ಇದೇ ವರ್ಷ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ: ಏನಂತಿದೆ ಬಾಲಿವುಡ್‌?

ಹೀರೊ-ಹೀರೋಯಿನ್ ಅಂದ್ಮೇಲೆ ರೂಮರ್.. ಸಿನಿಮಾ ಅಂದ್ಮೇಲೆ ಗ್ಲಾಮರ್ ಇವೆರಡೂ ಕಾಮನ್. ಪ್ರತಿ ದಿನ, ಪ್ರತಿಕ್ಷಣ ಚಿತ್ರರಂಗದಲ್ಲಿ ಬಿಸಿ ಬಿಸಿ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇರುತ್ತೆ. ರೂಮರ್‌ಗಳಿಗೇನು ಕಮ್ಮಿ ಇರಲ್ಲ. ಆದರೆ, ಪ್ರತಿ ಬಾರಿ ಇಂತಹ ಗಾಸಿಪ್‌ಗಳು ಓಡಾಡಿದಾಗ, ನಟ-ನಟಿಯರು ಇರಿಸು ಮುರಿಸು ಆಗ್ತಾರೆ. ಈಗ್ಯಾಕೆ ಈ ವಿಷಯ ಅಂದ್ರೆ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಬಗ್ಗೆ ಬಾಲಿವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಎರಡು ಸಿನಿಮಾಗಳನ್ನು ನೋಡಿದ ಬಳಿಕ ಪ್ರೇಕ್ಷಕರಿಗೆ ಡೌಟ್ ಬಂದಿತ್ತು. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಟಾಲಿವುಡ್‌ನಲ್ಲಿ ಗುಲ್ಲೆದ್ದಿತ್ತು. ಬಾಲಿವುಡ್‌ಗೆ ಹಾರಿದ ಮೇಲೆ ಬಾಲವುಡ್ ಕೂಡ ಅದೇ ಮಾತಾಡಿಕೊಳ್ಳುತ್ತಿದೆ. ಬಾಲಿವುಡ್‌ನಲ್ಲಿ ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಬಗ್ಗೆ ಏನು ಚರ್ಚೆಯಾಗುತ್ತಿದೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

 ರಶ್ಮಿಕಾ-ವಿಜಯ್ ಮದುವೆ ಸುದ್ದಿ ಏನು?

ರಶ್ಮಿಕಾ-ವಿಜಯ್ ಮದುವೆ ಸುದ್ದಿ ಏನು?

'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಈ ಎರಡು ಸಿನಿಮಾಗಳಲ್ಲಿ ಇಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಗಿತ್ತು. ಇತ್ತೀಚೆಗೆ ಮುಂಬೈನಲ್ಲಿ ಬೀಡು ಬಿಟ್ಟಿರುವ ವಿಜಯ್ ಹಾಗೂ ರಶ್ಮಿಕಾ ಇಬ್ಬರು ಡೇಟಿಂಗ್ ಹೋಗಿದ್ದು ಸುದ್ದಿಯಾಗಿತ್ತು. ಈಗ ಇಬ್ಬರೂ ಈ ವರ್ಷದ ಕೊನೆಯಲ್ಲಿ ಮದುವೆ ಆಗುತ್ತಾರೆ ಅನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ ಎಂದು ಟೈಮ್ಸ್‌ ನೌ ನ್ಯೂಸ್‌ ವೆಬ್‌ಸೈಟ್‌ನಲ್ಲಿ ವರದಿಯಾಗಿದೆ. ಆದರೆ, ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಇಬ್ಬರೂ ತಮ್ಮ ರಿಲೇಷನ್‌ಶಿಫ್ ಬಗ್ಗೆ ಇದೂವರೆಗೂ ಬಹಿರಂಗವಾಗಿ ಹೇಳಿಕೆ ಕೊಟ್ಟಿಲ್ಲ.

 ರಶ್ಮಿಕಾ- ವಿಜಯ್ ಮದುವೆ ಚರ್ಚೆಗೆ ಬರಲು ಕಾರಣವೇನು?

ರಶ್ಮಿಕಾ- ವಿಜಯ್ ಮದುವೆ ಚರ್ಚೆಗೆ ಬರಲು ಕಾರಣವೇನು?

