ಪ್ರೇಮಿಗಳ ದಿನದಂದು 'ಕೆಜಿಎಫ್ 2' ತಂಡದಿಂದ ಬಿಗ್ ಸರ್ಪ್ರೈಸ್: ಏನದು?

ಕೊರೊನಾ ಹಾವಳಿ ತಗ್ಗುತ್ತಿದ್ದಂತೆ ಸಿನಿಮಾ ಮಂದಿ ಮತ್ತೆ ಬ್ಯುಸಿಯಾಗುತ್ತಿದ್ದಾರೆ. ಕೆಜಿಎಫ್ ರಿಲೀಸ್ ಡೇಟ್ ಕೂಡ ಹತ್ತಿರಕ್ಕೆ ಬರುತ್ತಿದೆ. ಇಷ್ಟು ದಿನ ಇದೊಂದು ಕ್ಷಣಕ್ಕಾಗಿ ಕಾದು ಕೂತಿದ್ದ ಕೆಜಿಎಫ್ 2 ಪ್ರೇಮಿಗಳಿಗೆ ಪ್ರೇಮಿಗಳ ದಿನದಂದು ಅಚ್ಚರಿಯೊಂದು ಕಾದಿದೆಯಂತೆ. ಯಶ್ ಹಾಗೂ ಅವರ ತಂಡದಿಂದ ಸಿನಿಪ್ರಿಯರಿಗೆ ಬಿಗ್ ಸಪ್ರೈಸ್ ಸಿಗುತ್ತೆ ಎಂದು ಮೂಲಗಳು ಹೇಳುತ್ತಿವೆ.

ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್ ಇಬ್ಬರೂ 'ಕೆಜಿಎಫ್ 2' ಸಿನಿಮಾದ ಪ್ರಚಾರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. 'ಕೆಜಿಎಫ್ 2' ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ ಚಿತ್ರರಂಗದಲ್ಲಿ ರೂಮರ್‌ಗಳೂ ಅಷ್ಟೇ ವೇಗವಾಗಿ ಹರಡುತ್ತಿವೆ. ಈಗೊಂದು ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಅದೇನಪ್ಪಾ ಅಂದರೆ, ಪ್ರೇಮಿಗಳ ದಿನ ಕೆಜಿಎಫ್ ಸಿನಿಮಾದ ಅಭಿಮಾನಿಗಳಿಗೆ ಅಚ್ಚರಿಯೊಂದನ್ನು ನೀಡಲಿದ್ದಾರಂತೆ.

ಪ್ರೇಮಿಗಳ ದಿನ 'ಕೆಜಿಎಫ್ 2' ತಂಡದಿಂದ ಸಪ್ರೈಸ್

ಪ್ರೇಮಿಗಳ ದಿನ 'ಕೆಜಿಎಫ್ 2' ತಂಡದಿಂದ ಸಪ್ರೈಸ್

'ಕೆಜಿಎಫ್ 2' ಸಿನಿಮಾದ ಹಾಡೊಂದು ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ಇಷ್ಟು ದಿನ 'ಕೆಜಿಎಫ್ 2' ಐಟಂ ಸಾಂಗ್ ಬಗ್ಗೆ ಚರ್ಚೆಯಾಗುತ್ತಿತ್ತು. 'ಕೆಜಿಎಫ್ ಚಾಪ್ಟರ್ 1' ನಲ್ಲಿ ಇರುವಂತೆಯೇ ಚಾಪ್ಟರ್ 2 ನಲ್ಲೂ ಒಂದು ಐಟಂ ಸಾಂಗ್ ಇರುತ್ತೆ. 'ಕೆಜಿಎಫ್'ನಲ್ಲಿ ತಮನ್ನಾ ಜೋಕೆ ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಅದೇ ಹಿಂದಿಯಲ್ಲಿ ಮೌನಿ ರಾಯ್ ಐಟಂ ಸಾಂಗಿಗೆ ಕುಣಿದಿದ್ದರು. ಇಂತಹದ್ದೇ ಒಂದು 'ಕೆಜಿಎಫ್ 2' ನಲ್ಲೂ ಇದ್ದು, ಅದೇ ಹಾಡು ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತೆ ಎನ್ನಲಾಗಿದೆ.

'ಕೆಜಿಎಫ್ 2' ಐಟಂ ಸಾಂಗ್ ರಿಲೀಸ್ ಆಗುತ್ತಾ?

'ಕೆಜಿಎಫ್ 2' ಐಟಂ ಸಾಂಗ್ ರಿಲೀಸ್ ಆಗುತ್ತಾ?

