800 ಕೋಟಿ ರೂ. ನಿರ್ದೇಶಕನೊಂದಿಗೆ ಯಶ್ ಸಿನಿಮಾ: ಏನಿದು ಸುದ್ದಿ?

ಯಶ್ ಕೇವಲ ಸ್ಯಾಂಡಲ್‌ವುಡ್ ಸ್ಟಾರ್ ಅಲ್ಲ ಅನ್ನೋದು ಎಲ್ಲರಿಗೂ ಮನವರಿಕೆಯಾಗಿದೆ. 'ಕೆಜಿಎಫ್ 2' ತೆರೆಕಂಡ ಬಳಿಕ ಯಶ್ ರೇಂಜ್ ಮತ್ತಷ್ಟು ಬದಲಾಗಿದೆ. 'ಕೆಜಿಎಫ್ 2' ಮೆಗಾ ಹಿಟ್ ಆದ ಬಳಿಕ ಯಶ್‌ ಮುಂದಿನ ಸಿನಿಮಾ ಬಗ್ಗೆ ಎದ್ದಿರೋ ಕುತೂಹಲ ಅಷ್ಟಿಷ್ಟಲ್ಲ. ಆದರೂ, ಯಶ್ ಮುಂದಿನ ಸಿನಿಮಾ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಮಧ್ಯೆ ಯಶ್‌ ಮುಂದಿನ ಸಿನಿಮಾಗೆ ಯಾರು ನಿರ್ದೇಶನ ಮಾಡಬಹುದು ಅನ್ನೋ ಊಹಾಪೋಹಗಳು ಒಂದೆರಡಲ್ಲ.

ಜನರಿನ್ನೂ 'ಕೆಜಿಎಫ್ 2' ಹ್ಯಾಂಗೋವರ್‌ನಿಂದ ಹೊರಬಂದಿಲ್ಲ. ಆಗಲೇ ಮತ್ತೊಂದು ಸುದ್ದಿಯೊಂದು ಹರಿದಾಡುತ್ತಿದೆ. ಭಾರತದ ಅತೀ ಜನಪ್ರಿಯ ನಿರ್ದೇಶಕರೊಂದಿಗೆ ರಾಕಿ ಭಾಯ್ ಕೈ ಜೋಡಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

'ಕೆಜಿಎಫ್ 2' ಹಿಟ್ ಆಗುತ್ತಿದ್ದಂತೆ ಯಶ್‌ ಹುಡುಕಿಕೊಂಡು ಹಲವು ಪ್ರಾಜೆಕ್ಟ್‌ಗಳು ಬಂದಿವೆ ಎನ್ನಲಾಗಿದೆ. ಆದರೂ, ಯಶ್ ಇನ್ನೂ ಯಾವ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡಬೇಕು ಅನ್ನುವ ನಿರ್ಧಾರ ಮಾಡಿಲ್ಲ ಎನ್ನಲಾಗಿದೆ. ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ಯಶ್, ದೊಡ್ಡ ಡೈರೆಕ್ಟರ್ ಜೊತೆ ಕೈ ಜೋಡಿಸಲಿದ್ದಾರಂತೆ. ಇದು ನರ್ತನ್ ಸಿನಿಮಾ ಬಳಿಕ ಸೆಟ್ಟೇರುತ್ತಾ? ಅಥವಾ ಅದಕ್ಕೂ ಮುನ್ನ ಶುರುವಾಗುತ್ತಾ ಅನ್ನೋದೇ ಕುತೂಹಲ.

ನರ್ತನ್ ಸಿನಿಮಾ ಕಥೆಯೇನು?

ನರ್ತನ್ ಸಿನಿಮಾ ಕಥೆಯೇನು?

