ವಿದೇಶದಲ್ಲಿ ಮಹೇಶ್ ಬಾಬು, ಸಂಕಷ್ಟದಲ್ಲಿ ತ್ರಿವಿಕ್ರಮ್: ಸಿನಿಮಾ ಕಥೆಯೇನು?

ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಿದೆ. ಕೆಲವು ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿದೆ. ಸಿನಿಮಾ ಶೂಟಿಂಗ್ ಶುರುವಾದ ಬಳಿಕ ಮಹೇಶ್ ಬಾಬು ಹೀಗೆ ಲಾಂಗ್‌ ಬ್ರೇಕ್ ತೆಗೆದುಕೊಂಡ ಉದಾಹರಣೆಗಳು ತೀರಾ ಕಡಿಮೆ.

ಆದ್ರೀಗ ತಮ್ಮ ಕುಟುಂಬದೊಂದಿಗೆ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಈ ಬೆನ್ನಲೇ ಟಾಲಿವುಡ್‌ನಲ್ಲಿ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ನಡುವೆ ಏನೋ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಹಿಂದಿನಂತೆ ತಮ್ಮ ಕೆಲಸದ ಮೇಲೆ ಎನರ್ಜಿ ಹಾಕುತ್ತಿಲ್ಲ ಅನ್ನೋ ಗುಸು ಗುಸು ಟಾಲಿವುಡ್‌ನಲ್ಲಿ ಕೇಳಿಬರುತ್ತಿದೆ. ಕೆಲವರು ತ್ರಿವಿಕ್ರಮ್‌ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಅಂತಾನೂ ಮಾತಾಡಿಕೊಳ್ಳುತ್ತಿದ್ದಾರಂತೆ. ಒಂದೇ ತರಹದ ಸಿನಿಮಾಗಳನ್ನು ಮಾಡಿ, ಹೀಗೆ ಆಸಕ್ತಿ ಕಳೆದುಕೊಂಡಿದ್ದಾರೆ ಅನ್ನೋದು ಸದ್ಯ ಚಿತ್ರರಂಗದಲ್ಲಿ ಹರಿದಾಡುತ್ತಿರೋ ಮ್ಯಾಟರ್.

Rumour Is That Star Director Trivikram in Trouble With Mahesh Babu Movie

ಈ ಹಿಂದೆ ತ್ರಿವಿಕ್ರಮ್ ಒಂದು ಸಿನಿಮಾ ಒಪ್ಪಿಕೊಂಡರೆ, ಬಹುತೇಕ ಕೆಲಸವನ್ನು ಅವರೇ ಮಾಡುತ್ತಿದ್ದರು. ಡೈಲಾಗ್, ಸ್ಕ್ರೀನ್ ಪ್ಲೇ, ಡೈರೆಕ್ಷನ್ ಎಲ್ಲವನ್ನೂ ಅವರೇ ಮಾಡುತ್ತಿದ್ದರು. ಆದರೆ, ಮಹೇಶ್ ಬಾಬು ಸಿನಿಮಾಗೆ ತ್ರಿವಿಕ್ರಮ್ ಡೈಲಾಗ್ ಬರೆಯುತ್ತಿಲ್ಲ. ಇವರ ಬದಲಾಗಿ ಇಬ್ಬರು ಯುವಕರಿಗೆ ಡೈಲಾಗ್ ಬರೆಯುವ ಅವಕಾಶ ನೀಡಲಾಗಿದೆ.

ಇನ್ನೊಂದು ಕಡೆ ಈಗಾಗಲೇ ಮಹೇಶ್ ಬಾಬು ಸಿನಿಮಾಗೆ ಫೈಟ್ ಸೀಕ್ವೆನ್ಸ್ ಅನ್ನು ಶೂಟ್ ಮಾಡಲಾಗಿದೆ. ಆದರೆ, ಮಹೇಶ್ ಬಾಬುಗೆ ಆ ಫೈಟ್ ಮಾಸ್ಟರ್‌ಗಳು ಇಷ್ಟ ಆಗಿಲ್ಲವಂತೆ. ಈ ಕಾರಣಕ್ಕೆ ತ್ರಿವಿಕ್ರಮ್ ಫೇಮಸ್ ಸಾಹಸ ನಿರ್ದೇಶಕರಾಗಿರೋ ರಾಮ್ ಲಕ್ಷ್ಮಣ್‌ರನ್ನು ಕರೆದುಕೊಂಡು ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಮಹೇಶ್ ಬಾಬು ಈಗಾಗಲೇ ತ್ರಿವಿಕ್ರಮ್‌ಗೆ ಸಿನಿಮಾ ಕಂಪ್ಲೀಟ್ ಸ್ಕ್ರೀಪ್ಟ್ ಹಾಗೂ ಡೈಲಾಗ್‌ ಕೊಡುವಂತೆ ಕೇಳಿದ್ದಾರಂತೆ. ಸದ್ಯ ಕುಟುಂಬದ ಜೊತೆ ವಿದೇಶಕ್ಕೆ ತೆರಳಿರೋ ಮಹೇಶ್ ಬಾಬು ಹಿಂತಿರುಗಿದ ಕೂಡಲೇ ಮಹೇಶ್‌ ಬಾಬು ಸ್ಕ್ರಿಪ್ಟ್ ಕೊಡಬೇಕಿದೆ.

Rumour Is That Star Director Trivikram in Trouble With Mahesh Babu Movie

ಹಾಗೇ ತ್ರಿವಿಕ್ರಮ್‌ರನ್ನು ಮಹೇಶ್ ಬಾಬು ಸ್ಟಾರ್ ಡೈರೆಕ್ಟರ್ ರೀತಿ ನೋಡುತ್ತಿಲ್ಲವಂತೆ. ನಿರ್ದೇಶಕನ ಮೇಲೆ ಸಂಪೂರ್ಣ ಭಾರ ಹಾಕಿ ಸಿನಿಮಾವನ್ನು ಮಾಡುತ್ತಿಲ್ಲ. ಹೀಗಾಗಿ ತ್ರಿವಿಕ್ರಮ್ ಈ ಬಾರಿಗೆ ತನ್ನ ಸ್ಕ್ರಿಪ್ಟ್‌ನಿಂದ ಮೆಚ್ಚುಗೆ ಗಳಿಸಲೇಬೇಕಾದ ಒತ್ತಡದಲ್ಲಿದ್ದಾರೆ ಅನ್ನೋ ಗುಸು ಗುಸು ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

ಮಹೇಶ್ ಬಾಬು ಸಿನಿಮಾಗೂ ಮುನ್ನ ಜೂ.ಎನ್‌ಟಿಆರ್ ಜೊತೆ ಸಿನಿಮಾ ಟೇಕ್ ಆಫ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ತ್ರಿವಿಕ್ರಮ್ ಈ ಪ್ರಾಜೆಕ್ಟ್ ಅನ್ನು ಬಿಟ್ಟುಕೊಡುವ ಹಾಗಿಲ್ಲ. ಒಂದು ವೇಳೆ ಕೈ ತಪ್ಪಿ ಹೋದರೆ, ತ್ರಿವಿಕ್ರಮ್ ಇಮೇಜ್‌ಗೆ ಪೆಟ್ಟು ಬೀಳುವುದು ಗ್ಯಾರಂಟಿ ಅನ್ನೋ ಟಾಕ್ ಶುರುವಾಗಿದೆ.

More from Filmibeat

English summary
Rumour Is That Star Director Trivikram in Trouble With Mahesh Babu Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X