ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್‌ರಿಂದ 'ಪುಷ್ಪ 2' ಅಪಾಯ!?
ಟಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ಡೈರೆಕ್ಟರ್ ಅಂದರೆ ಅದು ದೇವಿ ಶ್ರೀ ಪ್ರಸಾದ್. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತವೆ. ಸದ್ಯಕ್ಕೀಗ ಇದೇ ಸಂಗೀತ ನಿರ್ದೇಶಕ ನೀಡಿದ ಸಿನಿಮಾವೊಂದು ಟಾಲಿವುಡ್‌ನಲ್ಲಿ ರಿಲೀಸ್ ಆಗಿದೆ.
ರಾಮ್ ಪೋಥಿನೇನಿ ಹಾಗೂ ನಿರ್ದೇಶಕ ಲಿಂಗುಸಾಮಿ ಕಾಂಬಿನೇಷನ್ ಸಿನಿಮಾ 'ದಿ ವಾರಿಯರ್' ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ದೇವಿ ಶ್ರೀ ಪ್ರಸಾದ್ ವಿರುದ್ಧ ಅಲ್ಲು ಅರ್ಜುನ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
ಇದಕ್ಕೆಲ್ಲಾ ದೇವಿ ಶ್ರೀ ಪ್ರಸಾದ್ ಕಾರಣ
ದೇವಿಶ್ರೀ ಪ್ರಸಾದ್ ಸಂಗೀತ ನೀಡಿರುವ ಸಿನಿಮಾ 'ದಿ ವಾರಿಯರ್'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ, ಸೆಕೆಂಡ್ ಹಾಫ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿಲ್ಲ.

'ದಿ ವಾರಿಯರ್' ಸಿನಿಮಾದ ಸೆಕೆಂಡ್ ಹಾಫ್ ಡಲ್ ಹೊಡೆಯುವುದಕ್ಕೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರೇ ಕಾರಣ ಎಂದು ಟಾಲಿವುಡ್‌ನಲ್ಲಿ ಗುಲ್ಲೇಳುತ್ತಿದೆ. ಸೆಕೆಂಡ್ ಹಾಫ್‌ನಲ್ಲಿ ದೇವಿ ಶ್ರೀ ಪ್ರಸಾದ್ ನೀಡಿದ ಹಿನ್ನೆಲೆ ಸಂಗೀತ ನೀರಸವಾಗಿದೆ. ಈ ಕಾರಣಕ್ಕೆ ಸಿನಿಮಾ ಡಲ್ ಹೊಡೆಯುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಡಿಎಸ್‌ಪಿಯಿಂದ 'ಪುಷ್ಪ 2'ಗೆ ಅಪಾಯ
ರಾಮ್ ಪೋಥಿನೇನಿ ನಟಿಸಿದ 'ದಿ ವಾರಿಯರ್' ಸಿನಿಮಾ ನೋಡಿ ಬಂದ ಸಿನಿಪ್ರಿಯರು 'ಪುಷ್ಪ 2' ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಡಿಎಸ್‌ಪಿಯಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2'ಗೆ ಅಪಾಯವಿದೆ ಎಂದು ಹೇಳುತ್ತಿದ್ದಾರೆ.
ಪ್ರತಿಯೊಂದು ಸಿನಿಮಾಗಊ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಅನ್ನುವುದು ಅಷ್ಟೇ ಮುಖ್ಯ. ಆದರೆ, 'ದಿ ವಾರಿಯರ್' ಸಿನಿಮಾ ಸೋತಿದ್ದೇ ಡಲ್ ಬಿಜಿಎಂನಿಂದ ಎಂದು ಸಿನಿಪ್ರಿಯರು ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ಉಡಾಫೆಯಾಗಿಯೇ ಹಿನ್ನೆಲೆ ಸಂಗೀತ ನೀಡಿದರೆ, 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ.
ಸಲ್ಮಾನ್ ಸಿನಿಮಾದಿಂದಲೂ ಔಟ್
'ದಿ ವಾರಿಯರ್' ಸಿನಿಮಾ ನೋಡಿದ ಮೇಲೆ ಅಲ್ಲು ಅರ್ಜುನ್ ಅಭಿಮಾನಿಗಳು ದೇವಿ ಶ್ರೀ ಪ್ರಸಾದ್ ಅನ್ನು ನಂಬುತ್ತಿಲ್ಲ ಎಂದು ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ. ಇದೇ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, 'ಪುಷ್ಪ 2' ತಂಡ ಸಂಗೀತ ನಿರ್ದೇಶಕನ ಬದಲಾವಣೆಗೂ ಚಿಂತಿಸಬಹುದು ಎನ್ನಲಾಗಿದೆ.
ಇತ್ತೀಚೆಗೆ ದೇವಿ ಶ್ರೀ ಪ್ರಸಾದ್ ಸಲ್ಮಾನ್ ಖಾನ್ ಸಿನಿಮಾದಿಂದಲೂ ಹೊರಬಂದಿದ್ದಾರೆ. ಸಲ್ಮಾನ್ ಖಾನ್ ಹಾಗೂ ದೇವಿ ಶ್ರೀ ಪ್ರಸಾದ್ ನಡುವೆ ಸಂಗೀತದ ವಿಚಾರದಲ್ಲಿ ಹೊಂದಾಣಿಕೆಯಾಗಲಿಲ್ಲ ಎಂದು ಹೇಳಲಾಗುತ್ತಿತ್ತು. ಈಗ ಅಲ್ಲು ಅರ್ಜುನ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


Click it and Unblock the Notifications











