'ಕೆಜಿಎಫ್ 2' ರಿಲೀಸ್ ಬಳಿಕ ಪ್ರಭಾಸ್ ಮೀರಿಸಿದ್ರಾ ಯಶ್? ಟಾಲಿವುಡ್‌ನಲ್ಲೇನಿದು ಚರ್ಚೆ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ವಿಶ್ವದ ಗಮನ ಸೆಳೆದಿದೆ. ದೇಶ ಅಷ್ಟೇ ಅಲ್ಲ. ವಿಶ್ವದ ಬಾಕ್ಸಾಫೀಸ್‌ನಲ್ಲಿಯೇ ದಾಖಲೆ ಬರೆದಿದೆ. ಹಾಲಿವುಡ್‌ ಸಿನಿಮಾಗಳಿಗೂ ಪೈಪೋಟಿ ಕೊಡುತ್ತಿರುವ 'ಕೆಜಿಎಫ್ 2' ಚಿತ್ರವನ್ನು ಪದೇ ಪದೆ ವೀಕ್ಷಿಸುತ್ತಿದ್ದಾರೆ. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಮತ್ತೆ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಈ ಬೆನ್ನಲ್ಲೇ ಟಾಲಿವುಡ್‌ನಲ್ಲಿ ಹೊಸ ಚರ್ಚೆ ಆರಂಭ ಆಗಿದೆ.

ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ಮತ್ತೆ ವರ್ಕ್‌ಔಟ್ ಆಗಿದೆ. 'ಕೆಜಿಎಫ್ 2' ಸಿನಿಮಾದ ಎರಡೂ ಚಾಪ್ಟರ್‌ಗಳೂ ಬಾಕ್ಲಾಬಸ್ಟರ್ ಹಿಟ್ ಆಗಿದೆ. ಈಗಾಗಲೇ ಬಾಕ್ಸಾಫೀಸ್‌ನಲ್ಲಿ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ವಿಶ್ವ ದಾಖಲೆ ಬರೆಯುವುದಕ್ಕೆ ತುದಿಗಾಲಲ್ಲಿ ನಿಂತಿದೆ. ದಿನದಿಂದ ದಿನಕ್ಕೆ ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಹೆಚ್ಚಾಗುತ್ತಿರುವುದರಿಂದ ಟಾಲಿವುಡ್‌ನಲ್ಲಿ ಯಶ್ ಹಾಗೂ ಪ್ರಭಾಸ್ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆಯಂತೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಬದಲಾಯ್ತು ಯಶ್ ಸ್ಟಾರ್‌ಗಿರಿ

ಬದಲಾಯ್ತು ಯಶ್ ಸ್ಟಾರ್‌ಗಿರಿ

ಕನ್ನಡ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮಿತಿ ನೂರು ಕೋಟಿ ಅಂತಷ್ಟೇ ಇತ್ತು. ಆದರೆ, ಬಾಕ್ಸಾಫೀಸ್ ವ್ಯಾಪ್ತಿಯನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ಹರಡುವಂತೆ ಮಾಡಿದ್ದು 'ಕೆಜಿಎಫ್ ಚಾಪ್ಟರ್ 1'. 100 ಕೋಟಿಯಿಂದ 250 ಕೋಟಿಗೆ ಏರಿಸಿದ್ದು, ಇದೇ 'ಕೆಜಿಎಫ್ ಚಾಪ್ಟರ್ 1'. ಈಗ 'ಕೆಜಿಎಫ್' ಫ್ರಾಂಚೈಸಿಯ ಎರಡನೇ ಚಾಪ್ಟರ್‌ 4 ದಿನಕ್ಕೆ ಡಬಲ್ ಆಗಿತ್ತು. ಸದ್ಯ 620 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಹೊಡೆದು ಹಾಕುತ್ತಿರುವುದನ್ನು ಇಡೀ ವಿಶ್ವವೇ ಅಚ್ಚರಿಯಿಂದ ನೋಡುತ್ತಿದೆ. ಇದೇ ವೇಳೆ ಯಶ್ ಸ್ಟಾರ್‌ಗಿರಿ ಬಗ್ಗೆನೂ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಪ್ರಭಾಸ್ ಮೀರಿಸಿದ್ರಾ ಯಶ್ ?

ಪ್ರಭಾಸ್ ಮೀರಿಸಿದ್ರಾ ಯಶ್ ?

