ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಬರ್ತ್‌ಡೇ ಸೆಲೆಬ್ರೆಟ್ ಮಾಡ್ತಿದ್ದಾರಾ? ಸಾಕ್ಷಿ ತೋರಿಸಿದ ನೆಟ್ಟಿಗರು?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜಾಲಿ ಮೂಡಿನಲ್ಲಿ ಇದ್ದಾರೆ. ಏಪ್ರಿಲ್ 5 ರಂದು ಕೊಡಗಿನ ಈ ಬ್ಯೂಟಿ 28 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಸಿನಿಮಾಗಳಿಗೆ ಬ್ರೇಕ್ ಕೊಟ್ಟು ವಿದೇಶಕ್ಕೆ ಹಾರಿದ್ದಾರೆ ಅನ್ನೋ ಸುದ್ದಿ ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಾಗಂತ ರಶ್ಮಿಕಾ ಒಬ್ಬರೇ ಅಲ್ಲ ಅವರೊಂದಿಗೆ ರೂಮರ್ ಬಾಯ್‌ಫ್ರೆಂಡ್ ವಿಜಯ್ ದೇವರಕೊಂಡು ಕೂಡ ಹೋಗಿದ್ದಾರೆ ಅನ್ನೋದು ಸುದ್ದಿನೂ ಹರಿದಾಡುತ್ತಿದೆ.
ವಿಜಯ್ ದೇವರಕೊಂಡ ನಟನೆಯ 'ಫ್ಯಾಮಿಲಿ ಸ್ಟಾರ್' ಸಿನಿಮಾ ಕೂಡ ಏಪ್ರಿಲ್ 5 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಿಡುಗಡೆಗೆ ಒಂದು ದಿನ ಮುನ್ನ ಅಮೆರಿಕದಲ್ಲಿ ಪ್ರೀಮಿಯರ್ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ವಿಜಯ್ ದೇವರಕೊಂಡ ರಿಲೀಸ್ ದಿನ ರಶ್ಮಿಕಾ ಬರ್ತ್‌ಡೇ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ ಅನ್ನೋ ಗುಸು ಗುಸು ಕೇಳಿ ಬರುತ್ತಿದೆ.

ರಶ್ಮಿಕಾ ಮಂದಣ್ಣ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರ್ತ್‌ಡೇ ವೀಕ್. ಯುಎಇಯಲ್ಲಿ ಇರುವುದಾಗಿ ರಿವೀಲ್ ಮಾಡಿದ್ದಾರೆ. ಈಗ ವಿಜಯ್ ದೇವರಕೊಂಡ ಕೂಡ ಅಲ್ಲೇ ಇದ್ದಾರೆ ಅಂತ ನೆಟ್ಟಿಗರು ವಾದ ಮಂಡಿಸುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಈ ಬಾರಿ ಕೂಡ ಇಬ್ಬರು ತಾರೆಯರ ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ನೆಟ್ಟಿಗರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ಹಿಂದೆ ಕೂಡ ಮಾಲ್ಡೀವ್ಸ್‌ಗೆ ತೆರಳಿದ್ದಾಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇಬ್ಬರೂ ಶೇರ್ ಮಾಡಿದ್ದ ಪೋಸ್ಟ್‌ನಿಂದ ನೆಟ್ಟಿಗರು ಪ್ರವಾಸಕ್ಕೆ ಮಾಲ್ಡೀವ್ಸ್‌ಗೆ ತೆರಳಿದ್ದಾರೆಂದು ಸಾಬೀತು ಮಾಡಿದ್ದರು. ಈಗ ರಶ್ಮಿಕಾ-ವಿಜಯ್ ಹಂಚಿಕೊಂಡಿರೋ ಪೋಸ್ಟ್‌ನಿಂದ ಮತ್ತೆ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ರೆಸಾರ್ಟ್‌ನಲ್ಲಿದ್ದ ನವಿಲಿನ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಇತ್ತ ವಿಜಯ್ ದೇವರಕೊಂಡ ಏಪ್ರಿಲ್ 5ರಂದು ರಿಲೀಸ್ ಆಗುತ್ತಿರುವ ತನ್ನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆ ವೇಳೆ ಬ್ಯಾಕ್‌ಗ್ರೌಂಡ್‌ನಲ್ಲಿ ನವಿಲು ಕಾಣಿಸಿಕೊಂಡಿದೆ. ಹೀಗಾಗಿ ನೆಟ್ಟಿಗರು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬವನ್ನು ಆಚರಿಸಲು ವಿಜಯ್ ದೇವರಕೊಂಡ ಯುಎಇಗೆ ತೆರಳಿದ್ದಾರೆ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
ಇತ್ತೀಚೆಗೆ ನೇಹಾ ಧುಪಿಯಾ ನಡೆಸಿಕೊಡುವ ಪಾಡ್‌ಕಾಸ್ಟ್ 'ನೋ ಫಿಲ್ಟರ್ ನೇಹಾ'ದಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು. ಈ ವೇಳೆ ವಿಜಯ್ ದೇವರಕೊಂಡ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ವಿಜಯ್ ದೇವರಕೊಂಡ ಯಾವ ಗುಣ ಇಷ್ಟ ಆಗುತ್ತೆ ಎಂದು ಪ್ರಶ್ನೆ ಮಾಡಲಾಗಿತ್ತು. ಆ ವೇಳೆ "ನಾವು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ನಮ್ಮ ಆಲೋಚನೆ ಹಾಗೂ ದೃಷ್ಟಿಕೋನ ಒಂದೇ ತರ ಇದೆ. ನನಗೆ ಅದು ಇಷ್ಟ." ಎಂದು ರಶ್ಮಿಕಾ ಹೇಳಿದ್ದರು.
ಇದೇ ವೇಳೆ ವಿಜಯ್ ಯಾವ ಗುಣ ಇಷ್ಟ ಆಗುವುದಿಲ್ಲ ಎಂದಿದು ಪ್ರಶ್ನೆ ಮಾಡಲಾಗಿತ್ತು. " ಎಲ್ಲಾ ಸಮಯದಲ್ಲೂ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಇರುತ್ತಾರೆ. ಅವರೊಂತರ ರಾಕೆಟ್ ತರ. ಕೆಲಸವೇ ಅವರಿಗೆ ಎಲ್ಲಾ" ಎಂದು ಹೇಳಿದ್ದರು. ರಶ್ಮಿಕಾ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಮತ್ತೆ ಇಬ್ಬರ ಡೇಟಿಂಗ್ ಬಗ್ಗೆನೇ ಚರ್ಚೆಯಾಗುತ್ತಿದೆ.


Click it and Unblock the Notifications











