'ಅನಿಮಲ್' ಸಕ್ಸಸ್ ಬೆನ್ನಲ್ಲೇ ₹1 ಕೋಟಿ ಏರಿಕೆ; ರಶ್ಮಿಕಾ ಸಂಭಾವನೆ ಕೇಳಿ ತೆಲುಗು ನಿರ್ಮಾಪಕರೇ ಕಂಗಾಲು?

ಬಾಕ್ಸಾಫೀಸ್‌ನಲ್ಲಿ 'ಅನಿಮಲ್' ಸಿನಿಮಾ ಹೊಸ ದಾಖಲೆಯನ್ನು ಬರೆದಿದೆ. ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಬಂದರೂ, ಸಿನಿಮಾ ಗಳಿಕೆಯಲ್ಲಿ ಮಾತ್ರ ಹಿಂದೆ ಉಳಿದಿರಲಿಲ್ಲ. 2023ರಲ್ಲಿ ರಿಲೀಸ್ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಸಾಲಿನಲ್ಲಿ 'ಅನಿಮಲ್' ಕೂಡ ಇದೆ.

'ಅನಿಮಲ್' ಯಶಸ್ಸು ಈ ಸಿನಿಮಾದಲ್ಲಿ ನಟಿಸಿದ ಮೂವರ ಕರಿಯರ್‌ಗೆ ಮತ್ತಷ್ಟು ಬೂಸ್ಟ್ ಕೊಟ್ಟಿದೆ. ರಣ್‌ಬೀರ್ ಕಪೂರ್, ತೃಪ್ತಿ ಡಿಮ್ರಿ ಹಾಗೂ ರಶ್ಮಿಕಾ ಮಂದಣ್ಣ. 'ಅನಿಮಲ್' ರಿಲೀಸ್ ಬಳಿಕ ಈ ಮೂವರಿಗೂ ಡಿಮ್ಯಾಂಡ್ ಹೆಚ್ಚಾಗಿರುವುದಂತೂ ನಿಜ. ಅದರಲ್ಲೂ ರಶ್ಮಿಕಾ ಮಂದಣ್ಣಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.

Rashmika Mandanna increased remuneration after Animal Success do you know how much?

ಆದರೆ, ತಾನು ನಟಿಸಿದ ಸಿನಿಮಾ 900 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ಮೇಲೆ ಅವರ ಬೇಡಿಕೆನೂ ಹೆಚ್ಚಾಗುತ್ತೆ. ಹಾಗೇ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ದಿಢೀರನೇ ಒಂದು ಕೋಟಿಗೆ ಏರಿಕೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ. ತೆಲುಗು ಚಿತ್ರರಂಗಕ್ಕೆ ರಶ್ಮಿಕಾ ಸಂಭಾವನೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ ಅನ್ನೋದು ಸದ್ಯದ ಸುದ್ದಿ.

ಹೌದು, ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಬಾಲಿವುಡ್‌ ಸಿನಿಮಾದಲ್ಲಿ ದೊಡ್ಡ ಸಕ್ಸಸ್ ಗಿಟ್ಟಿಸಿಕೊಂಡ ನಟಿ. 'ಅನಿಮಲ್' ಅಂತಹ ಮೆಗಾ ಸಕ್ಸಸ್ ಸಿನಿಮಾದ ಕ್ರೆಡಿಕ್ ಈ ನಟಿಗೂ ಸಲ್ಲುತ್ತೆ. ಆದರೆ, ರಶ್ಮಿಕಾಗೆ ಸಿಕ್ಕ ಯಶಸ್ಸು ಟಾಲಿವುಡ್ ಮಂದಿಗೆ ನುಂಗಲಾರದ ತುಪ್ಪವಾಗಿಬಿಟ್ಟಿದೆಯಂತೆ. ಇಷ್ಟು ದೊಡ್ಡ ಯಶಸ್ಸು ಕೊಟ್ಮೇಲೆ ಯಾರಾದ್ರೂ ಸಂಭಾವನೆ ಹೆಚ್ಚಿಸಿಕೊಳ್ಳದೆ ಇರುತ್ತಾರಾ? ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ ಸಂಭಾವನೆಯಲ್ಲೂ ಏರಿಕೆಯಾಗಿದೆ.

