'ಬಚ್ಚನ್ ಪಾಂಡೆ' ಚಿತ್ರಕ್ಕೆ ಅಕ್ಷಯ್ ಕುಮಾರ್ ಪಡೆದ ಸಂಭಾವನೆ ಮುಂದೆ OTT ಕೊಟ್ಟ ಆಫರ್ ಲೆಕ್ಕಕ್ಕೇ ಇಲ್ಲ
ಮಾರ್ಚ್ 18ಕ್ಕೆ ಅಕ್ಷಯ್ ಕುಮಾರ್ ನಟಿಸಿದ 'ಬಚ್ಚನ್ ಪಾಂಡೆ' ರಿಲೀಸ್ ಆಗುತ್ತಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮತ್ತೆ ಧೂಳೆಬ್ಬಿಸಲು ಅಕ್ಷಯ್ ಕುಮಾರ್ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ ಒಂದು ವಾರಕ್ಕೆ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ RRR ರಿಲೀಸ್ ಆಗಲಿದೆ. ಹೀಗಿದ್ದರೂ, ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ಬಿಡುಗಡೆಗೆ ಮುಂದಾಗಿರುವುದು ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನಂತೂ ಸೃಷ್ಟಿಸಿದೆ.
'ಬಚ್ಚನ್ ಪಾಂಡೆ' ಥಿಯೇಟರ್‌ನಲ್ಲಿ ರಾಜಮೌಳಿಯ RRRಗೆ ಟಕ್ಕರ್ ಕೊಡುತ್ತಾ? ಅನ್ನೋ ಬಗ್ಗೆ ಬಾಲವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆನೇ 'ಬಚ್ಚನ್ ಪಾಂಡೆ' ಅವತಾರವತ್ತಲು ಅಕ್ಷಯ್ ಕುಮಾರ್ ಪಡೆದ ಸಂಭಾವನೆ ಕೇಳಿ ಕೆಲವರು ಬೆಚ್ಚಿಬೀಳುತ್ತಿದ್ದಾರೆ. ಕಿಲಾಡಿ ಅಕ್ಷಯ್ ಸಂಭಾವನೆ ಬಗ್ಗೆ ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ಒಟಿಟಿ ಕೊಟ್ಟ ಆಫರ್‌ಗೆ ನಿರ್ಮಾಪಕ ಒಪ್ಪದೆ ಇರಲು ಕಾರಣವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಬಚ್ಚನ್ ಪಾಂಡೆ'ಗೆ ಅಕ್ಷಯ್ ಕುಮಾರ್ ಪಡೆದಿದ್ದೆಷ್ಟು?
'ಬಚ್ಚನ್ ಪಾಂಡೆ' ಸಿನಿಮಾ ಬಗ್ಗೆ ಬಾಲಿವುಡ್ ಮಂದಿ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಆದರೆ, ಈ ಸಿನಿಮಾಗೆ ಅಕ್ಷಯ್ ಕುಮಾರ್ ಪಡೆದ ಸಂಭಾವನೆ ಬಗ್ಗೆ ಮಾತಾಡಿಕೊಳ್ತಿದ್ದಾರೆ. ಇದಕ್ಕೆ ಕಾರಣ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಒಂದು ಸುದ್ದಿ. ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ಸಿನಿಮಾಗೆ 100 ಕೋಟಿಗೆ ಒಂದು ಕೋಟಿ ಸಂಭಾವವನೆ ಪಡೆದಿದ್ದಾರಂತೆ. ಅಂದರೆ, ಒಂದು ಸಿನಿಮಾಗೆ ಬರೋಬ್ಬರಿ 99 ಕೋಟಿ. ಇದರಲ್ಲೂ ಒಂದು ಇಂಟೆರೆಸ್ಟಿಂಗ್ ವಿಷಯ ಏನೆಂದರೆ, ನಿರ್ಮಾಪಕ ಸಾಜಿದ್ ನಾಡಿಯದ್ವಾಲ ಜೊತೆ ಮಾಡಿಕೊಂಡ ಒಪ್ಪಂದದಂತೆ ಅಕ್ಷಯ್ ಕುಮಾರ್ ತಮ್ಮ ಸಂಭಾವನೆಯಲ್ಲಿ ಡಿಸ್ಕೌಂಟ್ ಕೊಟ್ಟಿದ್ದಾರೆ. ಈ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯವ ನಟರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಇದ್ದಾರೆ.

