'ಬಘೀರ' ಶೂಟಿಂಗ್‌ಗೆ ಶ್ರೀಮುರುಳಿ ಬ್ರೇಕ್: 'ಉಗ್ರಂ ವೀರಂ' ಕಿಕ್ ಸ್ಟಾರ್ಟ್?

ಸಿನಿಮಾರಂಗ ಅಂದ್ಮೇಲೆ ಗಲ್ಲಿ ಗಲ್ಲಿಗೊಂಡು ಗಾಸಿಪ್ ಕಾಮನ್. ಪ್ರತಿದಿನ ಒಂದಲ್ಲಾ ಒಂದು ಸಿನಿಮಾದಿಂದ ಒಂದೊಂದು ಗಾಳಿ ಸುದ್ದಿ ಬಿರುಗಾಳಿಯಂತೆ ಹರಿದು ಬರುತ್ತಲೇ ಇರುತ್ತೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಗಾಸಿಪ್ ಸಿಗೋದು ಕಮ್ಮಿನೇ. ಆದರೂ, ಸಿಗೋ ಸುದ್ದಿಗಳು ಮಾತ್ರ ಥ್ರಿಲ್ಲಿಂಗ್ ಆಗಿಯೇ ಇರುತ್ತೆ.

ಗಾಂಧಿನಗರದ ಗಲ್ಲಿಯೊಳಗೆ ಸದ್ಯ ಸುದ್ದಿಯೊಂದು ಓಡಾಡುತ್ತಿದೆ. ಅದೇನಪ್ಪಾ ಅಂದ್ರೆ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಹೊಸ ಸಿನಿಮಾ ಆರಂಭ ಆಗಿದ್ಯಂತೆ. ಸಾಲದಕ್ಕೆ ಕೆಲವು ದಿನ ಶೂಟಿಂಗ್ ಕೂಡ ಮಾಡಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿಯೊಳಗೆ ಗಿರಿಕಿ ಹೊಡೆಯುತ್ತಿದೆ.

ಇಷ್ಟೆಲ್ಲಾ ಕೇಳಿದ್ಮೇಲೆ ಶ್ರೀ ಮುರಳಿ ಮತ್ತೆ 'ಬಘೀರ' ಸಿನಿಮಾದ ಶೂಟಿಂಗ್ ಆರಂಭ ಮಾಡಿದ್ರಾ? ಹೊಸ ಸಿನಿಮಾಗೆ ಕೈ ಹಾಕಿದ್ರಾ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಆ ಮಧ್ಯೆ ಗಾಂಧಿನಗರದ ಮಂದಿ 'ಬಘೀರ' ಬಿಟ್ಟು 'ಉಗ್ರಂ ವೀರಂ' ಸಿನಿಮಾ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅಷ್ಟಕ್ಕೂ ಶ್ರೀ ಮುರಳಿ 'ಉಗ್ರಂ ವೀರಂ' ಸಿನಿಮಾ ಆರಂಭ ಮಾಡಿದ್ರಾ? 'ಬಘೀರ' ಸಿನಿಮಾದ ಕಥೆಯೇನು? ಇದೆಲ್ಲವನ್ನೂ ತಿಳಿಯಲು ಮುಂದೆ ಓದಿ..

'ಬಘೀರ' ಸಿನಿಮಾದ ಕಥೆಯೇನು?

'ಬಘೀರ' ಸಿನಿಮಾದ ಕಥೆಯೇನು?

'ಮದಗಜ' ಸಿನಿಮಾ ಬಳಿಕ ಶ್ರೀ ಮುರಳಿ ಸೈಲೆಂಟ್ ಆಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ 'ಬಘೀರ' ಸಿನಿಮಾ ಸೆಟ್ಟೇರಿ, ಕೆಲವು ದಿನಗಳ ಶೂಟಿಂಗ್ ಬಳಿಕ ನಿಂತಿದೆ. ಮೂಲಗಳ ಪ್ರಕಾರ, 'ಬಘೀರ' ಶೀಘ್ರದಲ್ಲಿಯೇ ಆರಂಭ ಆಗುವ ಸಾಧ್ಯತೆಗಳು ಕಾಣುತ್ತಿಲ್ಲ. ಕಥೆಯಲ್ಲಿ ಬದಲಾವಣೆ ಮಾಡಬೇಕಿದ್ದರಿಂದ ಸಿನಿಮಾ ನಿಂತಿದೆ ಅನ್ನೋ ಮಾತು ಕೆಲವು ದಿನಗಳ ಹಿಂದೆ ಹರಿದಾಡಿತ್ತು. ಸ್ಟೋರಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡ ಬಳಿಕವೇ 'ಬಘೀರ' ಆರಂಭ ಆಗುತ್ತೆ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಸಿನಿಮಾ ನಿಂತಿದ್ದು ಯಾಕೆ? ಅನ್ನೋದನ್ನು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ. ಈ ಮಧ್ಯೆನೇ 'ಉಗ್ರಂ ವೀರಂ' ಸಿನಿಮಾದ ಹೆಸರು ಕೇಳಿ ಬರುತ್ತಿದೆ.

