Alia Bhatt-Ranbir Wedding: ಈ ಬಾರಿ ಆಲಿಯಾ ಭಟ್, ರಣ್‌ಬೀರ್ ಕಪೂರ್ ಮದುವೆ ಗ್ಯಾರಂಟಿ: ಶೀಘ್ರದಲ್ಲೇ ಕಲ್ಯಾಣ!
ಬಾಲಿವುಡ್‌ನ ಹಾಟೆಸ್ಟ್ ಕಪಲ್ ಯಾರು ಅಂದ್ರೆ, ಎಲ್ಲರ ಬೆರಳು ನೇರವಾಗಿ ಆಲಿಯಾ ಹಾಗೂ ರಣ್‌ಬೀರ್ ಕಪೂರ್ ಕಡೆಗೆ ಹೋಗುತ್ತೆ. ಈ ಜೋಡಿ ಒಟ್ಟಿಗೆ ಓಡಾಡಲು ಆರಂಭ ಮಾಡಿದ್ದಲ್ಲಿಂದ ಎಲ್ಲರ ಕಣ್ಣು ಇವರ ಮೇಲೆ ಇದೆ. ಈ ಜೋಡಿ ಹಕ್ಕಿಗಳು ಯಾವಾಗ ಮದುವೆ ಆಗುತ್ತಾರೆ? ಈ ಶುಭ ಸಮಾರಂಭವನ್ನು ಯಾವಾಗ ನೋಡುತ್ತೇವೋ ಅಂತ ಕಾದು ಕೂತಿದ್ದಾರೆ.
ಆಲಿಯಾ ಭಟ್ ಸಿನಿಮಾದಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿ ತೇಲಾಡುತ್ತಿದ್ದಾರೆ. ಇಂದು(ಮಾರ್ಚ್ 25) ಆಲಿಯಾ ಭಟ್ ನಟನೆಯ RRR ಬಿಡುಗಡೆಯಾಗಿದೆ. ಈ ಸಿನಿಮಾ ಕೂಡ ಮೆಗಾ ಹಿಟ್ ಆಗುತ್ತೆ ಅನ್ನುವುದು ಮೊದಲ ದಿನವೇ ಗೊತ್ತಾಗಿ ಹೋಗಿದೆ. ಒಂದು ತಿಂಗಳ ಹಿಂದಷ್ಟೆ ರಿಲೀಸ್ ಆದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಕೂಡ ಬಾಕ್ಸಾಫೀಸ್ ಗೆದ್ದು ಬೀಗಿದೆ. ಇಂತಹ ಸಂದರ್ಭದಲ್ಲಿಯೇ ಆಲಿಯಾ ಭಟ್ ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆಲಿಯಾ-ರಣ್‌ಬೀರ್ ಮದುವೆ ಗುಸುಗುಸು
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಜೋಡಿ ಹಕ್ಕಿಗಳು. ಬಾಲಿವುಡ್ ಮಂದಿಗೆ ಈ ಜೋಡಿ ಸಿಕ್ಕಾಪಟ್ಟೆ ಫೇವರಿಟ್. ಡಿನ್ನರ್, ಡೇಟಿಂಗ್ ಅಂತ ಸುತ್ತಾಡಿ ಸುದ್ದಿಯಾಗಿದ್ದ ಆಲಿಯಾ-ರಣ್‌ಬೀರ್ ಮದುವೆ ಆಗುತ್ತಿದ್ದಾರೆ ಅಂತ ಸುದ್ದಿ ಹಬ್ಬಿದೆ. ಈ ಹಿಂದೆ ಹಲವು ಈ ಬಾರಿ ಇವರ ಮದುವೆ ಬಗ್ಗೆ ಗುಸುಗುಸು ಹಬ್ಬಿತ್ತು. ಆದರೆ, ಪ್ರತಿ ಬಾರಿಗೂ ಇವರ ಮದುವೆ ಸುದ್ದಿ ಸುಳ್ಳಾಯಿತು. ಆದರೆ, ಈ ಬಾರಿ ಮಾತ್ರ ಆಲಿಯಾ-ರಣ್‌ಬೀರ್ ಕಲ್ಯಾಣ ಗ್ಯಾರಂಟಿ ಅಂತಿದೆ ಬಾಲಿವುಡ್.

ಜೋಡಿ ಹಕ್ಕಿಗಳ ಮದುವೆ ಯಾವಾಗ?
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇದೇ ವರ್ಷ ಮದುವೆ ಆಗುತ್ತಾರೆ ಎಂದು ಗುಲ್ಲೆದ್ದಿತ್ತು. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಲಿಯಾ, ರಣ್‌ಬೀರ್ ಮದುವೆ ಎನ್ನಲಾಗಿತ್ತು. ಆದ್ರೀಗ ಅಕ್ಟೋಬರ್‌ಗೆ ಅಲ್ಲ ಬದಲಾಗಿ, ಏಪ್ರಿಲ್ ತಿಂಗಳಲ್ಲೇ ಮದುವೆ ಎಂದು ವರದಿಯಾಗಿದೆ. ಬಾಲಿವುಡ್ ಕೂಡ ಮುಂದಿನ ತಿಂಗಳಲ್ಲಿಯೇ ವಿವಾಹ ಗ್ಯಾರಂಟಿ ಎನ್ನುತ್ತಿದೆ. ಈ ಕಾರಣಕ್ಕೆ ಆಲಿಯಾ ಹಾಗೂ ರಣ್‌ಬೀರ್ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ರಣ್‌ಬೀರ್ ಮನೆಯಲ್ಲಿ ತಯಾರಿ
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮದುವೆಗೆ ಮತ್ತೆ ಸುದ್ದಿಯಾಗುವುದಕ್ಕೆ ಕಾರಣವಿದೆ. ರಣ್‌ಬೀರ್ ಕಪೂರ್ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಲಿವುಡ್ ಫ್ಯಾಷನ್ ಡಿಸೈನರ್ ಮನಿಷ್ ಮಲ್ಹೋತ್ರಾರನ್ನು ಭೇಟಿಯಾಗಿದ್ದಾರೆ. ಮನಿಷ್ ಮಲ್ಹೋತ್ರಾ ಕೂಡ ಹಲವು ಬಾರಿ ರಣ್‌ಬೀರ್ ಬಂಗ್ಲೆಗೆ ಭೇಟಿ ಕೊಟ್ಟಿರುವುದು ವರದಿಯಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಮದುವೆ ಗ್ಯಾರಂಟಿ ಎನ್ನುತ್ತಿದೆ ಬಾಲಿವುಡ್. ಈ ಕಾರಣಕ್ಕಾಗಿಯೇ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದೆ.

ಇಬ್ಬರೂ ಸಿನಿಮಾಗಳಲ್ಲಿ ಫುಲ್ ಬ್ಯುಸಿ
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದರು. ಕೆಲವು ದಿನಗಳ ಹಿಂದಷ್ಟೆ ವಾರಾಣಾಸಿಯಲ್ಲಿ ಶೂಟಿಂಗ್ ಕೂಡ ಮಾಡಿದ್ದಾರೆ. ಇದ್ರೊಂದಿಗೆ ರಣ್‌ಬೀರ್ ಲವ್ ರಂಜನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಲಿಯಾ ಕರಣ್ ಜೋಹರ್ ಸಿನಿಮಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ನಟಿಸುತ್ತಿದ್ದಾರೆ.


Click it and Unblock the Notifications











