'ಉತ್ತರಕಾಂಡ' ಕನ್ನಡದ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್'? ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮಾಸ್ ಸಿನಿಮಾ ಸೆಟ್ಟೇರಿದೆ. ಅದರೆಲ್ಲೇನು ವಿಶೇಷ ಅಂದರೆ, ಮೋಹಕತಾರೆ ರಮ್ಯಾ, ಡಾಲಿ ಧನಂಜಯ್ ಕಾಂಬಿನೇಷನ್ ಕಣ್ಮುಂದೆ ಬರುತ್ತೆ. ಇತ್ತ ರಮ್ಯಾ ಬೇರೆ ಸ್ಕ್ರಿಪ್ಟ್ ಚಿಂದಿ ಅಂತ ಹೇಳಿ ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ.

ಮೋಹಕತಾರೆ ಸ್ಯಾಂಡಲ್‌ವುಡ್‌ಗೆ ಕಮ್‌ ಬ್ಯಾಕ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದು ಗೊತ್ತೇ ಇದೆ. ಇನ್ನೇನು ರಾಜ್‌ ಬಿ ಶೆಟ್ಟಿ ಈ ಸಿನಿಮಾದಿಂದ ಕಮ್‌ಬ್ಯಾಕ್ ಮಾಡಿದ್ರು ಅನ್ನೋವಾಗಲೇ ಆ ಸಿನಿಮಾದಿಂದ ಹೊರಬಂದಿದ್ದು ನಿರಾಸೆಯನ್ನೂ ಮೂಡಿಸಿದ್ದರು. ಆದ್ರೀಗ 'ಉತ್ತರಕಾಂಡ'ದ ಮೂಲಕ ಖಡಕ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ರಮ್ಯಾ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‌ ಸಿನಿಮಾ 'ಉತ್ತರಕಾಂಡ' ಸೆಟ್ಟೇರಿದೆ. ಈ ಸಿನಿಮಾ ಮೂಲಕ ರಮ್ಯಾ ಕನ್ನಡ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿರೋದು ವಿಷಯ ಒಂದ್ಕಡೆಯಾದ್ರೆ, ಇನ್ನೊಂದು ಕಡೆ ಬಾಲಿವುಡ್‌ ಸಿನಿಮಾನೇ ಪ್ರೇರಣೆ ಅನ್ನೋ ಮಾತು ಕೇಳಿ ಬರುತ್ತಿದೆ.

ಕನ್ನಡದ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್'?

ಕನ್ನಡದ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್'?

'ಉತ್ತರಕಾಂಡ' ಸೆಟ್ಟೇರಿದ್ದಷ್ಟೇ.. ಆಗಲೇ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ. ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಈ ಸಿನಿಮಾ ಬಾಲಿವುಡ್‌ನಲ್ಲಿ ಯಶಸ್ಸು ಕಂಡಿದ್ದ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಸಿನಿಮಾದಿಂದ ಪ್ರೇರಣೆ ಅನ್ನೋ ಗುಸು ಗುಸು ಕೇಳಿ ಬರುತ್ತಿದೆ. ಇದೇ ಸಿನಿಮಾವನ್ನು ಉತ್ತರ ಕರ್ನಾಟಕದ ಬ್ಯಾಕ್‌ಗ್ರೌಂಡ್‌ನಲ್ಲಿ ಶೂಟ್ ಮಾಡಲಾಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

2 ಚಾಪ್ಟರ್‌ಗಳಲ್ಲಿ 'ಉತ್ತರಕಾಂಡ'?

2 ಚಾಪ್ಟರ್‌ಗಳಲ್ಲಿ 'ಉತ್ತರಕಾಂಡ'?

'ಉತ್ತರಕಾಂತ' ಒಂದು ಸಿನಿಮಾ ಅಲ್ಲ. 'ಕೆಜಿಎಫ್' ಸಿನಿಮಾದಂತೆ ಈ ಸಿನಿಮಾ ಎರಡು ಚಾಪ್ಟರ್‌ಗಳಲ್ಲಿ ರಿಲೀಸ್ ಆಗಲಿದೆ ಅನ್ನೋದು ಇನ್ನು ವಿಷಯ. ಬಾಲಿವುಡ್‌ ಸಿನಿಮಾ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಕೂಡ ಎರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗಿತ್ತು. ಹೀಗಾಗಿ 'ಉತ್ತರಕಾಂಡ' ಕನ್ನಡ ಚಿತ್ರರಂಗಕ್ಕೆ ಮತ್ತೊಂದು ವಿಶಿಷ್ಟ ಅನುಭವವನ್ನು ನೀಡೋದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಅಥವಾ ನಿರ್ದೇಶಕರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಸಿನಿಮಾದ ಪ್ರೇರಣೆನಾ? ಇಲ್ವಾ? ಅನ್ನೋದು ಇನ್ನು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಕಥೆಯೇನು?