ಬಾಲಿವುಡ್‌ನ ಸೂಪರ್‌ ಹಿಟ್ ಸಾಂಗ್ 'ಮೆಹಬೂಬ ಮೆಹಬೂಬ' ಹಾಡಿಗೆ ಬಾಲಿವುಡ್ ನಟಿ ನೂರಾ ಫತೇಹಿ ಹೆಜ್ಜೆ ಹಾಕಿದ್ದಾರಂತೆ. ಇದೇ ಹಾಡನ್ನು ಪ್ರೇಮಿಗಳನ್ನ ದಿನದಂದು ಬಿಡುಗಡೆ ಮಾಡಲಿದ್ದಾರಂತೆ. ಇಂತಹ ಸುದ್ದಿಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್ 2 ಸಾಂಗ್ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚಿತ್ರತಂಡ ಕೂಡ ಅಧಿಕೃವಾಗಿ ಇನ್ನೂ ಮಾಹಿತಿಯನ್ನು ನೀಡಿಲ್ಲ. 'ಕೆಜಿಎಫ್ 2' ಬಿಡುಗಡೆಗೆ ಇನ್ನು ಎರಡೂವರೆಗೂ ತಿಂಗಳು ಇರುವುದರಿಂದ ಪ್ರೇಮಿಗಳ ದಿನದಿಂದ ಪ್ರಚಾರ ಆರಂಭಿಸಿದರೂ, ಅಚ್ಚರಿ ಪಡಬೇಕಿಲ್ಲ.

'ಕೆಜಿಎಫ್ 2' ಸಾಂಗ್ ಬಗ್ಗೆ ರೂಮರ್

'ಕೆಜಿಎಫ್ 2' ಸಾಂಗ್ ಬಗ್ಗೆ ರೂಮರ್

ಈ ಹಿಂದೆ ಮಾಧ್ಯಮವೊಂದಕ್ಕೆ ನಿರ್ದೇಶಕ ಕಮ್ ನೃತ್ಯ ನಿರ್ದೇಶಕ ಎ ಹರ್ಷ ಸಂದರ್ಶನ ನೀಡಿದ್ದರು. ಈ ವೇಳೆ 'ಕೆಜೆಎಫ್‌ 2'ನಲ್ಲಿ ಪವರ್‌ಫುಲ್ ಸಾಂಗ್‌ವೊಂದಕ್ಕೆ ಕೊರಿಯೋಗ್ರಫಿ ಮಾಡಿರುವುದಾಗಿ ಹೇಳಿದ್ದರು. ಅದೇ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಮೆಹಬೂಬ ಹಾಡಿನ ಬಗ್ಗೆ ವರದಿ ಮಾಡಲಾಗಿದೆ. ಇದೇ ಹಾಡು ಟಾಲಿವುಡ್ ಬೇಜಾನ್ ಹಲ್‌ಚಲ್ ಎಬ್ಬಿಸಿದ್ದು, 'ಕೆಜಿಎಫ್ 2' ಸಿನಿಮಾ ಪ್ರೇಮಿಗಳು ಆ ದಿನಕ್ಕಾಗಿ ಕಾದು ಕೂತಿದ್ದಾರೆ. ಆದರೆ, ಚಿತ್ರತಂಡ ಪ್ರಚಾರ ಆರಂಭ ಮಾಡುವುದಕ್ಕೂ ಮುನ್ನ ಟೆಂಪಲ್ ರನ್ ಶುರು ಮಾಡಿದೆ.

'ಕೆಜಿಎಫ್ 2' ತಂಡದ ಟೆಂಪಲ್ ರನ್

'ಕೆಜಿಎಫ್ 2' ತಂಡದ ಟೆಂಪಲ್ ರನ್

'ಕೆಜಿಎಫ್ 2' ಕೆಲವೇ ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಸಿನಿಮಾ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದಂತಿದೆ. ಹೀಗಾಗಿ ಇತ್ತೀಚೆಗೆ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ರವಿ ಬಸ್ರೂರು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿದ್ದಾರೆ. ಕುಂದಾಪುರದ ಆನೆಗುಡ್ಡೆ ಗಣಪತಿ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ‌ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯವರ ದರ್ಶನ ಪಡೆದುಕೊಂಡಿದೆ. ಇದು 'ಕೆಜಿಎಫ್ 2' ಪ್ರಚಾರಕ್ಕೆ ಚಿತ್ರತಂಡ ನೀಡಿದ ಸೂಚನೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರೇಮಿಗಳ ದಿನದಂದು ಮೆಹಬೂಬ ಹಾಡು ಬಿಡುಗಡೆ ಮಾಡುತ್ತಾ? ಇಲ್ವಾ ಅನ್ನುವ ಬಗ್ಗೆ ಕೆಜಿಎಫ್ 2 ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

More from Filmibeat

English summary
Rumour is that Valentines Day special KGF 2 team planning release Mehbooba Mehbooba song. Talks are going around is that the KGF 2 single will be out on February 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X