'ರಾಧೆ ಶ್ಯಾಮ್' ರಿಲೀಸ್ ವೇಳೆ ಮುಖ ಕೆಡಿಸಿಕೊಂಡ ಪ್ರಭಾಸ್- ಪೂಜಾ ಹೆಗ್ಡೆ: ಯಾಕೀ ಅಂತರ?
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಸಿನಿಮಾ 'ರಾಧೆ ಶ್ಯಾಮ್' ಬಿಡುಗಡೆ ಸಜ್ಜಾಗಿ ನಿಂತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಇಡೀ ತಂಡ ಭರ್ಜರಿ ಪ್ರಚಾರ ಆರಂಭಿಸಿದೆ. ಆದರೆ, ಈ ಪ್ರಚಾರದಲ್ಲಿ ಪೂಜಾ ಹಾಗೂ ಪ್ರಭಾಸ್ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತಾಡುತ್ತಿಲ್ಲವಂತೆ. ಇಬ್ಬರ ನಡುವೆ ಒಳ್ಳೆ ಸಂಬಂಧವಿಲ್ಲ ಎಂದು ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ. 'ರಾಧೆ ಶ್ಯಾಮ್' ಸೆಟ್ಟಿನಲ್ಲಿ ಏನೋ ನಡೆದಿದೆ. ಅದಕ್ಕೆ ಪ್ರಚಾರದ ವೇಳೆ ಇಬ್ಬರೂ ಸರಿಯಾಗಿ ಪ್ರಚಾರ ಮಾಡುತ್ತಿಲ್ಲ ಎನ್ನಲಾಗಿದೆ.
Recommended Video
ಆರೇಳು ತಿಂಗಳ ಹಿಂದೆನೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎಂದು ಸುದ್ದಿ ಹಬ್ಬಿತ್ತು. ಅದೇ ಸುದ್ದಿ ಈಗ ಮತ್ತೆ ವಾಪಾಸ್ ಬಂದಿದೆ. ಪ್ರಚಾರದ ವೇಳೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವಿನ ಭಿನ್ನಾಭಿಪ್ರಾಯ ಇನ್ನು ಆರಿಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಈಗಾಗಲೇ ಎದ್ದಿರುವ ಗಾಳಿ ಸುದ್ದಿಗೆ ಮತ್ತೆ ರೆಕ್ಕೆ ಪುಕ್ಕಗಳು ಹಬ್ಬಿಕೊಂಡಿದೆ.

ಪ್ರಭಾಸ್-ಪೂಜಾ ಹೆಗ್ಡೆ ನಡುವೆ ಗ್ಯಾಪ್
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ತೆರೆಮೇಲೆ ಬೆಸ್ಟ್ ಪೇರ್ ಆಗ್ಬಹುದು ಅನ್ನುವ ನಿರೀಕ್ಷೆಯಿದೆ. ಹಾಡು, ಟ್ರೈಲರ್‌ಗಳಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿದರೆ, ಇಬ್ಬರೂ ಜಗಳ ಆಡಿಕೊಂಡಿದ್ದಾರೆ ಅಂತ ಯಾರು ಹೇಳಲೂ ಸಾಧ್ಯವೇ ಇಲ್ಲ. ಆದರೂ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವಿನ ಸ್ನೇಹ ಬಾಂಧವ್ಯ ಮುರಿದು ಬಿದ್ದಿದೆ. ಇಬ್ಬರೂ ಒಬ್ಬರಿಗೊಬ್ಬರು ಮಾತಾಡುವಷ್ಟು ಬಾಂಧವ್ಯವಿಲ್ಲ ಎಂದು ಟಾಲಿವುಡ್ ಮಂದಿ ಹೇಳುತ್ತಿದ್ದಾರೆ. 'ರಾಧೆ ಶ್ಯಾಮ್' ಪ್ರಚಾರದ ವೇಳೆನೂ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಂತರವನ್ನು ಕಾಯ್ದುಕೊಂಡಿದ್ದರು ಎನ್ನುತ್ತಿದೆ ಟಾಲಿವುಡ್.