'ಕೆಜಿಎಫ್ 2' ಬಳಿಕ ನರ್ತನ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರುತ್ತೆ ಅನ್ನೋ ಸುದ್ದಿ ಎಲ್ಲಾ ಕಡೆ ಹಬ್ಬಿದೆ. ಇನ್ನೊಂದು ಕಡೆ, ಯಶ್ ಅಥವಾ ನರ್ತನ್ ಈ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಹೀಗಾಗಿ ಈ ಪ್ರಾಜೆಕ್ಟ್ ಏನಾಗಿದೆ ಅನ್ನೋದೂ ಗೊತ್ತಿಲ್ಲ. ಈ ಮಧ್ಯೆ ನೂರೆಂಟು ಊಹಾ-ಪೋಹಗಳಂತೂ ಓಡಾಡುತ್ತಲೇ ಇವೆ. ಈ ಹಿಂದೆ ಬಂದಿದ್ದ ಸುದ್ದಿ ಪ್ರಕಾರ, ನರ್ತನ್ ಹಾಗೂ ಯಶ್ ಕಾಂಬಿನೇಷನ್ ಸಿನಿಮಾ ಈ ತಿಂಗಳು ಅನೌನ್ಸ್ ಆಗಬೇಕಿತ್ತು. ಆದರೆ, ಜೂನ್ ಮುಗಿಯುತ್ತಿದ್ದರೂ, ಇಬ್ಬರ ಕಾಂಬಿನೇಷನ್‌ ಬಗ್ಗೆ ಸುಳಿವೇ ಇಲ್ಲ. ಈ ಮಧ್ಯೆ ಮತ್ತೊಬ್ಬ ನಿರ್ದೇಶಕನ ಎಂಟ್ರಿ ಆಗಿದೆ.

ಶಂಕರ್ ಜೊತೆ ಯಶ್ ಸಿನಿಮಾ?

ಶಂಕರ್ ಜೊತೆ ಯಶ್ ಸಿನಿಮಾ?

ಯಶ್ ಸ್ಯಾಂಡಲ್‌ವುಡ್‌ಗಿಂತ ಬಾಲಿವುಡ್‌ನಲ್ಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಸದ್ಯ ಬಾಲಿವುಡ್‌ನಲ್ಲೊಂದು ಸುದ್ದಿ ಹರಿದಾಡುತ್ತಿದೆ. ಭಾರತದ ಮೋಸ್ಟ್ ಪಾಪುಲರ್ ನಿರ್ದೇಶಕ ಶಂಕರ್‌ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಆರಂಭ ಆಗಲಿದೆಯಂತೆ. ಶಂಕರ್ ಎಲ್ಲಾ ಭಾಷೆಯ ಜನರಿಗೂ ಪರಿಚಯವಿದ್ದು, ಈ ಕಾಂಬಿನೇಷನ್ ಸಖತ್ತಾಗೇ ವರ್ಕ್ ಆಗುತ್ತೆ. ಇದೊಂದು ಮೆಗಾ ಕಾಂಬಿನೇಷನ್ ಸಿನಿಮಾ ಎಂದು ಬಾಲಿವುಡ್ ವೆಬ್‌ ಸೈಟ್ ಒಂದು ವರದಿ ಮಾಡಿದೆ.

ಮೆಗಾ ಜೋಡಿ ಹೈಲೈಟ್ ಏನು?

ಮೆಗಾ ಜೋಡಿ ಹೈಲೈಟ್ ಏನು?

ಶಂಕರ್ ನಿರ್ದೇಶಿಸಿದ ಸಿನಿಮಾ 2.O ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ ಈ ಸಿನಿಮಾ 856 ಕೋಟಿ ರೂ. ಕಲೆ ಹಾಕಿತ್ತು. ಈಗ 'ಕೆಜಿಎಫ್ 2' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿದ್ದು, 1230 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಾಗಿ ಇವರಿಬ್ಬರೂ ಸೇರಿದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಬಹುದು ಎನ್ನುವುದು ಬಾಲಿವುಡ್ ಲೆಕ್ಕಾಚಾರ. ಆದರೆ, ಈ ವರದಿ ಕೇವಲ ಗಾಳಿಸುದ್ದಿನಾ? ಇಲ್ಲಾ ಇದರಲ್ಲಿ ಸತ್ಯವೇನಾದರೂ ಅಡಗಿದೆಯಾ? ಅನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಶಂಕರ್-ಯಶ್ ಇಬ್ಬರೂ ಬ್ಯುಸಿ

ಶಂಕರ್-ಯಶ್ ಇಬ್ಬರೂ ಬ್ಯುಸಿ

ಶಂಕರ್ ಈಗ ಟಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಶಂಕರ್ ರಾಕಿ ಭಾಯ್ ಸಿನಿಮಾ ಕೈಗೆತ್ತಿಗೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನೊಂದ್ಕಡೆ ಯಶ್ 'ಮಫ್ತಿ' ನಿರ್ದೇಶಕ ನರ್ತನ್ ಸಿನಿಮಾ ಮಾಡುವುದು ಕನ್ಫರ್ಮ್ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.

More from Filmibeat

English summary
Rumour Is that KGF Star Yash Is Teaming Up With Pan India Director Shankar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X