'RRR 2' ನಿರ್ಮಿಸಲು ರಾಜಮೌಳಿ- ವಿಜಯೇಂದ್ರ ಪ್ರಸಾದ್ ಮಾಸ್ಟರ್ ಪ್ಲ್ಯಾನ್: ಏನು ಹೇಳುತ್ತಿದೆ ಟಾಲಿವುಡ್?

ಒಂದಲ್ಲ, ಎರಡಲ್ಲ. 'RRR' ಸಿನಿಮಾ ರಿಲೀಸ್ ಮಾಡುವುದಕ್ಕೆ ರಾಜಮೌಳಿ ಪರದಾಡುತ್ತಿರುವ ವಿಷಯ ಗೊತ್ತೇ ಇದೆ. ಇನ್ನೇನು ಸಿನಿಮಾ ರಿಲೀಸ್ ಆಗೇ ಬಿಡುತ್ತೆ ಅನ್ನುವಾಗಲೇ ಮತ್ತೆ ಪೋಸ್ಟ್‌ ಮಾಡಿದ್ದರು. ನಾಲ್ಕೈದು ಬಾರಿ ಸಿನಿಮಾ ರಿಲೀಸ್ ಡೇಟ್ ಅನ್ನೇ ಪೋಸ್ಟ್‌ಪೋನ್ ಮಾಡಿದ್ದು ಚಿತ್ರತಂಡಕ್ಕೆ ಹಿನ್ನೆಡೆಯಾಗಿದೆ. ಪ್ರೇಕ್ಷಕರಲ್ಲಿ RRR ಸಿನಿಮಾ ನೋಡುವ ಬಗ್ಗೆ ಇದ್ದ ಕುತೂಹಲ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ಮಧ್ಯೆ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡಲು ಶುರು ಮಾಡಿದೆ.

ಇದೇ ಜನವರಿ 13ರಂದು RRR ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಬೇಕಿತ್ತು. ಈ ಸಿನಿಮಾ ಬಿಡುಗಡೆಗೆ ರಾಜಮೌಳಿ ಭರ್ಜರಿ ಪ್ರಚಾರವನ್ನೂ ಮಾಡಿದ್ದರು. ಆದರೆ, ಕೊರೊನಾ ಸೋಂಕು ದಿಢೀರನೇ ಹೆಚ್ಚಾಗಿದ್ದರಿಂದ ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ಎರಡು ರಿಲೀಸ್ ಡೇಟ್‌ಗಳನ್ನು ರಾಜಮೌಳಿ ಕೈಯಲ್ಲಿ ಇಟ್ಟುಕೊಂಡಿದ್ದು, ಯಾವಾಗ ಬಿಡುಗಡೆ ಮಾಡುತ್ತಾರೆ ಅನ್ನುವ ಸುಳಿವಿಲ್ಲ. ಆದರೆ, ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ RRR ಸಿನಿಮಾಗೆ ಮತ್ತೆ ಜೀವ ತಂದುಕೊಟ್ಟಿದೆ.

 'RRR 2'ಗೆ ವಿಜಯೇಂದ್ರ ಪ್ರಸಾದ್ ಕಥೆ

'RRR 2'ಗೆ ವಿಜಯೇಂದ್ರ ಪ್ರಸಾದ್ ಕಥೆ

ವಿಜಯೇಂದ್ರ ಪ್ರಸಾದ್ ಬರೆಯುವ ಕಥೆಯಲ್ಲಿಯೇ ರಾಜಮೌಳಿಯ ಶಕ್ತಿ ಅಡಗಿದೆ. ತಂದೆ ಹಾಗೂ ಮಗನ ಕಾಂಬಿನೇಷನ್ ಇದೂವರೆಗೂ ಸೋತಿದ್ದೇ ಇಲ್ಲ. ಹೀಗಾಗಿ RRR ಬಿಡುಗಡೆ ತಡವಾದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತೆ ಅಂತ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಇದರ ಮಧ್ಯೆ ಸಿನಿಪ್ರಿಯರಿಗೆ ಖುಷಿ ಕೊಡುವ ಸುದ್ದಿಯೊಂದು ಓಡಾಡುತ್ತಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'RRR 2'ಗೆ ಕಥೆ ಬರೆಯಲು ಶುರುವಿಟ್ಟುಕೊಂಡಿದ್ದಾರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

 RRR ಪಾರ್ಟ್ 2 ಸಿನಿಮಾ ಮಾಡಲು ಸಾಧ್ಯವೇ?

RRR ಪಾರ್ಟ್ 2 ಸಿನಿಮಾ ಮಾಡಲು ಸಾಧ್ಯವೇ?

