ಸುಕುಮಾರ್ ಬಳಿ ಓಡೋಡಿ ಬಂದಿದ್ದೇಕೆ ರಶ್ಮಿಕಾ ಮಂದಣ್ಣ? ಫಿಲ್ಮ್ ನಗರದಲ್ಲಿ ಏನಿದು ಗಾಸಿಪ್?

ಚಿತ್ರರಂಗ ಅಂದ್ಮೇಲೆ ದಿನಕ್ಕೊಂದು ಸಿನಿಮಾ. ಗಲ್ಲಿಗೊಂದು ಗಾಸಿಪ್. ಇವೆರಡೂ ಇರದೇ ಹೋದರೆ ಆ ಸಿನಿಮಾರಂಗ ತಣ್ಣಗಾಗಿದೆ ಅಂತಲೇ ಅರ್ಥ. ಸದ್ಯ ಟಾಲಿವುಡ್‌ನಲ್ಲಿ ಭರ್ಜರಿ ಸುದ್ದಿಯೊಂದು ಓಡಾಡುತ್ತಿದೆ. ಅದಕ್ಕೆ ಪ್ರಮುಖ ರೂವಾರಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ.

ಕೆಲವು ದಿನಗಳಿಂದ ರಶ್ಮಿಕಾ ಮಂದಣ್ಣ ಬಗ್ಗೆ ಒಂದು ಸುದ್ದಿ ಓಡಾಡುತ್ತಲೇ ಇದೆ. 'ಪುಷ್ಪ 2' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ನಿರ್ದೇಶಕ ಸುಕುಮಾರ್ ಕತ್ತರಿ ಹಾಕುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಟಾಲಿವುಡ್‌ನಲ್ಲಿ ಒಂದು ಡೆವಲಪ್‌ಮೆಂಟ್ ಆಗಿದ್ಯಂತೆ.

ರಶ್ಮಿಕಾ ಮಂದಣ್ಣ 'ಪುಷ್ಪ 2' ಸಿನಿಮಾ ನಿರ್ದೇಶಕ ಸುಕುಮಾರ್ ಅನ್ನು ಭೇಟಿ ಮಾಡಲು ಓಡೋಡಿ ಬಂದಿದ್ದಾರಂತೆ. ಇದು ಟಾಲಿವುಡ್‌ ಮಂದಿಗೆ ಮುಟ್ಟುತ್ತಿದ್ದಂತೆ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ. ಅಷ್ಟಕ್ಕೂ ರಶ್ಮಿಕಾ ಹಾಗೂ ಸುಕುಮಾರ್ ಬಗ್ಗೆ ಏನಿದು ಗಾಸಿಪ್? ತಿಳಿಯಲು ಮುಂದೆ ಓದಿ.

'ಪುಷ್ಪ 2'ನಲ್ಲಿ ರಶ್ಮಿಕಾಗೆ ಸ್ಥಾನವಿದೆಯೇ?

'ಪುಷ್ಪ 2'ನಲ್ಲಿ ರಶ್ಮಿಕಾಗೆ ಸ್ಥಾನವಿದೆಯೇ?

ಕಳೆದ ಕೆಲವು ದಿನಗಳಿಂದ ಇದೇ ಟಾಲಿವುಡ್‌ನಲ್ಲಿ 'ಪುಷ್ಪ 2' ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಸುಕುಮಾರ್ 'ಪುಷ್ಪ 2'ಗಾಗಿ ಮೇಜರ್ ಸರ್ಜರಿಯೊಂದನ್ನು ಮಾಡುತ್ತಿದ್ದಾರೆ ಎಂದು ಹೇಳಾಗಿತ್ತು. ಅದರೊಂದಿಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಸುಕುಮಾರ್ ಕತ್ತರಿ ಹಾಕಲಿದ್ದಾರೆ. ರಶ್ಮಿಕಾ ಪಾತ್ರವನ್ನು ಸುಕುಮಾರ್ ಪಾರ್ಟ್ 2 ನಲ್ಲಿ ಸಾಯಿಸಲಿದ್ದಾರೆ ಎಂದು ಗುಲ್ಲೆದ್ದಿತ್ತು. ಇದು ಎಲ್ಲಾ ಚಿತ್ರರಂಗದಲ್ಲೂ ಬೇಜಾನ್ ಸದ್ದು ಮಾಡಿತ್ತು.

'ಪುಷ್ಪ 2' ನಿರ್ದೇಶಕನ ಭೇಟಿ ಮಾಡಿದ್ದು ನಿಜವೇ?

'ಪುಷ್ಪ 2' ನಿರ್ದೇಶಕನ ಭೇಟಿ ಮಾಡಿದ್ದು ನಿಜವೇ?