'ಬಾಹುಬಲಿ' ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದರು. ಆದರೆ, ಈ ಸ್ಟಾರ್‌ಗಿರಿಯನ್ನು ಪ್ರಭಾಸ್ ಮುಂದುವರೆಸಿಕೊಂಡು ಹೋಗಿಲ್ಲ. 'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿವೆ. ಹೀಗಾಗಿ ಪ್ರಭಾಸ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿಧಾನವಾಗಿ ತಮ್ಮ ಸ್ಟಾರ್‌ಗಿರಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆ. ಇನ್ನೊಂದು ಕಡೆ 'ಕೆಜಿಎಫ್ 2' ಬ್ಲಾಕ್‌ಬಸ್ಟರ್ ಹಿಟ್ ಆಗಿರುವುದರಿಂದ ನಿರ್ಮಾಪಕರು ಪ್ರಭಾಸ್‌ನಿಂದ ಯಶ್‌ ಕಡೆಗೆ ವಾಲುತ್ತಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರಂತೆ.

'ಕೆಜಿಎಫ್ 2' ನೋಡಿ ತಲೆಕೆಡಿಸಿಕೊಂಡ ಚಿತ್ರರಂಗ

'ಕೆಜಿಎಫ್ 2' ನೋಡಿ ತಲೆಕೆಡಿಸಿಕೊಂಡ ಚಿತ್ರರಂಗ

'ಕೆಜಿಎಫ್ 2' ಬಾಕ್ಸಾಫೀಸ್‌ ಕಲೆಕ್ಷನ್ ನೋಡಿ ಇಡೀ ವಿಶ್ವವೇ ಯಶ್ ಅತ್ತ ತಿರುಗಿ ನೋಡುತ್ತಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಜನಪ್ರಿಯ ಪ್ರೊಡಕ್ಷನ್ ಹೌಸ್‌ಗಳು ಯಶ್‌ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬರಬಹುದು. ಪ್ರಭಾಸ್‌ಗೆ ಸಿನಿಮಾ ಮಾಡಬೇಕು ಅಂತಿರೋರು ಯಶ್ ಕಡೆಗೆ ಹೋಗಬಹುದು ಎಂದು ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದ್ಯಂತೆ.

ಪ್ರಭಾಸ್ ಹಿಂದಿಕ್ಕುವುದು ಸುಲಭ ಅಲ್ಲ

ಪ್ರಭಾಸ್ ಹಿಂದಿಕ್ಕುವುದು ಸುಲಭ ಅಲ್ಲ

'ಸಾಹೋ' ಹಾಗೂ 'ರಾಧೆ ಶ್ಯಾಮ್' ಸೋಲಿನ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಕ್ರೇಜ್ ಕಡಿಮೆ ಆಗಿದೆ ಅಂತ ಟಾಲಿವುಡ್‌ನಲ್ಲಿ ಚರ್ಚೆ ಆಗ್ತಿದೆ. ಅದೇ ಇನ್ನೊಂದು ಕಡೆ ಪ್ರಭಾಸ್ ಸಿನಿಮಾ 'ಆದಿಪುರುಷ್' ಹಾಗೂ 'ಸಲಾರ್' ಈ ಎರಡು ಸಿನಿಮಾಗಳು ಮತ್ತೆ ಪ್ರಭಾಸ್‌ಗೆ ಹೊಸ ಇಮೇಜ್ ತಂದುಕೊಡುತ್ತೆ ಅಂತಲೂ ಹೇಳುತ್ತಿದ್ದಾರೆ. ಇದರೊಂದಿಗೆ 'ಪ್ರಾಜೆಕ್ಟ್ ಕೆ' ಹಾಗೂ ಸ್ಪಿರೀಟ್ ಸಿನಿಮಾಗಳು ಗೆದ್ದೆ ಗೆಲ್ಲುತ್ತೆ ಎನ್ನುತ್ತಿದ್ದಾರೆ. ಹೀಗಾಗಿ ಯಶ್‌ಗೆ ಪ್ರಭಾಸ್ ಮೀರಿಸಲು ಇನ್ನೂ ಸಮಯಬೇಕು ಅಂತಿದ್ದಾರಂತೆ ಟಾಲಿವುಡ್‌ನ ಇನ್ನೊಂದು ವರ್ಗ.

More from Filmibeat

English summary
Rumour is that After KGF 2 Yash Become A Bigger Star Than Prabhas. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X