ತಂದೆಯಾಗ್ತಿದ್ದಾರಾ ಮೆಗಾ ಪವರ್ ಸ್ಟಾರ್ ರಾಮ್ ಚರಣ್? ಮ್ಯಾಟರ್ ಫುಲ್ ಟ್ರೆಂಡಿಂಗ್‌!

RRR ಸಿನಿಮಾದ ರಿಲೀಸ್ ಆದಲ್ಲಿಂದ ರಾಮ್ ಚರಣ್ ತೇಜಾ ಕೇವಲ ಟಾಲಿವುಡ್‌ ಸ್ಟಾರ್ ಆಗಿ ಉಳಿದಿಲ್ಲ. ಮೆಗಾ ಪವರ್‌ಸ್ಟಾರ್ ಈಗ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಮೆಗಾಸ್ಟಾರ್ ಸುಪುತ್ರನ ನಟನೆಗೆ ಇಡೀ ವಿಶ್ವವೇ ಹೊಗಳಿಕೊಂಡಾಡಿದೆ. ಸದ್ಯಕ್ಕೀಗ ರಾಮ್‌ ಚರಣ್ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ರಾಮ್ ಚರಣ್ ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಕ್ಸಾಫೀಸ್‌ನಲ್ಲಿ ರಾಮ್ ಚರಣ್ ಸಿನಿಮಾಗಳು ಕೂಡ ಬೇಜಾನ್ ಸದ್ದು ಮಾಡುತ್ತಿದೆ. ಆದರೆ,ಯಶಸ್ಸಿನ ಉತ್ತುಂಗದಲ್ಲಿರುವ ರಾಮ್ ಚರನ್‌ಗೆ ಯಾವಾಗ ಒಂದು ಪ್ರಶ್ನೆಯಂತೂ ಎದುರಾಗುತ್ತಲೇ ಇರುತ್ತೆ. ಉಪಾಸನಾರನ್ನು ಮದುವೆಯಾಗಿ ಸುಮಾರು ಹತ್ತು ವರ್ಷಗಳಾಗಿದ್ದರೂ ಇನ್ನೂ ಮಕ್ಕಳಾಗಿಲ್ಲ ಅನ್ನೋ ಪ್ರಶ್ನೆ ಎದುರಾಗುತ್ತಲೇ ಇರುತ್ತೆ.

ಈ ಹಿಂದೆ ಕೂಡ ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರಿಗೂ ಮಕ್ಕಳಾಗಿಲ್ಲ ಅನ್ನೋ ಬಗ್ಗೆನೇ ಪ್ರಶ್ನೆಗಳು ಎದುರಾಗುತ್ತವೆ. ಹಲವು ಸಂದರ್ಶನಗಳಲ್ಲಿ ಉಪಾಸನಾಗೆ ಈ ಪ್ರಶ್ನೆಗಳನ್ನು ಹಾಕಲಾಗಿತ್ತು. ಹೀಗೆ ಎದುರಾದ ಪ್ರಶ್ನೆಗಳಿಗೆ ಉಪಾಸನಾ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದರು. ಆದ್ರೀಗ ಮತ್ತೆ ಇದೇ ವಿಷಯ ಚರ್ಚೆಯಲ್ಲಿದ್ದು, ರಾಮ್ ಚರಣ್ ಮತ್ತು ಉಪಾಸನಾ ಶೀಘ್ರದಲ್ಲಿಯೇ ಪೋಷಕರಾಗಲಿದ್ದಾರೆ ಅನ್ನೋ ಮಾತು ಹೇಳಿ ಬರುತ್ತಿದೆ.

 ತಂದೆಯಾಗ್ತಿದ್ದಾರಾ ರಾಮ್ ಚರಣ್?

ತಂದೆಯಾಗ್ತಿದ್ದಾರಾ ರಾಮ್ ಚರಣ್?

ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಉಪಾಸನಾ ಶೀಘ್ರದಲ್ಲಿಯೇ ಪೋಷಕರಾಗಲಿದ್ದಾರೆ. ರಾಮ್ ಚರಣ್ ಪತ್ನಿ ಗರ್ಭಿಣಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

 ಮರಿ ಮೆಗಾ ಪವರ್‌ಸ್ಟಾರ್ ನಿರೀಕ್ಷೆ?

ಮರಿ ಮೆಗಾ ಪವರ್‌ಸ್ಟಾರ್ ನಿರೀಕ್ಷೆ?

ಸೋಶಿಯಲ್ ಮೀಡಿಯಾದಲ್ಲಿ ಇನ್ನೊಂದು ಸುದ್ದಿನೂ ಹರಿದಾಡುತ್ತಿದೆ. ಇನ್ನು ಐದಾರು ತಿಂಗಳಲ್ಲಿ ಉಪಸನಾಗೆ ಹೆರಿಗೆಯಾಗಲಿದೆ. ಮೆಗಾಸ್ಟಾರ್ ಕುಟುಂಬ ಮರಿ ಮೆಗಾ ಪವರ್‌ಸ್ಟಾರ್ ಆಗಮನವಾಗಿಲಿದೆ ಎಂದು ಸುದ್ದಿ ಹಬ್ಬಿದೆ. ಆದರೆ, ಈಗಾಗ ಓಡಾಡುತ್ತಿರುವ ಈ ಸುದ್ದಿಯ ನಿಖರತೆ ಬಗ್ಗೆ ಟಾಲಿವುಡ್‌ ಮಾಧ್ಯಮಗಳು ಸ್ಪಷ್ಟಪಡಿಸಿಲ್ಲ. ಅಲ್ಲದೆ ರಾಮ್‌ ಚರಣ್ ಆಗಲಿ, ಉಪಸನಾ ಆಗಲಿ ಅಥವಾ ಮೆಗಾ ಕುಟುಂಬ ಆಗಲಿ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

 ಸಿನಿಮಾಗಳಲ್ಲಿ ಬ್ಯುಸಿ ರಾಮ್ ಚರಣ್

ಸಿನಿಮಾಗಳಲ್ಲಿ ಬ್ಯುಸಿ ರಾಮ್ ಚರಣ್

ರಾಮ್ ಚರಣ್ ತೇಜಾ ವೃತ್ತಿ ಬದುಕು ಯಶಸ್ಸು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದೆ. ಇತ್ತೀಚೆಗಷ್ಟೇ RRR ಸಿನಿಮಾ ರಿಲೀಸ್ ಆಗಿದ್ದು, ವಿಶ್ವದೆಲ್ಲೆಡೆ ಅಬ್ಬರಿಸಿದೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‌ ಚರಣ್ ಜನಮೆಚ್ಚುಗೆ ಗಳಿಸಿದ್ದಾರೆ. ಸದ್ಯ ರಾಮ್‌ ಚರಣ್ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ನಟಿಸುತ್ತಿದ್ದು, ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಬಿಡುಗಡೆಯಾಗುತ್ತಿದೆ.

 ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ

ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ

ರಾಮ್ ಚರಣ್ ಬಿಗ್ ಬಜೆಟ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗೌತಮ್ ತಿನ್ನನೂರಿ ಜೊತೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಬ್ಲಾಕ್ ಬಸ್ಟರ್ ಸಿನಿಮಾ ನೀಡಿರೋ 'ವಿಕ್ರಮ್' ಸಿನಿಮಾದ ನಿರ್ದೇಶಕ ಲೋಕೇಶ್ ಕನಕರಾಜ್‌ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಬಿಗ್ ಬಜೆಟ್ ಸಿನಿಮಾಗಳ ಮೂಲಕ ಕಿಕ್ ಕೊಡಲಿದ್ದಾರೆ ರಾಮ್ ಚರಣ್.

More from Filmibeat

English summary
RRR Star Ram Charan And Wife Upasana Going To Be Parents Soon, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X