ಸಮಂತಾ ಹಾಗೂ ನಾಗಚೈತನ್ಯ ಇಬ್ಬರಿಗೂ ಆಕ್ಷನ್ ಕಟ್ ಹೇಳುವವರು ಒಬ್ಬರೇ: ಕಥೆಯಲ್ಲೇನಿದು ಟ್ವಿಸ್ಟ್?

ಟಾಲಿವುಡ್‌ನ ಬ್ಯೂಟಿಫುಲ್ ಜೋಡಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಬೇರೆಯಾಗಿರುವ ಸುದ್ದಿ ಇಬ್ಬರ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಈ ಜೋಡಿ ವಿಚ್ಛೇದನ ವಿಷಯ ಪ್ರಸ್ತಾಪ ಮಾಡುತ್ತಿದ್ದಂತೆ ಫ್ಯಾನ್ಸ್ ಕೂಡ ಬೇರೆಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ವಿರುದ್ಧ ನಾಗಚೈತನ್ಯ ಅಭಿಮಾನಿಗಳು, ನಾಗಚೈತನ್ಯ ವಿರುದ್ಧ ಸಮಂತಾ ಅಭಿಮಾನಿಗಳು ಟೀಕೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಇಬ್ಬರು ಮುಖಾಮುಖಿಯಾಗಿದ್ದ ಸುದ್ದಿ ಕೂಡ ಹಲ್‌ಚಲ್ ಎಬ್ಬಿಸಿತ್ತು.

ಸದ್ಯ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಹೊಸ ವರ್ಷದ ಮೂಡಿನಲ್ಲಿದ್ದಾರೆ. ತಮ್ಮ ಬದುಕಿನಲ್ಲಾದ ಕಹಿ ಘಟನೆಗಳನ್ನೆಲ್ಲಾ ಮರೆತು ಹೊಸ ವರ್ಷಕ್ಕೆ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ. ಈ ಮಧ್ಯೆ ಟಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಹರಿದು ಬಂದಿದೆ. ನಾಗ ಚೈತನ್ಯ ಹಾಗೂ ಸಮಂತಾ ಪ್ರೀತಿಗೆ ಕಾರಣರಾಗಿದ್ದ ನಿರ್ದೇಶಕಿಯೊಬ್ಬರಿಗೆ ಇಬ್ಬರೂ ಕಾಲ್‌ಶೀಟ್ ನೀಡಿದ್ದಾರಂತೆ. ಈ ನಿರ್ದೇಶಕಿಯೊಂದಿಗೆ ಸಿನಿಮಾ ಮಾಡಲು ತಮ್ಮ ನಡುವಿನ ಮನಸ್ತಾಪವನ್ನೇ ಪಕ್ಕಕ್ಕೆ ಇಟ್ಟಿದ್ದಾರೆಂಬುದು ಸುದ್ದಿ.

ನಾಗಚೈತನ್ಯ- ಸಮಂತಾ ಜೊತೆ ನಂದಿನಿ ರೆಡ್ಡಿ ಸಿನಿಮಾ

ನಾಗಚೈತನ್ಯ- ಸಮಂತಾ ಜೊತೆ ನಂದಿನಿ ರೆಡ್ಡಿ ಸಿನಿಮಾ

ಸಮಂತಾ ಹಾಗೂ ನಾಗಚೈತನ್ಯ ಇಬ್ಬರಿಗೂ ಟಾಲಿವುಡ್ ನಿರ್ದೇಶಕಿ ನಂದಿನಿ ರೆಡ್ಡಿಗೆ ಸ್ನೇಹಿತೆ. ಸದ್ಯ ಸಂತೋಷ್ ಶೋಭನ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ನಂದಿನಿ ರೆಡ್ಡಿ, ಸಮಂತಾ ಹಾಗೂ ನಾಗಚೈತನ್ಯಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈಗಾಗಲೇ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ನಂದಿನಿ ರೆಡ್ಡಿ ನಿರ್ದೇಶನದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ತಮ್ಮ ನಡುವಿನ ಮನಸ್ತಾಪವನ್ನು ಮರೆತು ನಿಮ್ಮೊಂದಿಗೆ ಸಿನಿಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸ್ಯಾಮ್-ಚೈ ಜೊತೆ ಸಿನಿಮಾ ಆಗುತ್ತಾ?

ಸ್ಯಾಮ್-ಚೈ ಜೊತೆ ಸಿನಿಮಾ ಆಗುತ್ತಾ?

