟ್ ಆಗಿದೆ. ಇದರ ಜೊತೆಗೆ ಕಬಿರಾ ಹಾಡು ಮತ್ತೆ ಮತ್ತೆ ಗುಣುಗುವಂತೆ ಮಾಡುತ್ತದೆ.

  ಕೊನೆ ಮಾತು: ಚಿತ್ರ ಏಕೆ ನೋಡ್ಬೇಕು?

  ಕೊನೆ ಮಾತು: ಚಿತ್ರ ಏಕೆ ನೋಡ್ಬೇಕು?

  ಸಂಬಂಧಗಳ ಬೆಚ್ಚನೆಯ ಅನುಭವ, ಯುವ ಜನತೆಯ ಆಶೋತ್ತರ, ಪ್ರೀತಿ, ಪ್ರೇಮ, ಜೀವನ ಹಾಗೂ ಗೆಳೆತನದ ಬಗ್ಗೆ ಒಂದಿಷ್ಟು ಭಾವನೆ ಹೆಚ್ಚಾಗಿರುವವರಿಗೆ ಈ ಚಿತ್ರ ಒಳ್ಳೆ ಫ್ರೆಶ್ ಆಗಿ ಕಾಣಿಸಲಿದೆ. ಮಿಸ್ ಮಾಡಿಕೊಳ್ಳುವ ಚಾನ್ಸ್ ಏಕೆ. ಈಗಲೇ ಹೋಗಿ ಒಮ್ಮೆ ನೋಡಿ ಬನ್ನಿ

  ಕಲರ್ ಫುಲ್ ಜೋಡಿ

  ಕಲರ್ ಫುಲ್ ಜೋಡಿ

  ಚಳಿ ಇರಲಿ ಮಳೆ ಬರಲಿ ಈ ಜೋಡಿ ನಗುವಿಗೆ ಬರವಿಲ್ಲ. ಹಾಟ್ ಜೋಡಿಯ ಮತ್ತೊಂದು ಕಲರ್ ಫುಲ್ ಚಿತ್ರ. ನಿಜ ಜೀವನದಲ್ಲಿ ಒಮ್ಮೆ ಪ್ರೇಮಿಗಳಾಗಿ ಈಗ ಬೇರ್ಪಟ್ಟಿರುವ ಈ ಜೋಡಿ ಮತ್ತೊಮ್ಮೆ ಒಂದಾಗಲು ಈ ಚಿತ್ರ ಸಹಕಾರಿಯಾಗಲಿದೆ ಎಂಬ ಸುದ್ದಿಯೂ ಹಬ್ಬಿದೆ.

  English summary
  Ayan Mukerji's most-talked about romantic flick Yeh Jawaani Hai Deewani, that features Bollywood's ex-couple Ranbir Kapoor, Deepika Padukone. YJHD is a spirited cocktail of life about dreams, ambition, hope, eagerness, laughter, music, friendship, love and an absolute treat to the youth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more