ಜೊತೆಯಲ್ಲೂ ನಿಂತಾಗಲೂ ಇತ್ತು ಅಂತರ
ಐದಾರು ತಿಂಗಳ ಹಿಂದಿನಿಂದಲೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಿತ್ತಾಟದ ಬಗ್ಗೆ ಸುದ್ದಿಯಾಗಿತ್ತು. ಆದರೆ, ಸುದ್ದಿ ಆದಷ್ಟೇ ಬೇಗ ಕಣ್ಮರೆನೂ ಆಗಿತ್ತು. 'ರಾಧೆ ಶ್ಯಾಮ್' ಪ್ರಚಾರದ ವೇಳೆ ಇಬ್ಬರ ಕೆಮಿಸ್ಟ್ರಿಯಿಂದ ಮತ್ತೆ ಈ ಸುದ್ದಿಗೆ ರೆಕ್ಕೆ ಪುಕ್ಕ ಬಂದಿದೆ. ವೇದಿಕೆ ಮೇಲೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಬ್ಬರೂ ಒಬ್ಬರಿಗೊಬ್ಬರು ಹೊಗಳಿಕೆ ಮಾತುಗಳನ್ನು ಆಡಿದರೂ, ಒಮ್ಮೆಯೂ ಒಬ್ಬರಿಗೊಬ್ಬರು ಮುಖ ಕೊಟ್ಟು ನೋಡಿಲ್ಲ. ಕ್ಯಾಮರಾ ಮುಂದೆ ಮಾತ್ರ ಅಂತರವನ್ನು ಕಾಯ್ತುಕೊಂಡಿದ್ದರು. ಇದು ಇಬ್ಬರ ನಡುವಿನ ವೈಮನಸ್ಸನ್ನು ಜಗತ್ತಿಗೆ ಸಾರುವಂತೆ ಮಾಡಿದೆ.

ಪೂಜಾ 'ಅನ್‌ಫ್ರೊಫೆಷನಲ್'
ಪೂಜಾ ಹೆಗ್ಡೆ ಸೆಟ್ಟಿಗೆ ಲೇಟಾಗಿ ಬರುತ್ತಿದ್ದರು. ಪೂಜಾ ಹೆಗ್ಡೆ ಅಹಂಕಾರದಿಂದ ವರ್ತಿಸುತ್ತಿದ್ದರು. ಇದು ಪ್ರಭಾಸ್‌ಗೆ ಇರಿಸು-ಮುರಿಸು ಮಾಡಿತ್ತು. ಈ ಕಾರಣಕ್ಕೆ ಪ್ರಭಾಸ್, ಪೂಜಾ ಹೆಗ್ಡೆ ಜೊತೆ ಮಾತಾಡುವುದನ್ನೇ ಬಿಟ್ಟಿದ್ದರು ಎಂದು ವರದಿಯಾಗಿತ್ತು. 'ರಾಧೆ ಶ್ಯಾಮ್' ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಕೂಡ ಪೂಜಾ ಹೆಗ್ಡೆ ವಿರುದ್ಧ ಬೇಸರ ವ್ಯಕ್ತಪಡಿಸಿತ್ತು ಎನ್ನಲಾಗಿತ್ತು. ಆದರೆ, ಈ ವಿಷಯವನ್ನು ಕಳೆದ ಸೆಪ್ಟೆಂಬರ್‌ನಲ್ಲಿಯೇ ಯುವಿ ಕ್ರಿಯೇಷನ್ ಪ್ರತಿಕ್ರಿಯೆ ನೀಡಿತ್ತು,. ಇವೆಲ್ಲವೂ ಆಧಾರವಿಲ್ಲದ ಆರೋಪಗಳು ಎಂದು ವರಿದಿಯಾಗಿದ್ದವು.

ತೆರೆಮೇಲೆ ಹೇಗಿರುತ್ತೆ ಕೆಮಿಸ್ಟ್ರಿ?
'ರಾಧೆ ಶ್ಯಾಮ್' ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ರಿಲೀಸ್ ಆಗಿದೆ. ಇವುಗಳಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇದೊಂದು ವಿಭಿನ್ನ ಲವ್ ಸ್ಟೋರಿ ಆಗಿರುವುದರಿಂದ ಪ್ರಭಾಸ್ , ಪೂಜಾ ಹೆಗ್ಡೆ ಕೆಮಿಸ್ಟ್ರಿ ಹೇಗಿರುತ್ತೆ ಎಂದು ನೋಡುವುದಕ್ಕೆ ಕಾದು ಕೂತಿದ್ದಾರೆ. ಇನ್ನೇನು ಮಾರ್ಚ್ 11ರಂದು 'ರಾಧೆ ಶ್ಯಾಮ್' ಸಿನಿಮಾ ಬಿಡುಗಡೆಯಾಗತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











