'ಕೆಜಿಎಫ್ 2' ಬಳಿಕ ಯಶ್ ಸಿನಿಮಾ ಬಗ್ಗೆ ಸುಳಿವು? ಗಾಂಧಿನಗರದಲ್ಲಿ ಹೀಗೊಂದು ಸುದ್ದಿ!

'ಕೆಜಿಎಫ್ 2' ಇನ್ನೂ ಆಟ ನಿಲ್ಲಿಸಿಲ್ಲ. ಎಂಟು ವರ್ಷ 'ಕೆಜಿಎಫ್' ಬಿಟ್ಟು ಬೇರೆ ಕಡೆ ಯಶ್ ಮುಖನೂ ಹಾಕಿರಲಿಲ್ಲ. ಹೀಗಾಗಿ ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು ಅನ್ನೋದು ಸಹಜವಾಗಿಯೇ ಸಿನಿಪ್ರಿಯರ ಪ್ರಶ್ನೆಯಾಗಿತ್ತು. ಆದರೆ, ಇದೂವರೆಗೂ ಯಶ್ ಮುಂದಿನ ಸಿನಿಮಾ ಬಗ್ಗೆ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಹೀಗಾಗಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ದಾಟಿದ್ದೂ ಆಗಿದೆ. ಹಲವು ದಾಖಲೆಗಳನ್ನು ಉಡೀಸ್ ಮಾಡಿದ್ದೂ ಆಗಿದೆ. ಇನ್ನಾದರೂ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವೀಲ್ ಮಾಡಲಿ ಅನ್ನೋದು ಅಭಿಮಾನಿಗಳ ಆಸೆ. ಆದರೆ, ಯಶ್ ಮಾತ್ರ ಸಣ್ಣದೊಂದು ಕ್ಲ್ಯೂ ಕೂಡ ಕೊಡುತ್ತಿಲ್ಲ. ಇಷ್ಟೆಲ್ಲಾ ಸೀಕ್ರೆಟ್ ಮಾಡಿದರೂ, ಗಾಂಧಿನಗರದಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದೆ.

ಇದೇ ಮೊದಲ ಬಾರಿಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾ ನಿರ್ಮಾಪಕರಿಂದ ಹಿಡಿದು, ಸಿನಿಮಾ ಕಥೆಯ ಬಗ್ಗೆನೂ ಸುಳಿವನ್ನು ಬಿಟ್ಟುಕೊಟ್ಟಿದೆ. ಹಾಗಿದ್ದರೆ, ಮುಂದಿನ ಸಿನಿಮಾ ಯಾವುದು? ನಿರ್ಮಾಪಕ ಯಾರು? ಸ್ಯಾಂಡಲ್‌ವುಡ್ ಮಂದಿ ಕೊಟ್ಟ ಸುಳಿವು ಏನು? ಎಂದು ತಿಳಿಯಲು ಮುಂದೆ ಓದಿ.

ಯಶ್ ಸಿನಿಮಾ ಬಗ್ಗೆ ಸಿನಿಮಾ ಮಂದಿ ಏನಂತಾರೆ?

ಯಶ್ ಸಿನಿಮಾ ಬಗ್ಗೆ ಸಿನಿಮಾ ಮಂದಿ ಏನಂತಾರೆ?

ಯಶ್ ಈಗ ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ. ಯಶ್ ಈಗ ನ್ಯಾಷನಲ್ ಸ್ಟಾರ್. ತನ್ನ ವೃತ್ತಿ ಬದುಕಿನ ಅತೀ ದೊಡ್ಡ ಯಶಸ್ಸು ಕಂಡಿರುವ ಯಶ್ ಮುಂದಿನ ಸಿನಿಮಾ ಶೀಘ್ರದಲ್ಲಿಯೇ ರಿವೀಲ್ ಮಾಡುವುದಾಗಿ ಯಶ್ ಹೇಳಿದ್ದರು. ಆತುರಕ್ಕೆ ಬಿದ್ದು ಏನನ್ನೂ ಮಾಡುವುದಿಲ್ಲ ಎಂದೂ ಹೇಳಿದ್ದರು. ಯಶ್ ಸುಳಿವು ಬಿಟ್ಟು ಕೊಡದೆ ಇದ್ದರೂ, ಕೆವಿಎನ್ ಪ್ರೊಡಕ್ಷನ್‌ನಲ್ಲಿ ಯಶ್ ಮುಂದಿನ ಸಿನಿಮಾ ಸೆಟ್ಟೇರುತ್ತೆ. ದುಬಾರಿ ವೆಚ್ಚದಲ್ಲಿ ಸಿನಿಮಾ ಮಾಡುತ್ತಾರೆ ಎಂದು ಸ್ಯಾಂಡಲ್‌ವುಡ್ ಮಂದಿ ಹೇಳುತ್ತಿದ್ದಾರೆ.

