Jr.Ntr 30ನೇ ಸಿನಿಮಾದಲ್ಲಿ ಮೆಗಾ ಕುಟುಂಬದ ಮತ್ತೊಬ್ಬ ಹೀರೊ: ಯಾರದು?

ಟಾಲಿವುಡ್ ಆಂದ್ಮೇಲೆ ಆ ಸಿನಿಮಾ ಪವರ್‌ಫುಲ್ ಆಗಿರಬೇಕು. ಅದರಲ್ಲೂ ಜೂ. ಎನ್‌ಟಿಆರ್ ಇದ್ಮೇಲೆ ಮಾಸ್ ಆಡಿಯನ್ಸ್‌ ಮನರಂಜನೆಗೇನು ಕಮ್ಮಿಯಿರೋದಿಲ್ಲ. ಈಗ ಆರ್‌ಆರ್‌ಆರ್‌ ಸಿನಿಮಾದ ಬಳಿಕ ಜೂ.ಎನ್‌ಟಿಆರ್ ಮತ್ತೊಂದು ಸಿನಿಮಾ ಸೆಟ್ಟೇರಲು ಸಿದ್ಧತೆ ನಡೆಯುತ್ತಿದೆ.

ಈ ಸಿನಿಮಾ ಸೆಟ್ಟೆರುವುದಕ್ಕೂ ಮುನ್ನ ಹಲವು ವದಂತಿಗಳು ಹರಿದಾಡುತ್ತಲೇ ಇವೆ. ಕೊರಟಾಲ ಶಿವ ನಿರ್ದೇಶಿಸುತ್ತಿರುವ ಸಿನಿಮಾ ಈಗಾಗಲೇ ಕುತೂಹಲವನ್ನು ಕೆರಳಿಸುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್‌ ಅಂಗಳದಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ.

RRR ಸಿನಿಮಾದ ಬಳಿಕ ಕೊರಟಾಲ ಶಿವ ನಿರ್ದೇಶನದಲ್ಲಿ ಜೂ. ಎನ್‌ಟಿಆರ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರುವುದಂತೂ ಪಕ್ಕಾ. ಆದರೆ ಯಾವಾಗ ಅನ್ನುವುದು ಮಾತ್ರ ಇನ್ನೂ ಗೊಂದಲದಲ್ಲಿಯೇ ಇದೆ. ಅಷ್ಟರಲ್ಲೇ ಜೂ.ಎನ್‌ಟಿಆರ್ ಜೊತೆ ಮೆಗಾ ಕುಟುಂಬದ ಮತ್ತೊಬ್ಬ ಹೀರೊ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅವರು ಯಾರು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

Jr.Ntr 30ಯಲ್ಲಿ ಮೆಗಾ ಕುಟುಂಬದ ಹೀರೊ

Jr.Ntr 30ಯಲ್ಲಿ ಮೆಗಾ ಕುಟುಂಬದ ಹೀರೊ

'ಆಚಾರ್ಯ' ಸೋಲಿನ ಬಳಿಕ ಕೊರಟಾಲ ಶಿವ 'Jr.Ntr 30' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕಾಗಿ ಈ ಚಿತ್ರದ ಕಾಸ್ಟಿಂಗ್ ಬಗ್ಗೆನೂ ಗಮನ ಹರಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, 'Jr.Ntr 30'ಯಲ್ಲಿ ಬಾಲಿವುಡ್ ಸಿನಿಮಾ ತಾರೆಯರೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈಗ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಈ ಸಿನಿಮಾ ಮೆಗಾ ಕುಟುಂಬದ ಹೀರೊಗೆ ವಿಶೇಷ ಪಾತ್ರವೊಂದಕ್ಕೆ ಆಹ್ವಾನ ನೀಡಲಾಗಿದೆಯಂತೆ.

Jr.Ntr 30ಯಲ್ಲಿ ಸಾಯಿ ಧರಂ ತೇಜಾ?

Jr.Ntr 30ಯಲ್ಲಿ ಸಾಯಿ ಧರಂ ತೇಜಾ?

