KGF 2 Trailer in RCB Match: ಆರ್‌ಸಿಬಿ ಪಂದ್ಯದಲ್ಲಿ 'ಕೆಜಿಎಫ್ 2' ಟ್ರೈಲರ್ ಪ್ರದರ್ಶನ ಆಗುತ್ತಾ?
'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಸಿನಿಮಾ ತಂಡ ಬೇಜಾನ್ ತಯಾರಿ ನಡೆಸಿದೆ. ಇದೇ ವೇಳೆ ಪ್ರಚಾರದ ವೇಗವನ್ನೂ ಹೆಚ್ಚಿಸಿಕೊಂಡಿದೆ. ಒಂದು ಟೀಸರ್‌ನಿಂದ ಒಂದು ವರ್ಷ ಕಾಯಿಸಿದ್ದ ತಂಡ ಒಂದು ವಾರದ ಅಂತರದಲ್ಲಿ ಒಂದು ಹಾಡು ಹಾಗೂ ಟ್ರೈಲರ್‌ನನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ತೂಫಾನ್ ಸಾಂಗ್ ರಿಲೀಸ್ ಆಗಿದ್ದು ಬೇಜಾನ್ ಸದ್ದು ಮಾಡುತ್ತಿದೆ. ಇದೇ ವೇಳೆ ಅದ್ಧೂರಿಯಾಗಿ ಟ್ರೈಲರ್ ರಿಲೀಸ್ ಮಾಡಲು ಮುಂದಾಗಿದೆ.
'ಕೆಜಿಎಫ್ 2' ಸಿನಿಮಾ ಟ್ರೈಲರ್ ಇಂದು (ಮಾರ್ಚ್) ರ ಸಂಜೆ ರಿಲೀಸ್ ಆಗುತ್ತಿದೆ. ಒಂದೊಂದು ಭಾಷೆಯಲ್ಲೂ ಒಬ್ಬೊಬ್ಬರು ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಪ್ಯಾನ್ಸ್ ಇಂಡಿಯಾ ಲೆವೆಲ್‌ನಲ್ಲಿ ಗ್ರ್ಯಾಂಡ್ ಆಗಿ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ಇದೇ ವೇಳೆ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ಸುದ್ದಿ ಓಡಾಡುತ್ತಿದೆ. 'ಕೆಜಿಎಫ್ 2' ಟ್ರೈಲರ್ ಮತ್ತೊಂದು ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬೇರೆ ಯಾವುದೇ ಸಿನಿಮಾ ಇಂತಹದ್ದೊಂದು ಆಲೋಚನೆ ಕೂಡ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಅಸಲಿಗೆ 'ಕೆಜಿಎಫ್ 2' ಐಪಿಎಲ್‌ನಲ್ಲಿ ಪ್ರದರ್ಶನ ಕಾಣುತ್ತೆ ಎನ್ನಲಾಗಿದೆ.

IPL ಪಂದ್ಯದ ವೇಳೆ 'ಕೆಜಿಎಫ್ 2' ಟ್ರೈಲರ್ ಪ್ರದರ್ಶನ
'ಕೆಜಿಎಫ್ 2' ಸಿನಿಮಾದ ಟ್ರೈಲರ್ ಬಿಡುಗಡೆ ಚಿತ್ರತಂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ ಅನ್ನೋದು ಅಕ್ಷರಶ: ಸತ್ಯ. ಅದಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾದ ಪತ್ರಿಕಾಗೋಷ್ಟಿ ಮಾಡುತ್ತಿದೆ. ಇದೇ ವೇಳೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಐಪಿಎಲ್ ಮ್ಯಾಚ್‌ನಲ್ಲಿ 'ಕೆಜಿಎಫ್ 2' ಚಿತ್ರದ ಟ್ರೈಲರ್ ಪ್ರದರ್ಶನ ಆಗಲಿದ್ಯಾಂತೆ. ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಲ್ಲ. ಆದರೆ, ಗಾಂಧಿನಗರದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ.

RCB ಪಂದ್ಯದಲ್ಲಿ 'ಕೆಜಿಎಫ್ 2' ಟ್ರೈಲರ್
ಇಂದು( ಮಾರ್ಚ್ 27) IPL ಹೈ ವೋಲ್ಟೆಜ್ ಪಂದ್ಯವಿದೆ. RCB ತಂಡ ಪಂಜಾಬ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಕನ್ನಡಿಗರಿಗೆ ತುಂಬಾನೇ ವಿಶೇಷ. ಒಂದು ಕಡೆ ಬೆಂಗಳೂರು ತಂಡದ ಮೊದಲ ಪಂದ್ಯ. ಇನ್ನೊಂದು ಕಡೆ ಪಂಜಾಬ್ ತಂಡಕ್ಕೆ ಕನ್ನಡಿಗ ಮಾಯಂಕ್ ಅಗರ್ವಾಲ್ ನಾಯಕ. ಅನಿಲ್ ಕುಂಬ್ಲೆ ಕೋಚ್. ಹೀಗಾಗಿ ಎರಡು ತಂಡಕ್ಕೂ 'ಕೆಜಿಎಫ್ 2' ತುಂಬಾನೇ ಹತ್ತಿರದ ಕನೆಕ್ಷನ್ ಇದೆ. ಈ ಕಾರಣಕ್ಕೆ 'ಕೆಜಿಎಫ್ 2' ಟ್ರೈಲರ್ ಪ್ರದರ್ಶನ ಕಾಣಿಲಿದೆ ಎಂದು ಅಂದಾಜಿಸಲಾಗಿದೆ.

'ಕೆಜಿಎಫ್ 2' ಟ್ರೈಲರ್ ಮಾಸ್ ರಿಲೀಸ್
'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ದೊಡ್ಡ ಮಟ್ಟದ ಪ್ರಚಾರ ಬೇಕಿದೆ. ಈಗಾಗಲೇ ಐದು ಆಭಾಷೆಯಲ್ಲಿ ಏಕಕಾಲಕ್ಕೆ ಕೆಜಿಎಫ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಇದರೊಂದಿಗೆ ಐಪಿಎಲ್ ಪಂದ್ಯದಲ್ಲಿ 'ಕೆಜಿಎಫ್ 2' ಟ್ರೈಲರ್ ರಿಲೀಸ್ ಆದರೆ, ಅದರ ರೇಂಜ್ ಬೇರೆ ಲೆವೆಲ್‌ನಲ್ಲಿಯೇ ಇರುತ್ತೆ. ಈ ಕಾರಣಕ್ಕೆ ಹೊಂಬಾಳೆ ಫಿಲಂಸ್ ಕ್ರಿಕೆಟ್ ಪ್ರಿಯರಿಗೆ ಸರ್ಪ್ರೈಸ್ ನೀಡಲಿದೆ ಎನ್ನಲಾಗಿದೆ.

'ಕೆಜಿಎಫ್ 2' ಚಿತ್ರಕ್ಕೆ 'ಬೀಸ್ಟ್'
ಕೆಜಿಎಫ್ 2ಗೆ ಟಕ್ಕರ್ ಕೊಡುವುದಕ್ಕೆ ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಸಜ್ಜಾಗಿದೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಒಂದು ದಿನ ಮುನ್ನವೇ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ 'ಕೆಜಿಎಫ್ 2' ಅದ್ಧೂರಿಯಾಗಿ ಪ್ರಚಾರ ಆರಂಭ ಮಾಡಿದರೂ, ಬೀಸ್ಟ್ ಕೇವಲ ಸಾಂಗ್ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ.


Click it and Unblock the Notifications