ರಶ್ಮಿಕಾ ಮಂದಣ್ಣ , ವಿಜಯ್ ದೇವರಕೊಂಡಗೆ ಇಬ್ಬರ ರಿಲೇಷನ್‌ಶಿಪ್ ಬಗ್ಗೆ ಈ ಹಿಂದೆನೇ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಇಬ್ಬರೂ ಒಳ್ಳೆ ಸ್ನೇಹಿತರು ಎಂದು ಉತ್ತರ ನೀಡಿದ್ದಾರೆ. ಆದರೂ, ಇವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಮುಂಬೈನಲ್ಲಿ ಡೇಟಿಂಗ್ ಹೋಗಿದ್ದು, ಗೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದು, ಈ ಎಲ್ಲಾ ಸಂಗತಿಗಳು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಆದರೆ, ಇದೂವರೆಗೂ ಈ ಜೋಡಿ ಮದುವೆ ಬಗ್ಗೆ ಎಲ್ಲೂ ವಿಷಯ ಬಹಿರಂಗ ಪಡಿಸಿಲ್ಲ.

ವಿಜಯ್ ಜೊತೆ ರಶ್ಮಿಕಾ ಹೊಸ ವರ್ಷ

ವಿಜಯ್ ದೇವರಕೊಂಡು ಹಾಗೂ ರಶ್ಮಕಾ ಮಂದಣ್ಣ ಇಬ್ಬರೂ ಹೊಸ ವರ್ಷದ ಆಚರಣೆಗೆ ಗೋವಾಗೆ ತೆರಳಿದ್ದರು. ಇಬ್ಬರೂ ಪ್ರತ್ಯೇಕವಾಗಿ ಪ್ಲೈಟ್ ಹತ್ತಿದವರು ಒಂದೇ ಕಡೆ ಲ್ಯಾಂಡ್ ಆಗಿದ್ದರು. ವಿಜಯ್ ದೇವರಕೊಂಡ ಕುಟುಂಬದ ಜೊತೆ ರಶ್ಮಿಕಾ ಮಂದಣ್ಣ ಹೊಸ ವರ್ಷ ಸಂಭ್ರಮಿಸಿದ್ದರು. ಆ ವೇಳೆ ವಿಜಯ್ ದೇವರಕೊಂಡ ನಟಿಸಿದ 'ಲೈಗರ್' ಚಿತ್ರದ ಫಸ್ಟ್ ಗ್ಲಿಮ್ಸ್ ನೋಡಿ ಕುಣಿದು ಕುಪ್ಪಳಿಸಿದ ವಿಡಿಯೋ ಕೂಡ ಲೀಕ್ ಆಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.

 ವಿಜಯ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ?

ವಿಜಯ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ?

ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಸಂಕ್ರಾಂತಿ ಹಬ್ಬದಂದು ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಹಾಗೂ ವಿಜಯ್ ಹಾಕಿಕೊಂಡಿದ್ದ ಒಂದು ಫೋಟೊ ಇಷ್ಟೆಲ್ಲಾ ಸುದ್ದಿಗೆ ಕಾರಣವಾಗಿತ್ತು. ಹೊಸ ವರ್ಷವನ್ನು ಗೋವಾದಲ್ಲಿ ಸಂಭ್ರಮಿಸಿದ ಬಳಿಕ ಸಂಕ್ರಾಂತಿ ಹಬ್ಬವನ್ನೂ ಒಟ್ಟಿಗೆ ಆಚರಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇಂತಹ ಹಲವು ಸಂಗತಿಗಳಿಂದ ಬಾಲಿವುಡ್‌ನಲ್ಲಿ ಈ ವರ್ಷ ಇಬ್ಬರೂ ಮದುವೆ ಆಗುತ್ತಾರೆಂಬ ವಿಷಯ ಹರಿದಾಡುತ್ತಿದೆ. ಈ ಸುದ್ದಿಗೆ ರಶ್ಮಿಕಾ ಹಾಗೂ ವಿಜಯ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕುತೂಹಲವಿದೆ.

More from Filmibeat

English summary
Rumour is that Rashmika Mandanna and Vijay Devakonda will merry this year. Rashmika and Vijay Devarakond is expected to marry later this year, according to rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X