'ಗೀತಾಗೋವಿಂದಂ' ನಿರ್ದೇಶಕನ ಮುಂದಿನ ಸಿನಿಮಾದಲ್ಲಿ ವಿಜಯ್ ಮಿಸ್: ನಾಗಚೈತನ್ಯಗೆ ರಶ್ಮಿಕಾ ಜೋಡಿ!

ರಶ್ಮಿಕಾ ಮಂದಣ್ಣ ಅದೆಷ್ಟೇ ಸಿನಿಮಾ ಮಾಡಿದ್ದರೂ, ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದರೂ, ಸಿನಿಪ್ರಿಯರಿಗೆ ಸಮಾಧಾನ ಆದಂತಿಲ್ಲ. ಅದಕ್ಕೆ ಕಾರಣ, ವಿಜಯ್ ದೇವರಕೊಂಡ. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಮೂಲಕ ಈ ಜೋಡಿ ಪ್ರೇಕ್ಷಕರ ಮನಗೆದ್ದಿದ್ದರು. ಆ ಬಳಿಕ ಈ ಜೋಡಿ ಮತ್ತೆ ಸಿನಿಮಾ ಮಾಡಿಲ್ಲ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯನ್ನು ಜನಪ್ರಿಯತೆಗೊಳಿಸಿದ ಹೆಗ್ಗಳಿಕೆ ನಿರ್ದೇಶಕ ಪರಶುರಾಮ್‌ಗೆ ಸಲ್ಲುತ್ತೆ. ಈಗ ಇದೇ ನಿರ್ದೇಶಕ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಪರಶುರಾಮ್ ನಿರ್ದೇಶಿಸಿದ 'ಸರ್ಕಾರು ವಾರಿ ಪಾಟ' ಸಿನಿಮಾ ಬಾಕ್ಸಾಪೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿಲ್ಲ. ಹೀಗಾಗಿ ಮತ್ತೆ ಲವ್‌ಸ್ಟೋರಿ ಕಡೆ ಮುಖ ಮಾಡಿದ್ದು, ಹೊಸ ಜೋಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವದಂತಿ ಎರಡು ವರ್ಷಗಳ ಹಿಂದೆನೇ ಸದ್ದು ಮಾಡಿತ್ತು. ಆದರೆ, ಪರಶುರಾಮ್ ಆಗ 'ಸರ್ಕಾರು ವಾರಿ ಪಾಟ' ಸಿನಿಮಾದ ತಯಾರಿಯಲ್ಲಿದ್ದರು. ಈಗ ಮತ್ತೆ ಅದೇ ಸಿನಿಮಾ ಬಗ್ಗೆ ಟಾಕ್ ಆಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಹೊಸ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಹೊಸ ಸುದ್ದಿಯೇನು? ಅಂತ ತಿಳಿಯಲು ಮುಂದೆ ಓದಿ.

ರಶ್ಮಿಕಾ ಮಂದಣ್ಣ-ನಾಗಚೈತನ್ಯ ಜೋಡಿ

ರಶ್ಮಿಕಾ ಮಂದಣ್ಣ-ನಾಗಚೈತನ್ಯ ಜೋಡಿ

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ನಾಗಚೈತನ್ಯ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ 'ಗೀತ ಗೋವಿಂದಂ' ಸಿನಿಮಾ ನಿರ್ದೇಶಕ ಪರಶುರಾಮ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದೂವರೆಗೂ ರಶ್ಮಿಕಾ ಹಾಗೂ ನಾಗ ಚೈತನ್ಯ ಒಟ್ಟಿಗೆ ನಟಿಸಿಲ್ಲ. ಹೀಗಾಗಿ ಈ ಜೋಡಿಯನ್ನು ನೋಡಲು ತೆಲುಗು ಪ್ರೇಕ್ಷಕರು ಕಾದು ಕೂತಿರುವುದಂತೂ ಸತ್ಯ. ಆದರೆ, ನಿಜಕ್ಕೂ ಈ ಸಿನಿಮಾ ಸೆಟ್ಟೇರುತ್ತಾ? ಪರಶುರಾಮ್ ಇವರಿಬ್ಬರಿಗೂ ಸಿನಿಮಾ ಮಾಡುತ್ತಾರಾ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

2 ವರ್ಷದ ಹಿಂದೆನೇ ಸದ್ದು ಮಾಡಿದ್ದ ಸುದ್ದಿ!

2 ವರ್ಷದ ಹಿಂದೆನೇ ಸದ್ದು ಮಾಡಿದ್ದ ಸುದ್ದಿ!

