ಯಶ್ ಸಿನಿಮಾಗಾಗಿ ಕಾದುಕೂತಿದ್ದವರಿಗೆ ಮತ್ತೊಂದು ಸುದ್ದಿ: ಇನ್ನೊಂದು ವಾರವಂತೆ!

ರಾಕಿಂಗ್ ಸ್ಟಾರ್ ಯಶ್ ಮುಂದಿನ ಯಾವುದು? ಸದ್ಯ ಇಡೀ ದೇಶಾದ್ಯಂತ ಇರೋ ಸಿನಿಪ್ರಿಯ ಕೇಳುತ್ತಿರೋ ಮಿಲಿಯನ್ ಡಾಲರ್‌ ಪ್ರಶ್ನೆ ಇದೆನೇ. ಯಾಕಂದ್ರೆ, 'ಕೆಜಿಎಫ್ 2' ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಹಲ್‌ಚಲ್ ಎಬ್ಬಿಸಿತ್ತು. ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದ್ದ ಈ ಸಿನಿಮಾ ಬಳಿಕ ಯಶ್ ಮೇಲೆ ಎಲ್ಲರ ಕಣ್ಣು ಇದೆ. ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದ ಬಳಿಕವೂ ಯಶ್ ಸಿನಿಮಾ ಇನ್ನು ಅನೌನ್ಸ್ ಆಗಿಲ್ಲ.

'ಕೆಜಿಎಫ್ 2' ಸ್ಯಾಂಡಲ್‌ವುಡ್ ಸಿನಿಮಾ ಆಗಿದ್ದರೂ, ಡಬ್ ಆದ ಭಾಷೆಗಳಲ್ಲೆಲ್ಲಾ ಚಿಂದಿ ಉಡಾಯಿಸಿತ್ತು. ಅದರಲ್ಲೂ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಇಷ್ಟೊಂದು ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ಮೇಲೂ ಯಶ್ ಇನ್ನೂ ಸಿನಿಮಾ ಅನೌನ್ಸ್ ಮಾಡಿಲ್ಲ. ಇತ್ತ ಫ್ಯಾನ್ ಕಾದೂ ಕಾದು ಸುಸ್ತಾಗಿದ್ದಾರೆ. ಈ ಗ್ಯಾಪ್‌ನಲ್ಲಿ ರಾಕಿ ಭಾಯ್ 19ನೇ ಸಿನಿಮಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಎರಡು ಸಿನಿಮಾ ನಿರ್ದೇಶಿಸಿದ ನಿರ್ದೇಶಕ ಸ್ಕ್ರೀಪ್ಟ್ ಮಾಡುತ್ತಿದ್ದಾರೆ ಅಂತ ಗುಲ್ಲೆದ್ದಿದೆ.

ರಾಕಿಭಾಯ್ ಮುಂದೆ 2 ಸ್ಟ್ರಿಪ್ಟ್?

ರಾಕಿಭಾಯ್ ಮುಂದೆ 2 ಸ್ಟ್ರಿಪ್ಟ್?

ಯಶ್ 19ನೇ ಸಿನಿಮಾ ಬಗ್ಗೆ ಸುದ್ದಿಗಳು ಓಡಾಡುತ್ತಿರೋದು ಇದೇ ಮೊದಲೇನಲ್ಲ. 'ಕೆಜಿಎಫ್ 2' ರಿಲೀಸ್ ಆದಲ್ಲಿಂದ ಒಂದಲ್ಲ ಒಂದು ವದಂತಿಗಳು ಸದ್ದು ಮಾಡುತ್ತಲೇ ಇವೆ. ಆದರೆ ಅವೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ. ಈ ಮಧ್ಯೆ ಮತ್ತೊಂದು ಸುದ್ದಿ ಬಹಳ ಜೋರಾಗೇ ಹರಿದಾಡುತ್ತಿದೆ. ರಾಕಿ ಭಾಯ್ ಮುಂದೆ ಸದ್ಯ ಎರಡು ಸ್ಕ್ರಿಪ್ಟ್‌ಗಳು ಇದೆಯಂತೆ. ಅವುಗಳಲ್ಲಿ ಒಂದನ್ನು ಯಶ್ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದ ಸದ್ಯ ಓಡಾಡುತ್ತಿರೋ ಸುದ್ದಿ.