RRR ಸಿನಿಮಾದ ಪಾತ್ರಗಳು ಚರಿತ್ರೆಯಲ್ಲಿ ಇದ್ದರೂ, ಇಬ್ಬರನ್ನೂ ಸ್ವಾತಂತ್ರ್ಯ ಹೋರಾಟಗಾರರನ್ನು ಇಟ್ಟುಕೊಂಡು ವಿಜಯೇಂದ್ರ ಪ್ರಸಾದ್ ಕಾಲ್ಪನಿಕ ಕಥೆಯನ್ನು ಹೆಣೆದಿದ್ದರು. ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಎರಡನೇ ಪಾರ್ಟ್‌ನಲ್ಲಿ ತೋರಿಸಲು ಅವಕಾಶವಿದೆ. ಈ ಕಾರಣಕ್ಕಾಗಿಯೇ ವಿಜಯೇಂದ್ರ ಪ್ರಸಾದ್ ಕಥೆ ಹೆಣೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ರಾಜಮೌಳಿಗೆ RRR ಸಿನಿಮಾ ರಿಲೀಸ್ ಮಾಡುವುದೇ ದೊಡ್ಡ ಸವಾಲಾಗಿದೆ.

 'RRR 2' ಸದ್ಯಕ್ಕೆ ಅಸಾಧ್ಯ?

'RRR 2' ಸದ್ಯಕ್ಕೆ ಅಸಾಧ್ಯ?

RRR ಸಿನಿಮಾಗಾಗಿ ಜೂ. ಎನ್‌ಟಿಆರ್ ಹಾಗೂ ರಾಮ್ ಚರಣ್‌ ಈಗಾಗಲೇ ಮೂರು ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಇನ್ನೊಂದು ಪಾರ್ಟ್‌ಗೆ ಮತ್ತೆ ಎರಡರಿಂದ ಮೂರು ವರ್ಷಗಳನ್ನು ಈ ಇಬ್ಬರೂ ಸೂಪರ್‌ಸ್ಟಾರ್‌ಗಳು ಮೀಸಲಿಡುವುದು ಅನುಮಾನ. ಈಗಾಗಲೇ ಇಬ್ಬರೂ ಸ್ಟಾರ್‌ ನಟರೂ ಬೇರೆ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳನ್ನು ಮುಗಿಸಲೇಬೇಕಿದೆ. ಈ ಪ್ರಕ್ರಿಯೆಗೆ ಕಮ್ಮಿ ಅಂದರೂ ಎರಡರಿಂದ ಮೂರು ವರ್ಷ ಬೇಕಿದೆ. ಅಲ್ಲಿವರೆಗೂ ರಾಜಮೌಳಿ ಕಾಯುವುದು ಅನುಮಾನ. ಹೀಗಾಗಿ 'RRR 2' ಸದ್ಯ ಅಸಾಧ್ಯ ಎನ್ನಬಹುದು.

 ಮಹೇಶ್ ಬಾಬು ಜೊತೆ ಸಿನಿಮಾ

ಮಹೇಶ್ ಬಾಬು ಜೊತೆ ಸಿನಿಮಾ

RRR ಬಳಿಕ ನಿರ್ದೇಶಕ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಸೆಟ್ಟೇರಬೇಕಿದೆ. ಮಹೇಶ್ ಬಾಬುಗೆ ರಾಜಮೌಳಿ ಸಿನಿಮಾ ಮಾಡಬೇಕಿದೆ. ಹೀಗಾಗಿ RRR ಸೀಕ್ವೆಲ್ ಕೈಗೆತ್ತಿಕೊಂಡರೆ, ಮಹೇಶ್ ಬಾಬು ಸಿನಿಮಾ ಕೈ ಬಿಡಬೇಕಿದೆ. ಈ ಕಾರಣಕ್ಕೆ RRR 2 ಸೆಟ್ಟೇರುವುದು ತೀರಾ ಅನುಮಾನ. ಆದರೂ, ಟಾಲಿವುಡ್ ಮಾಧ್ಯಮಗಳು ಮಾತ್ರ ವಿಜಯೇಂದ್ರ ಪ್ರಸಾದ್ RRR 2 ಗೆ ಕಥೆ ಬರುತ್ತಿದ್ದಾರಂತೆ ಎಂದು ವರದಿ ಮಾಡಿವೆ. ಹೀಗಾಗಿ ತಂದೆ-ಮಗನ ಮುಂದಿನ ಹೆಜ್ಜೆ ಬಗ್ಗೆ ಟಾಲಿವುಡ್‌ ಕುತೂಹಲದಿಂದ ನೋಡುತ್ತಿದೆ.

More from Filmibeat

English summary
Rumour is that the sequel of Rajamouli directed Jr. NTR Ram Charan starrer RRR is on discussion. Vijayendra Prasad who penned the story for RRR is now working on the storyline for the sequel said some report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X