ತೆಲುಗಿನ ನಿರ್ಮಾಣ ಸಂಸ್ಥೆಯೊಂದು ರಶ್ಮಿಕಾ ಮಂದಣ್ಣರನ್ನು ಸಿನಿಮಾವೊಂದು ಆಫರ್ ಮಾಡಿತ್ತಂತೆ. ಆಗ ರಶ್ಮಿಕಾ ಕೇಳಿದ ಸಂಭಾವನೆ ನೋಡಿ ಬೆಚ್ಚಿಬಿದ್ದಿದೆ ಅನ್ನೋ ಸುದ್ದಿ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ನಟಿಯೊಬ್ಬರಿಗೆ ಅಷ್ಟೊಂದು ಸಂಭಾವನೆ ಕೊಟ್ಟರೆ, ಬಜೆಟ್‌ನಲ್ಲಿ ಏರು ಪೇರಾಗುತ್ತೆ ಅನ್ನೋ ಆತಂಕದಲ್ಲಿ ನಿರ್ಮಾಣ ಸಂಸ್ಥೆಯಿದೆಯಂತೆ. ಅಷ್ಟಕ್ಕೂ ರಶ್ಮಿಕಾ ಕೇಳಿ ಸಂಭಾವನೆ ಎಷ್ಟು ಅಂದ್ಕೊಂಡ್ರಾ?

Rashmika Mandanna increased remuneration after Animal Success do you know how much?

'ಅನಿಮಲ್' ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣ 4 ಕೋಟಿ ರೂಪಾಯಿಗೆ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರಂತೆ. ಹೊಸ ಸಿನಿಮಾ ಆಫರ್ ಕೊಡಲು ಹೋದ ನಿರ್ಮಾಣ ಸಂಸ್ಥೆಗೆ ರಶ್ಮಿಕಾ ಇಷ್ಟು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರಂತೆ. ಈ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ. 'ಪುಷ್ಪ' ಯಶಸ್ಸಿನ ಬಳಿಕವೂ ತಮ್ಮ ಸಂಭಾವನೆಯನ್ನು ಮೂರು ಕೋಟಿ ರೂಪಾಯಿಗೆ ಏರಿಕೆ ಮಾಡಿಕೊಂಡಿದ್ದಾರೆಂಬ ಸುದ್ದಿನೂ ಹಬ್ಬಿತ್ತು.

ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಇದೆ. ಈ ಸಿನಿಮಾ ಬಿಡುಗಡೆ ಬಳಿಕ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಇಲ್ಲದೇ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಭರವಸೆಯಲ್ಲಿಯೇ 4 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿರಬಹುದು ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರಂತೆ. ಇತ್ತ ರಶ್ಮಿಕಾ ಮಂದಣ್ಣರನ್ನು ಬಿಡುವುದಕ್ಕೂ ಆಗದೇ, ಸಿನಿಮಾಗೆ ಹಾಕಿಕೊಳ್ಳಲು ಆಗದೆ ತೆಲುಗು ನಿರ್ಮಾಪಕರು ಪರದಾಡ್ತಿದ್ದಾರೆ ಅನ್ನೋದು ಟಾಲಿವುಡ್‌ನಲ್ಲಿ ಹಬ್ಬಿರೋ ಸುದ್ದಿ.

ಆದರೆ, ಮತ್ತೆ ಕೆಲವರು ಡಿಮ್ಯಾಂಡ್ ಇದ್ದಾಗ ಸಂಭಾವನೆ ಹೆಚ್ಚು ಕೇಳುವುದರಲ್ಲಿ ತಪ್ಪೇನಿಲ್ಲ ಅಂತಾನೂ ಅಂತಿದ್ದಾರಂತೆ. ಯಶಸ್ಸಿನ ತುತ್ತತುದಿಯಲ್ಲಿರೋ ನಟಿಯಿಂದ ಸಿನಿಮಾ ಲಾಭ ಆಗಲಿದೆಯೋ ಹೊರತು, ನಷ್ಟ ಅಂತೂ ಆಗುವುದಿಲ್ಲ. ಹೀಗಾಗಿ ತೆಲುಗಿನ ಶ್ರೀಮಂತ ನಿರ್ಮಾಣ ಸಂಸ್ಥೆಗಳಿಗೆ 4 ಕೋಟಿ ರೂಪಾಯಿ ದೊಡ್ಡದೇನಲ್ಲ ಅನ್ನೋ ಅಭಿಪ್ರಾಯನೂ ಇದೆಯಂತೆ. ಒಟ್ನಲ್ಲಿ 'ಅನಿಮಲ್' ಸಕ್ಸಸ್ ಜೊತೆಗೆ ರಶ್ಮಿಕಾ ಸಂಭಾವನೆನೂ ಚರ್ಚೆಯಾಗುತ್ತಿದೆ.

More from Filmibeat

English summary
Rashmika Mandanna increased remuneration 4 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X