ಸದ್ಯ ಓಡಾಡುತ್ತಿರುವ ಸುದ್ದಿ ಏನಂದ್ರೆ, ರಶ್ಮಿಕಾ ಮಂದಣ್ಣ 'ಪುಷ್ಪ 2' ಸಿನಿಮಾದ ನಿರ್ದೇಶಕ ಸುಕುಮಾರ್‌ರನ್ನು ಭೇಟಿ ಮಾಡಲು ಓಡೋಡಿ ಬಂದಿದ್ರಂತೆ. ತೆಲುಗು ಫಿಲ್ಮ್ ನಗರದಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ, ನಿರ್ದೇಶಕ ಸುಕುಮಾರ್‌ರನ್ನು ಭೇಟಿ ಮಾಡಿ ರಶ್ಮಿಕಾ ತನ್ನ ಪಾತ್ರವನ್ನು ಸಾಯಿಸದಂತೆ ಕೇಳಿಕೊಂಡಿದ್ದಾರೆ ಎಂದು ಗುಲ್ಲೆದ್ದಿದೆ. ಆದರೆ, ಸುಕುಮಾರ್ ಮಾತ್ರ ಕಥೆಯನ್ನು ರಶ್ಮಿಕಾ ಬಿಟ್ಟು ಕೊಟ್ಟಿಲ್ಲ ಎಂದು ಸುದ್ದು ಹಬ್ಬಿದೆ.

ಈ ಸಿನಿಮಾಗೆ ಇಬ್ಬರು ನಾಯಕಿಯರು

ಈ ಸಿನಿಮಾಗೆ ಇಬ್ಬರು ನಾಯಕಿಯರು

ನಿರ್ದೇಶಕ ಸುಕುಮಾರ್ 'ಪುಷ್ಪ 2' ಸಿನಿಮಾದ ಸ್ಕ್ರಿಪ್ಟ್ ಅನ್ನು ಮತ್ತೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ಸುಕುಮಾರ್ ಪಾರ್ಟ್ 2ಗಾಗಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ. ಇದರ ಪ್ರಕಾರ, ಶ್ರೀವಲ್ಲಿ ಪಾತ್ರವನ್ನು ಇಂಟರ್‌ವಲ್‌ಗೂ ಮುನ್ನವೇ ಸಾಯಿಸಲು ನಿರ್ಧರಿಸಿದ್ದಾರಂತೆ. ಇಂಟರ್‌ವಲ್ ಬಳಿಕ ಮತ್ತೊಬ್ಬ ನಾಯಕಿಯ ಎಂಟ್ರಿಯಾಗುತ್ತೆ ಎಂದು ಹೇಳಲಾಗಿತ್ತಿದೆ. ಇದೇ ಸುದ್ದಿ ಕಳೆದ ಹಲವು ದಿನಗಳಿಂದ ಸಂಚಚಲನ ಸೃಷ್ಟಿಸಿದೆ.

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ರಶ್ಮಿಕಾ ಮಂದಣ್ಣ ನಿಜಕ್ಕೂ ನಿರ್ದೇಶಕ ಸುಕುಮಾರ್‌ರನ್ನು ಭೇಟಿ ಮಾಡಲು ಓಡೋಡಿ ಬಂದಿದ್ರಾ? ಅನ್ನೋ ಪ್ರಶ್ನೆಯಂತೂ ಎದ್ದೇಳುತ್ತೆ. ಅದಕ್ಕೆ ಕಾರಣ ಅವರ ಕೈಯಲ್ಲಿರುವ ಸಿನಿಮಾಗಳು. ರಶ್ಮಿಕಾ ಮಂದಣ್ಣ ಕೈ ತುಂಬಾ ಸಿನಿಮಾಗಳಿವೆ. ಬಾಲಿವುಡ್‌ನಲ್ಲಂತೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಸೆಟ್ಟೇರುತ್ತಿವೆ. 'ಮಿಷನ್ ಮಜ್ನು', 'ಗುಡ್ ಬೈ' ಸಿನಿಮಾ ಮುಗಿದಿದೆ. ರಣ್‌ಬೀರ್ ಕಪೂರ್‌ ಜೊತೆ 'ಎನಿಮಲ್' ಹಾಗೂ ಟೈಗರ್ ಶ್ರಾಫ್‌ ಜೊತೆನೂ ಸಿನಿಮಾ ಮಾಡುತ್ತಿರುವುದರಿಂದ ಬ್ಯುಸಿಯಾಗಿದ್ದಾರೆ. ಹೀಗಾಗಿ 'ಪುಷ್ಪ 2' ಪಾತ್ರದ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ.

More from Filmibeat

English summary
Rashmika Mandanna Requested Pushpa 2 Director Not Kill Her Character, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X