'ಉಗ್ರಂ ವೀರಂ' ಸದ್ದು

'ಉಗ್ರಂ ವೀರಂ' ಸದ್ದು

ಗಾಂಧಿನಗರದಲ್ಲಿ 'ಉಗ್ರಂ ವೀರಂ' ಸಿನಿಮಾ ಮತ್ತೆ ಸದ್ದು ಮಾಡಲು ಶುರು ಮಾಡಿದೆ. ಶ್ರೀಮುರಳಿ 'ಬಘೀರ' ಸಿನಿಮಾಗೆ ಬ್ರೇಕ್ ಹಾಕಿರೋ ಬೆನ್ನಲ್ಲೇ 'ಉಗ್ರಂ ವೀರಂ' ಸಿನಿಮಾ ಆರಂಭ ಮಾಡಿದ್ದಾರೆ ಅನ್ನೋ ಗುಲ್ಲೆದ್ದಿದೆ. ಈಗಾಗಲೇ ಕೆಲವು ದಿನಗಳ ಕಾಲ ಶೂಟಿಂಗ್ ನಡೆದಿರೋ ಬಗ್ಗೆ ವದಂತಿಗಳು ಹಬ್ಬಿವೆ. ಬೆಂಗಳೂರಿನ ಹೊರವಲಯದಲ್ಲಿ ಸುಮಾರು 5 ರಿಂದ 6 ದಿನಗಳ ಕಾಲ ಸಿನಿಮಾದ ಶೂಟಿಂಗ್ ಆರಂಭ ಆಗಿದೆ ಎಂದು ಗಾಂಧಿನಗರದಲ್ಲಿ ಪುಕಾರು ಹಬ್ಬಿರೋದಂತೂ ಸತ್ಯ.

'ಉಗ್ರಂ ವೀರಂ'ಗೆ ನಿರ್ದೇಶಕ ಯಾರು?

'ಉಗ್ರಂ ವೀರಂ'ಗೆ ನಿರ್ದೇಶಕ ಯಾರು?

'ಉಗ್ರಂ' ಸಿನಿಮಾದ ಸೀಕ್ವೆಲ್ 'ಉಗ್ರಂ ವೀರಂ' ಸೆಟ್ಟೇರುವ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಸದ್ದು ಆಗುತ್ತಲೇ ಇದೆ. ಈ ಸಿನಿಮಾವನ್ನು ಶ್ರೀಮುರುಳಿಗಾಗಿ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡುತ್ತಾರೆ. ಇದು ಶ್ರೀ ಮುರಳಿ ಹಾಗೂ ಪ್ರಶಾಂತ್ ನೀಲ್ ನಡುವಿನ ಹಳೆ ಕಮಿಟ್ಮೆಂಟ್ ಅಂತ ಈ ಹಿಂದೆನೇ ನಿರ್ದೇಶಕರು ಹೇಳಿಕೊಂಡಿದ್ದಾರೆ. ಆದರೆ, 'ಕೆಜಿಎಫ್ 2' ಸಿನಿಮಾ ಬಳಿಕ 'ಉಗ್ರಂ ವೀರಂ' ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಅನ್ನೋ ಗೊಂದಲವಿದೆ. ಸದ್ಯ ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರ ಸಹಾಯಕ ಈ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ ಅನ್ನೋ ವದಂತಿ ಇದೆ. ಶೂಟಿಂಗ್ ಸ್ಪಾಟ್‌ನಲ್ಲಿ ತುಂಬಾನೇ ಕಟ್ಟೆಚ್ಚರ ವಹಿಸಲಾಗಿದ್ದು, ಮೊಬೈಲ್ ಪೋನ್‌ ಬಳಿಕೆ ಮಾಡಲು ಬಿಟ್ಟಿ ಅಂತಿವೆ ಮೂಲಗಳು. ಆದರೆ, ಶ್ರೀಮುರಳಿ, ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಮಾತ್ರ ಅಧಿಕೃತವಾಗಿ ಇದೂವರೆಗೂ ಹೇಳಿಕೊಂಡಿಲ್ಲ.

'ಉಗ್ರಂ ವೀರಂ' ಆರಂಭ ಆಗಿದ್ದು ನಿಜವೇ?

'ಉಗ್ರಂ ವೀರಂ' ಆರಂಭ ಆಗಿದ್ದು ನಿಜವೇ?

'ಉಗ್ರಂ ವೀರಂ' ಗುಟ್ಟಾಗಿ ಶುರುವಾಗಿದೆ ಅಂತ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿರೋದಂತೂ ನಿಜ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಯಂತೂ ಇಲ್ಲ. ಒಂದ್ವೇಳೆ ಈ ಸಿನಿಮಾ ಆರಂಭ ಆಗಿದ್ದೇ ಆದರೆ, ಸ್ಯಾಂಡಲ್‌ವುಡ್‌ಗೆ ಸಿಹಿ ಸುದ್ದಿ ಸಿಕ್ಕಂತೆಯೇ. ಅದರಲ್ಲೂ ಪ್ರಶಾಂತ್ ನೀಲ್‌ ನಿರ್ದೇಶನ ಮಾಡ್ತಿದ್ರೆ ಧಮಾಕಾ ಅಂತಲೇ ಹೇಳಬಹುದು. ಇವೆಲ್ಲಾ ಏನೇ ಇದ್ದರೂ ಶ್ರೀಮುರಳಿಗೆ ಮರು ಜನ್ಮ ಕೊಟ್ಟ 'ಉಗ್ರಂ' ಸಿನಿಮಾದ ಸೀಕ್ವೆಲ್‌ ಆರಂಭ ಆದರೆ, ರೋರಿಂಗ್ ಫ್ಯಾನ್ಸ್ ಥ್ರಿಲ್ ಆಗೋದು ಗ್ಯಾರಂಟಿ.

More from Filmibeat

English summary
Rumour Is That Sri Murali Started Ugram Veeram Movie Shooting, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X