ಸ್ಯಾಂಡಲ್‌ವುಡ್ ಮಂದಿ ಅನುಮಾನವೇನು?

ಸ್ಯಾಂಡಲ್‌ವುಡ್ ಮಂದಿ ಅನುಮಾನವೇನು?

ಕೆವಿಎನ್ ಸಂಸ್ಥೆಗೆ ಯಶ್ ಕಾಲ್ ಶೀಟ್ ಕೊಟ್ಟಿದ್ದಾರೆ. ಮುಂದಿನ ಸಿನಿಮಾ ಕೆವಿಎನ್ ಸಂಸ್ಥೆನೇ ನಿರ್ಮಾಣ ಮಾಡುತ್ತೆ ಎನ್ನುತ್ತಾರೆ. ಹೀಗೆ ಹೇಳಲು ಒಂದು ಕಾರಣವೂ ಇದೆ. ಇತ್ತೀಚೆಗೆ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ತೆಗೆದ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ಫೋಟೊಗಳಲ್ಲಿ ಯಶ್ ಜೊತೆ ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಕೋಣಂಕಿ ಕೂಡ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಮುಂದಿನ ಸಿನಿಮಾ ಕೆವಿಎನ್ ಸಂಸ್ಥೆ ಜೊತೆ ಫಿಕ್ಸ್ ಎನ್ನುತ್ತಿದೆ ಸ್ಯಾಂಡಲ್‌ವುಡ್.

ಕೆವಿಎನ್‌ನಿಂದ ಮಾತ್ರ ಯಶ್ ಸಿನಿಮಾ ಸಾಧ್ಯ

ಕೆವಿಎನ್‌ನಿಂದ ಮಾತ್ರ ಯಶ್ ಸಿನಿಮಾ ಸಾಧ್ಯ

ಯಶ್ ಫ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಂತೆ ರೇಂಜ್ ಕೂಡ ಬದಲಾಗಿದೆ. ಸಿನಿಮಾದ ಬಜೆಟ್‌ನಿಂದ ಹಿಡಿದು, ಸಂಭಾವನೆ ಕೂಡ ಬಲು ದುಬಾರಿ. ಇಂತಹದ್ದೊಂದು ಸಿನಿಮಾವನ್ನು ನಿರ್ಮಾಣ ಮಾಡುವ ತಾಕತ್ತು ಕೆವಿಎನ್ ಸಂಸ್ಥೆಗೆ ಮಾತ್ರ ಇದೆ ಎನ್ನುತ್ತಿವೆ ಸ್ಯಾಂಡಲ್‌ವುಡ್ ಮೂಲಗಳು. ಹೀಗಾಗಿ ಯಶ್ ಜೊತೆ ಕೆವಿಎನ್‌ ಸಂಸ್ಥೆಯ ವೆಂಕಟ್ ನಾರಾಯಣ್ ಕೋಣಂಕಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಶ್ ಆಗಲಿ, ಕೆವಿಎನ್ ಸಂಸ್ಥೆಯಾಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆಯನ್ನು ನೀಡಿಲ್ಲ.

ಯಶ್ ಸಿನಿಮಾ ಮೇಲೆ ಕುತೂಹಲ

ಯಶ್ ಸಿನಿಮಾ ಮೇಲೆ ಕುತೂಹಲ

ಪ್ಯಾನ್ ಇಂಡಿಯಾ ಸೂಪರ್ ಪ್ರಭಾಸ್ 'ಬಾಹುಬಲಿ' ಸಕ್ಸಸ್‌ ಅನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಸೋತಿದ್ದಾರೆ. 'ಸಾಹೋ' ಹಾಗೂ 'ರಾಧೆ ಶ್ಯಾಮ್' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಸೋತಿವೆ. ಹೀಗಾಗಿ ಯಶ್ ಮೇಲೆ ಎಲ್ಲರ ಕಣ್ಣಿದೆ. ಆದರೆ, ಯಶ್ ಬೇರೆಯದ್ದೇ ದಾರಿ ಹಿಡಿಯುತ್ತಾರೆ. ಮುಂದಿನ ಸಿನಿಮಾ ಸಿನಿಮಾ ರೆಗ್ಯೂಲರ್ ಸಿನಿಮಾ ಆಗಿರಲ್ಲ ಎಂದು ಸ್ಯಾಂಡಲ್‌ವುಡ್‌ನ ಮಂದಿ ಚರ್ಚೆ ಮಾಡುತ್ತಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಎಷ್ಟು ಸತ್ಯ ಅನ್ನೋದು ಸಿನಿಮಾ ಅನೌನ್ಸ್ ಆಗೋವರೆಗೂ ಗೊತ್ತಾಗಲ್ಲ.

More from Filmibeat

English summary
Rumour about KGF 2 Star Yash Next Movie With KVN Productions, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X