ಈ ಸಿನಿಮಾ ಜೂ.ಎನ್‌ಟಿಆರ್ ಜೊತೆಗೆ ಮತ್ತೊಂದು ಪ್ರಮುಖ ಪಾತ್ರ ಇದೆಯಂತೆ. ಈ ಪಾತ್ರಕ್ಕೆ ಕೊರಟಾಲ ಶಿವ ಟಾಲಿವುಡ್‌ನ ಚಿರಪರಿಚಿತ ನಟನನ್ನೇ ಕರೆದುಕೊಂಡು ಬರಲು ಚಿಂತಿಸಿದ್ದಾರಂತೆ. ಮೂಲಗಳ ಪ್ರಕಾರ, ಕೊರಟಾಲ ಶಿವ ಜೂ.ಎನ್‌ಟಿಆರ್ ಜೊತೆ ನಟಿಸುವುದಕ್ಕೆ ಮೆಗಾ ಕುಟುಂಬದ ಹೀರೊ ಸಾಯಿ ಧರಂ ತೇಜಾರನ್ನು ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ. RRR ಸಿನಿಮಾದ ಬಳಿಕ ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರೂ ಆತ್ಮೀಯರಾಗಿದ್ದಾರೆ. ಅಲ್ಲದೆ, ಸಾಯಿಧರಂ ತೇಜಾ ಕೂಡ ಜೂ.ಎನ್‌ಟಿಆರ್‌ಗೆ ಹತ್ತಿರವಿದ್ದಾರೆ ಎನ್ನಲಾಗಿದೆ.

ಸೋದರ ಮಾವನ ಪಾತ್ರ

ಸೋದರ ಮಾವನ ಪಾತ್ರ

ಕೊರಟಾಲ ಶಿವ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಜೂ. ಎನ್‌ಟಿಆರ್ ಸೋದರ ಮಾವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಾಯಿ ಧರಂ ಪಾತ್ರ ಕೂಡ ತುಂಬಾನೇ ಪವರ್‌ಫುಲ್ ಆಗಿದ್ದು, ಭಾವನಾತ್ಮಕವಾಗಿರುತ್ತೆ ಎನ್ನಲಾಗಿದೆ. ನಿರ್ದೇಶಕ ಕೊರಟಾಲ ಶಿವ ಟಾಲಿವುಡ್‌ನ ಹಲವು ಹೀರೊಗಳನ್ನು ತಲೆಯಲ್ಲಿಟ್ಟುಕೊಂಡಿದ್ದರು. ಅಂತಿಮವಾಗಿ ಎಲ್ಲರೂ ಸಾಯಿಧರಂ ತೇಜ್ ಮೇಲೆ ಹೆಚ್ಚು ಒಲವು ತೋರಿಸಿದ್ದಾರೆ. ಆದರೆ ಇನ್ನೂ ಸಾಯಿ ಧರಂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಬೇಕಿದೆ.

ಆಗಸ್ಟ್ ತಿಂಗಳ ಶೂಟಿಂಗ್ ಶುರು

ಆಗಸ್ಟ್ ತಿಂಗಳ ಶೂಟಿಂಗ್ ಶುರು

ಜೂ.ಎನ್‌ಟಿಆರ್ ಸಿನಿಮಾ ಮುಂದಿನ ತಿಂಗಳಿಂದ ಶೂಟಿಂಗ್ ಶುರುವಾಗಿಲಿದೆ ಎನ್ನಲಾಗಿದೆ. ಈ ವರ್ಷ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿ, 2023ರ ಬೇಸಿಗೆಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸೋಲೊ ಹೀರೊ ಆಗಿ ಜೂ.ಎನ್‌ಟಿಆರ್ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಎಷ್ಟು ಸದ್ದು ಮಾಡುತ್ತೆ ಎನ್ನುವುದನ್ನು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

More from Filmibeat

English summary
Sai Dharam Teja Will Play Special Role In Jr NTR 30th Movie Directed By Koratala Siva, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X