ವಿಚ್ಛೇದನದ ಬಳಿಕ ಸಮಂತಾ ಹಾಗೂ ನಾಗಚೈತನ್ಯ ನಡುವಿನ ಮನಸ್ತಾಪ ದುಪ್ಪಟ್ಟಾಗಿದೆ. ಇಬ್ಬರಿಗೊಬ್ಬರು ಬಹಿರಂಗವಾಗಿ ಮಾತಾಡಿಕೊಳ್ಳದೇ ಹೋದರೂ, ಒಳಗೊಳಗೆ ಉರಿದು ಬೀಳುತ್ತಿದ್ದಾರೆ ಅನ್ನುವ ಸುದ್ದಿ ಇದೆ. ಇಂತಹ ಸಂದರ್ಭದಲ್ಲೂ ಸಮಂತಾ, ನಾಗಚೈತನ್ಯ ಒಟ್ಟಿಗೆ ಕೆಲಸ ಮಾಡಲು ಹೇಗೆ ಸಾಧ್ಯ? ಅನ್ನುವ ಪ್ರಶ್ನೆ ಎದುರಾಗುವುದು ಸಹಜ. ಇಲ್ಲಿ ನಂದಿನಿ ರೆಡ್ಡಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಒಟ್ಟಿಗೆ ನಟಿಸುತ್ತಿಲ್ಲ. ಇಬ್ಬರೂ ಬೇರೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಂತಾ ಎಸ್‌ಆರ್‌ಟಿ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ನಟಿಸುತ್ತಿದ್ದರೆ, ಇತ್ತ ನಾಗಚೈತನ್ಯ ವೈಜಯಂತಿ ಮೂವೀಸ್‌ನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ನಂದಿನಿ ರೆಡ್ಡಿ ಸಂಕಷ್ಟ

ನಂದಿನಿ ರೆಡ್ಡಿ ಸಂಕಷ್ಟ

ನಿರ್ದೇಶಕಿ ನಂದಿನಿ ರೆಡ್ಡಿಗೆ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಪ್ರತ್ಯೇಕವಾಗಿ ಡೇಟ್ ಕೊಟ್ಟಿದ್ದಾರೆ. ಆದರೆ, ಯಾರಿಗೆ ಮೊದಲು ಸಿನಿಮಾ ಮಾಡಬೇಕು ಅನ್ನೋದು ದೊಡ್ಡ ಗೊಂದಲ ಎದುರಾಗಿದೆ. ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ನಿರ್ದೇಶಕಿ ನಂದಿನಿ ರೆಡ್ಡಿಗೆ ಸ್ನೇಹಿತರು. ಅಲ್ಲದೆ ಇಬ್ಬರ ಮದುವೆಯಾಗುವುದಕ್ಕೆ ನಂದಿನಿ ರೆಡ್ಡಿಯೇ ಕಾರಣ ಎನ್ನಲಾಗಿದೆ. ಹೀಗಾಗಿ ಯಾರದ್ದೇ ಸಿನಿಮಾ ಮೊದಲು ಆರಂಭ ಮಾಡಿದರೂ, ಇನ್ನೊಬ್ಬರು ಬೇಸರಪಟ್ಟುಕೊಳ್ಳುವ ಸಂದಿಗ್ಧ ಪರಿಸ್ಥಿತಿ. ಹೀಗಾಗಿ ನಂದಿನಿ ರೆಡ್ಡಿ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

ಸ್ಯಾಮ್- ಚೈ ಕೋಪ ಕಮ್ಮಿಯಾಗಿಲ್ಲ

ಸ್ಯಾಮ್- ಚೈ ಕೋಪ ಕಮ್ಮಿಯಾಗಿಲ್ಲ

ಒಂದು ವಾರದ ಹಿಂದೆ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ರಾಮನಾಯ್ಡು ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ನಾಗಚೈತನ್ಯ 'ಬಂಗಾರರಾಜು' ಸಿನಿಮಾಗಾಗಿ ಕೆಲಸ ಮಾಡುತ್ತಿದ್ದರೆ, ಸಮಂತಾ 'ಯಶೋಧ' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು. ಹೀಗಿದ್ದರೂ ಇಬ್ಬರೂ ಭೇಟಿ ಮಾಡಿ, ಮಾತನಾಡಲು ಮುಂದಾಗಿಲ್ಲ. ಹೀಗಾಗಿ ನಂದಿನಿ ರೆಡ್ಡಿ ಇಬ್ಬರಲ್ಲಿ ಯಾರಿಗೆ ಮೊದಲು ಸಿನಿಮಾ ಮಾಡುತ್ತಾರೆ ಎನ್ನುವುದು ಕುತೂಹಲದ ವಿಷಯವಾಗಿದೆ.

More from Filmibeat

English summary
Nandini Reddy is said to have narrated a story each to Naga Chaitanya and Samantha. Nandini Reddy has locked Nagachaitanya for Vyjayanthi Movies and to direct Samantha under the SRT Entertainment banner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X