ಒಟಿಟಿ ಕೊಟ್ಟ ಆಫರ್ ತಿರಸ್ಕರಿಸಿದ ನಿರ್ಮಾಪಕ
'ಬಚ್ಚನ್ ಪಾಂಡೆ' ಸಿನಿಮಾ ನಿರ್ಮಾಣ ಮಾಡಿದ ಸಾಜಿದ್ ನಾಡಿಯದ್ವಾಲ ಬಾಲಿವುಡ್‌ನ ಸುಪ್ರಸಿದ್ಧ ನಿರ್ಮಾಪಕ. ಇವರಿಗೆ ಒಟಿಟಿಯಿಂದ ಭಾರೀ ಮೊತ್ತದ ಆಫರ್ ಬಂದಿತ್ತಂತೆ. ಆದರೆ ಕೊನೆಯ ಕ್ಷಣದಲ್ಲಿ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಅಕ್ಷಯ್ ಕುಮಾರ್ ಸಂಭಾವನೆ ಎನ್ನಲಾಗಿದೆ. ಒಟಿಟಿ ಸಂಸ್ಥೆಯೊಂದು 'ಬಚ್ಚನ್ ಪಾಂಡೆಗೆ 175 ಕೋಟಿ ನೀಡಲು ಮುಂದಾಗಿತ್ತು. ಈ ಮೂಲಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದೆ ನೇರವಾಗಿ ಒಟಿಟಿಯಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಅಕ್ಷಯ್‌ಗೆ 99 ಕೋಟಿ ಸಂಭಾವನೆ ಹೋಗಿದೆ. ನಿರ್ಮಾಪಕರಿಗೆ ಅಂತ ಉಳಿಯುವುದು ಬರೀ 76 ಕೋಟಿ. ಇದರಲ್ಲಿ ಮೇಕಿಂಗ್ ಖರ್ಚು, ಉಳಿದ ನಟರಿಗೆ ಸಂಭಾವನೆ, ಪ್ರಚಾರ ಅಂತ ದೊಡ್ಡ ಮೊತ್ತವೇ ಖರ್ಚು ಆಗಿರುವ ಸಾಧ್ಯತೆ ಇದೆ. ಈ ಕಾರಣಕ್ಕೆ ನಿರ್ಮಾಪಕ ಒಟಿಟಿ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

ಜನವರಿಯಲ್ಲಿ ಬಚ್ಚನ್ ಪಾಂಡೆ ರಿಲೀಸ್ ಆಗ್ಬೇಕಿತ್ತು
'ಬಚ್ಚನ್ ಪಾಂಡೆ' ಈ ವರ್ಷದ ಮೊದಲ ತಿಂಗಳಿನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಸಿನಿಮಾ ಬಿಡುಗಡೆಯನ್ನು ಮತ್ತೆ ಮುಂದೂಡಲಾಗಿತ್ತು. ಈಗ ಮಾರ್ಚ್ 18ಕ್ಕೆ ರಿಲೀಸ್ ಆಗಲಿದೆ. ಇನ್ನು ಬಿಡುಗಡೆ ಕೆಲವು ದಿನಗಳಿರುವಾಗಲೇ ಸಿನಿಮಾ ಬಗ್ಗೆ ಒಂದೊಂದೇ ವಿಷಯ ಹೊರಬೀಳುತ್ತಿದೆ. ಆದರೆ, ಒಂದು ವಾರದಲ್ಲೇ 'ಬಚ್ಚನ್ ಪಾಂಡೆ' ಬಾಕ್ಸಾಫೀಸ್ ಲೂಟಿ ಮಾಡುತ್ತಾ ಅನ್ನುವ ಪ್ರಶ್ನೆ ಎದುರಾಗಿದೆ.

'ಬಚ್ಚನ್ ಪಾಂಡೆ' ಮೇಲೆ ನಿರೀಕ್ಷೆ
ಅಕ್ಷಯ್ ಕುಮಾರ್ ನಟಿಸಿದ 'ಬಚ್ಚನ್ ಪಾಂಡೆ' ಮಾರ್ಚ್ 18ಕ್ಕೆ ರಿಲೀಸ್ ಆಗುತ್ತಿದೆ. ಸೋತು ಸುಣ್ಣವಾಗಿರುವ ಬಾಲಿವುಡ್‌ನಲ್ಲಿ 'ಬಚ್ಚನ್ ಪಾಂಡೆ' ಮೇಲೆ ನಂಬಿಕೆ ದುಪ್ಪಟ್ಟಾಗಿದೆ. ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಕೃತಿ ಸನನ್, ಜಾಕ್ವೆಲೀನ್ ಫರ್ನಾಂಡೀಸ್, ಅರ್ಶದ್ ವರ್ಸಿ ಕೂಡ ನಟಿಸಿದ್ದು, ಸಿನಿಮಾ ಸದ್ದು ಮಾಡಲು ಆರಂಭಿಸಿದೆ.


Click it and Unblock the Notifications