ಯಶ್‌ಗೆ ಆಕ್ಷನ್ ಕಟ್ ಹೇಳುವವರು ಯಾರು?

ಯಶ್‌ಗೆ ಆಕ್ಷನ್ ಕಟ್ ಹೇಳುವವರು ಯಾರು?

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಸ್ಕ್ರಿಪ್ಟ್ ನಡೆಯುತ್ತಿದೆ. ಹೊಸ ನಿರ್ದೇಶಕನಿಗೆ ಮತ್ತೆ ಓಕೆ ಅಂದಿದ್ದಾರೆ ಅನ್ನೋದು ಹೊಸ ವರದಿ. ಈ ನಿರ್ದೇಶಕ ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರಂತೆ. ಅವರಿಗೊಂದು ಅವಕಾಶ ಕೊಟ್ಟಿದ್ದು, ಇದೊಂದು ಐತಿಹಾಸಿಕ ಆಕ್ಷನ್ ಸಿನಿಮಾ ಎಂದು ಹೇಳಲಾಗುತ್ತಿದೆ. ದುಬಾರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತೆ ಎನ್ನಲಾಗಿದೆ.

ಇನ್ನೊಂದು ಸಿನಿಮಾ ಯಾವುದು?

ಇನ್ನೊಂದು ಸಿನಿಮಾ ಯಾವುದು?

ಇನ್ನೊಂದ್ಕಡೆ ಇತ್ತೀಚೆಗೆ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ತಮಿಳು ನಿರ್ದೇಶಕರೊಬ್ಬರು ಕಥೆ ಹೇಳಿದ್ದಾರೆ. ಆ ಸ್ಟೋರಿ ಕೂಡ ಯಶ್‌ಗೆ ಥ್ರಿಲ್ ಕೊಟ್ಟಿದ್ದು, ಅದನ್ನೂ ಜೊತೆಯಲ್ಲಿಟ್ಟುಕೊಂಡಿದ್ದಾರೆ. ಈ ಸಿನಿಮಾವನ್ನು ಯಶ್ ಒಪ್ಪಿಕೊಂಡರೆ, 2023 ಮಧ್ಯಾಂತರದೊಳಗೆ ಮುಗಿಸಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಂದ್ಹಾಗೆ, ಇಂತಹದ್ದೊಂದು ವರದಿ ಟಾಲಿವುಡ್‌ ಸಿನಿಮಾಗಳನ್ನು ವರದಿ ಮಾಡೋ ವೆಬ್‌ ಸ್ಟೈಟ್ ಒಂದು ರಿವೀಲ್ ಮಾಡಿದೆ.

ಇನ್ನೊಂದು ವಾರ ಅಷ್ಟೇ

ಇನ್ನೊಂದು ವಾರ ಅಷ್ಟೇ

ಯಶ್ ತಮ್ಮ 19ನೇ ಸಿನಿಮಾವನ್ನು ಇನ್ನೊಂದು ವಾರದಲ್ಲಿ ಅನೌನ್ಸ್ ಮಾಡುತ್ತಾರೆ ಅಂತಾನೂ ವರದಿಯಾಗಿದೆ. ಆದರೆ, ಈ ಬಗ್ಗೆ ಯಾರೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ, ಸಿನಿಪ್ರಿಯರ ತಲೆಯೊಳಗೆ ಹುಳ ಬಿಟ್ಟಿದ್ದು, ಎರಡು ಸಿನಿಮಾ ಮಾಡಿರುವ ಕನ್ನಡದ ನಿರ್ದೇಶಕ ಯಾರು? ಅಂತ ಹುಡುಕುತ್ತಿದ್ದಾರೆ. ಕೆಲವರು ಇದು ರಾಜ್‌ ಬಿ ಶೆಟ್ಟಿ ಇರಬಹುದಾ? ಅಂತ ಗೆಸ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಗರುಡ ಗಮನ ವೃಷಭ ವಾಹನ.

More from Filmibeat

English summary
Rumour Is That KGF 2 Starrer Yash Will Announce His Next Movie In Two Weeks, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X