'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಕಥೆಯೇನು?

ಬಾಲಿವುಡ್‌ ಸಿನಿಮಾ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಹೊಸ ಟ್ರೆಂಡ್ ಸೃಷ್ಟಿಸಿದೆ ಸಿನಿಮಾ. ಜಾರ್ಖಂಡ್‌ನ ಎರಡನೇ ದೊಡ್ಡ ನಗರ ಧನ್‌ಬಾದ್‌ನಲ್ಲಿ ನಡೆಯುವ ಕಥೆ ಇದು. ಮೂರು ಕುಟುಂಬಗಳ ಗುದ್ದಾಟ, ಕಲ್ಲಿದ್ದಲು ಮಾಫಿಯಾ, ಅದರ ಸುತ್ತ ಸುತ್ತುವ ರಾಜಕೀಯ ಇವೆಲ್ಲವನ್ನೂ ತೆರೆಮೇಲೆ ತಂದಿದ್ದರು ಅನುರಾಗ್ ಕಶ್ಯಪ್. 1941 ರಿಂದ 2009ರವರೆಗಿನ 68 ವರ್ಷಗಳ ಕಥೆಯನ್ನು ಹೇಳಲಾಗಿತ್ತು. ಸುಮಾರು 321 ನಿಮಿಷಗಳಷ್ಟು ಉದ್ದದ ಸಿನಿಮಾವನ್ನು ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿದ್ದರು. ಆದರೆ, ಅದು ಸಾಧ್ಯವಾಗದ ಹಿನ್ನೆಲೆ ಎರಡು ಭಾಗಗಳಲ್ಲಿ ರಿಲೀಸ್ ಆಗಿತ್ತು.

'ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ'

'ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ'

'ಉತ್ತರಕಾಂಡ' ಬಗ್ಗೆ ರಮ್ಯಾ ಥ್ರಿಲ್ ಆಗಿದ್ದಾರೆ. "

'ಹತ್ತು ವರ್ಷಗಳ ನಂತರ 'ಉತ್ತರಕಾಂಡ'ದ ಮೂಲಕ ನಾನು ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ 'ರತ್ನನ್ ಪ್ರಪಂಚ'ದಲ್ಲಿ ಮಾಡೋಕಾಗ್ಲಿಲ್ಲ ಅನ್ನೋ ಬೇಸರ ಇತ್ತು. ಆದ್ರೆ ಈಗ ಅದೇ ತಂಡದ ಜೊತೆ ಸಿನೆಮಾ ಮಾಡ್ತಿರೋದು ತುಂಬಾ ಸಂತೋಷದ ವಿಚಾರ. ಸ್ಕ್ರಿಪ್ಟ್ ಚಿಂದಿಯಾಗಿದೆ. ಧನು, ಕಾರ್ತಿಕ್, ಯೋಗಿ ಇತ್ತೀಚಿನ ದಿನಗಳಲ್ಲಿ ನನಗೆ ಬಹಳ ಹತ್ತಿರವಾದೋರು.. ಹಾಗೂ ತುಂಬಾ ಆಪ್ತರು ಕೂಡ. ರೋಹಿತ್ ಪದಕಿ, ಅರವಿಂದ್ ಕಶ್ಯಪ್, ಚರಣ್ ರಾಜ್, ವಿಶ್ವಾಸ್, ದೀಪು.. ಈ ದೈತ್ಯ ಪ್ರತಿಭೆಗಳ ಜೊತೆ ಕೆಲಸ ಮಾಡಲು ಕಾಯ್ತಾ ಇದ್ದೀನಿ.. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ.. ತುದಿಗಾಲಲ್ಲಿದ್ದೇನೆ. ನಿಮ್ಮ ಪ್ರೀತಿಗೆ ಚಿರಋಣಿ.. ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ..' ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.

More from Filmibeat

English summary
Rumour Is that Ramya Dhananjay Starrer Uttarakhanda is Inspired by Gangs Of Wasseypur, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X