ಕತ್ರಿನಾ ವಿಕ್ಕಿಗೆ ಸಲ್ಮಾನ್, ರಣ್‌ಬೀರ್ ಕೊಟ್ಟ ದುಬಾರಿ ಗಿಫ್ಟ್ ಬೆಲೆ ಎಷ್ಟು? ಹೃತಿಕ್ ಶಾರುಖ್ ಕೊಟ್ಟ ಗಿಫ್ಟ್ ಏನು?

ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್‌ನ ಹೊಸ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮುಂಬೈಗೆ ಮರಳಿದ್ದಾರೆ. ಕೇವಲ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದ ಕತ್ರಿನಾ- ವಿಕ್ಕಿ ಕೌಶಲ್ ಇಬ್ಬರು ತಮ್ಮ ಜೀವನದ ಅದ್ಭುತ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ. ಮದುವೆ ಬಳಿಕ ಈ ಜೋಡಿ ರಾಜಸ್ಥಾನದಲ್ಲೇ ಪಾರ್ಟಿಯನ್ನು ಆಯೋಜಿಸಿತ್ತು ಎನ್ನಲಾಗಿದೆ. ಡಿಸೆಂಬರ್ 9ಕ್ಕೆ ಮದುವೆ ಮುಗಿದ ಬಳಿಕ ಕತ್ರಿನಾ ಹಾಗೂ ವಿಕ್ಕಿ ಹನಿಮೂನ್‌ಗೆ ಹೋಗಿದ್ದರು ಎನ್ನುತ್ತಿವೆ ಮೂಲಗಳು.

ರಾಜಸ್ಥಾನದಲ್ಲಿ ಮದುವೆ ಬಳಿಕ ಬಾಲಿವುಡ್ ದಿಗ್ಗಜರಿಗೆ ಪಾರ್ಟಿ ನೀಡಿದೆ ಎನ್ನಲಾಗುವ ಕೆಲವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇ ರೀತಿ ಮದುವೆ ಆದ ಮರು ದಿನವೇ ಈ ಜೋಡಿ ಹೆಲಿಕಾಪ್ಟರ್ ಏರಿದ ಫೋಟೊಗಳು ಕೂಡ ಷ್ಟೇ ವೈರಲ್ ಆಗುತ್ತಿದ್ದು, ಇಬ್ಬರೂ ಹನಿಮೂನ್‌ಗೆ ಹೋಗಿದ್ದರು ಎನ್ನಲಾಗಿದೆ. ಆದರೆ, ಈ ಜೋಡಿ ಇಂದು ( ಡಿಸೆಂಬರ್ 14) ರಂದು ವಾಪಸ್ ಮುಂಬೈಗೆ ಮರಳಿದ್ದು, ಎಲ್ಲಿಂದ ಬಂದರು ಎಂಬ ಬಗ್ಗೆ ಮಾಹಿತಿ ಇಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ಗೆ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ರಣ್‌ಬೀರ್ ಸಿಂಗ್ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ ಅನ್ನುವ ಗುಸು ಗುಸು ಓಡಾಡುತ್ತಿದೆ. ಕೋಟಿ ಬೆಲೆ ಬಾಳುವ ಆ ದುಬಾರಿ ಉಡುಗೊರೆ ಏನು ಅಂತ ತಿಳಿಯಲು ಮುಂದೆ ಓದಿ.

ಕತ್ರಿನಾಗೆ ಸಲ್ಮಾನ್ ಕಡೆಯಿಂದ 3 ಕೋಟಿ ಕಾರು?

ಕತ್ರಿನಾಗೆ ಸಲ್ಮಾನ್ ಕಡೆಯಿಂದ 3 ಕೋಟಿ ಕಾರು?

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ವಿವಾಹವಾಗಿ ಕೇವಲ ಐದಾರು ದಿನಗಳಾಗಿವೆ. ಈ ಜೋಡಿ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಕೇವಲ ಆಪ್ತರನ್ನಷ್ಟೇ ಕರೆದು ಹಸೆ ಮಣೆ ಏರಿದ ಈ ಜೋಡಿ ಒಂದಿಷ್ಟು ಫೋಟೊಗಳು ಬಿಟ್ಟರೆ, ಶಾಸ್ತ್ರಗಳು ಹೇಗೆ ನಡೆಯಿತು ಅನ್ನುವ ಆ ಕ್ಷಣವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಆಗಿರಲಿಲ್ಲ. ಅದೇ ಬೇಸರದಲ್ಲಿರುವಾಗಲೇ ಕತ್ರಿನಾ ಕೈಫ್‌ಗೆ ಇಬ್ಬರು ಮಾಜಿ ಬಾಯ್‌ಫ್ರೆಂಡ್‌ಗಳು ದುಬಾರಿ ಉಡುಗೊರೆ ಕೊಟ್ಟಿರುವುದು ಸುದ್ದಿಯಾಗಿದೆ. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಈ ನವ ಜೋಡಿಗೆ ಬರೋಬ್ಬರಿ 3 ಕೋಟಿ ಬೆಲೆಬಾಳುವ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