ರಶ್ಮಿಕಾ ಮಂದಣ್ಣ ಹಾಗೂ ನಾಗ ಚೈತನ್ಯ ಇಬ್ಬರೂ ಒಟ್ಟಿಗೆ ನಟಿಲಿದ್ದಾರೆ ಅನ್ನೋ ಸುದ್ದಿ ಎರಡು ವರ್ಷಗಳ ಹಿಂದೆನೇ ಸದ್ದು ಮಾಡಿತ್ತು. ಪರಶುರಾಮ್ ಈಗಾಗಲೇ ನಾಗಚೈತನ್ಯಗೆ ಕಥೆ ಹೇಳಿದ್ದಾಗಿದೆ. ಹೀರೊಯಿನ್ ಪಾತ್ರಕ್ಕೆ ಹುಡುಕಾಟ ನಡೆಸಿದ್ದ ನಿರ್ಮಾಣ ಸಂಸ್ಥೆ ರಶ್ಮಿಕಾ ಮಂದಣ್ಣ ಮೇಲೆ ಹೆಚ್ಚು ಒಲವು ತೋರಿಸುತ್ತಿದೆ. ಇಬ್ಬರೂ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿಯಿದ್ದು, ಅದು ಮುಗಿಸಿದ ಕೂಡಲೇ ಅನೌನ್ಸ್ ಆಗಲಿದೆ ಎಂದು ವರದಿಯಾಗಿತ್ತು. ಆದರೆ, ಸಿನಿಮಾ ಸೆಟ್ಟೇರಲೇ ಇಲ್ಲ. ಈಗ ಮತ್ತೆ ಈ ಸಿನಿಮಾ ಸದ್ದು ಮಾಡುತ್ತಿದೆ.

ಸಮಂತಾ ಮೇಲೆ ಒಲವಿತ್ತು

ಸಮಂತಾ ಮೇಲೆ ಒಲವಿತ್ತು

ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ಒಟ್ಟಿಗೆ ನಟಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. 'ಯೆ ಮಾಯಾ ಚೇಸಾವೇ' 'ಆಟೋ ನಗರ್ ಸೂರ್ಯ', 'ಮನಂ', 'ಮಜಿಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬಿದ್ದಿದ್ದವು. ಹೀಗಾಗಿ ಮೊದಲು ಪರಶುರಾಮ್ ಇದೇ ಜೋಡಿಯನ್ನಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ನಿರ್ಮಾಣ ಸಂಸ್ಥೆ ರಶ್ಮಿಕಾ ಮಂದಣ್ಣ ಕಡೆಗೆ ಒಲವು ತೋರಿತ್ತು ಎನ್ನಲಾಗಿತ್ತು. ಈಗ ಇಬ್ಬರೂ ಡಿವೋರ್ಸ್ ಪಡೆದು ದೂರು ಆಗಿದ್ದರಿಂದ ರಶ್ಮಿಕಾ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸುವ ಸಾಧ್ಯತೆಯಿದೆ.

ನಾಗ ಚೈತನ್ಯ-ರಶ್ಮಿಕಾ ಬಾಲಿವುಡ್ ಸಿನಿಮಾ

ನಾಗ ಚೈತನ್ಯ-ರಶ್ಮಿಕಾ ಬಾಲಿವುಡ್ ಸಿನಿಮಾ

ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ಗಿಂತ ಬಾಲಿವುಡ್‌ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ನಾಗ ಚೈತನ್ಯ ಕೂಡ 'ಲಾಲ್‌ ಸಿಂಗ್ ಚಡ್ಡಾ' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಸಂಜಯ್ ಲೀಲಾ ಬನ್ಸಾಲಿಯನ್ನೂ ಭೇಟಿ ಮಾಡಿದ್ದು, ಹೊಸ ಸಿನಿಮಾಗೆ ಸುಳಿವು ಸಿಕ್ಕಿದೆ. ಹೀಗಾಗಿ ಪರಶುರಾಮ್ ಇಬ್ಬರನ್ನೂ ಇಟ್ಕೊಂಡು ಸಿನಿಮಾ ಮಾಡುತ್ತಾರಾ? ಇಲ್ಲಾ ಇದು ಕೇವಲ ಸೋಶಿಯಲ್ ಮೀಡಿಯಾ ಟಾಕ್ ಅಷ್ಟೇನಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

More from Filmibeat

English summary
Rumour Is That Rashmika Mandanna And Naga Chaitanya To Act In Parasuram Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X