2.7 ಕೋಟಿ ಬೆಲೆಯ ನೆಕ್ಲೆಸ್ ಕೊಟ್ಟ ರಣ್‌ಬೀರ್?

2.7 ಕೋಟಿ ಬೆಲೆಯ ನೆಕ್ಲೆಸ್ ಕೊಟ್ಟ ರಣ್‌ಬೀರ್?

ರಣ್‌ಬೀರ್ ಕಪೂರ್ ಹಾಗೂ ಕತ್ರಿನಾ ಕೆಲವು ದಿನ ಡೇಟಿಂಗ್ ನಡೆಸಿದ್ದರು. ಇಬ್ಬರೂ ಕೈ ಕೈ ಹಿಡಿದು ಊರು ಸುದ್ದಿದ್ದರು. ವಿದೇಶದಲ್ಲಿ ಲೀಕ್ ಆದ ಒಂದು ಫೋಟೊ ಕೂಡ ವೈರಲ್ ಆಗಿತ್ತು. ಆದರೆ ಅದೇನಾಯಿತೋ ಏನೋ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಆ ಬಳಿಕ ಕತ್ರಿನಾ ಹಾಗೂ ವಿಕ್ಕಿ ಭೇಟಿಯಾಗಿ, ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆದರೆ, ಕತ್ರಿನಾ ಜೊತೆ ಇನ್ನೂ ರಣ್‌ಬೀರ್ ಉತ್ತಮ ಸಂಬಂಧ ಹೊಂದಿದ್ದು, ಮದುವೆಗೆ 2.7 ಕೋಟಿ ಬೆಲೆಯ ಡೈಮಂಡ್ ನಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೃತಿಕ್, ಶಾರುಖ್, ತಾಪ್ಸಿ ಕೊಟ್ಟ ಗಿಫ್ಟ್ ಏನು?

ಹೃತಿಕ್, ಶಾರುಖ್, ತಾಪ್ಸಿ ಕೊಟ್ಟ ಗಿಫ್ಟ್ ಏನು?

ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ BMW G 310 ಕಾರನ್ನು ಗಿಫ್ಟ್ ಮಾಡಿದ್ದಾರೆ. ಶಾರುಖ್ ಖಾನ್ ಲಕ್ಷ ಬೆಲೆ ಬಾಳುವ ಪೇಂಟಿಂಗ್ ನೀಡಿದ್ದು, ತಾಪ್ಸಿ ಪನ್ನು ವಜ್ರದ ಹಾರವನ್ನು ನೀಡಿದ್ದಾರೆ. ಇನ್ನು ಸ್ವತ: ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್‌ಗೆ 1.3 ಕೋಟಿ ಬೆಲೆ ಬಾಳುವ ಡೈಮಂಡ್ ರಿಂಗ್ ನೀಡಿದ್ದಾರೆ. ಈ ಜೋಡಿಗೆ ಲಕ್ಷ ಬೆಳೆ ಬಾಳುವ ಉಡುಗೊರೆಯೇ ಸಿಕ್ಕಿದ್ದು, ಬಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಸುಳಿದಾಡುತ್ತಿದೆ.

ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ

ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ

ಈಗ ತಾನೇ ದಾಂಪತ್ಯಕ್ಕೆ ಕಾಲಿಟ್ಟಿರುವಸ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜನೆ ಮಾಡಲಿದ್ದಾರೆ. ಡಿಸೆಂಬರ್ ತಿಂಗಳು ಮುಗಿಯುವುದರೊಳಗೆ ಈ ಜೋಡಿ ರಿಸೆಪ್ಷನ್ ಆಯೋಜಿಸಲಿದ್ದು, ಹೊಸ ವರ್ಷದಿಂದ ಸಿನಿಮಾಗಳಲ್ಲಿ ಬ್ಯುಸಿಯಾಗಲಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Salman Khan gifted Range Rover Ranbir Kapoor gifted diamond set to Katrina Vicky Kaushal. Salman Khan range rover cost 3 crore Ranbir Kapoor diamond necklace cost you around 2.7 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X