ಸಮಂತಾ ಊಹೆ ಮಾಡಿದಷ್ಟು ಶ್ರೀಮಂತೆಯಲ್ವಂತೆ: ಈ ನಟಿ ಬಳಿ ಇರುವ ಆಸ್ತಿ ಇಷ್ಟೇ!
'ಪುಷ್ಪ' ಸಿನಿಮಾದ ಒಂದೇ ಒಂದು ಹಾಡಿದೆ 5 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಸಮಂತಾ ಅನ್ನುವ ಮಾತು ಕೇಳಿ ಬಂದಿತ್ತು. ವಿಚ್ಚೇದನದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾ, ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಮಂತಾ ಬಳಿ ಸಿಕ್ಕಾಪಟ್ಟೆ ಹಣವಿದೆ. ಬಂಗ್ಲೆ, ಫ್ಲ್ಯಾಟ್, ಹಣ ಎಲ್ಲಾ ಇದೆ ಎಂದು ಭಾವಿಸುವುದು ಸಹಜ. ಆದರೆ, ನಾವು-ನೀವು ಊಹೆ ಮಾಡಿದಷ್ಟು ಹಣ ಸಮಂತಾ ಬಳಿ ಇಲ್ಲ ಅಂತ ಟಾಲಿವುಡ್ ಹೇಳುತ್ತಿದೆ.
Recommended Video
ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿದ್ದಂತೆ ಒಂದಿಷ್ಟು ಟೀಕೆಗಳನ್ನು ಮಾಡಲಾಗಿತ್ತು. ಕೆಲವು ಸಮಂತಾ 200 ಕೋಟಿ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದರು. ಮತ್ತೆ ಕೆಲವು 200 ಕೋಟಿಗಾಗಿ ನಾಗಚೈತನ್ಯಗೆ ವಿಚ್ಛೇದನ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಟಾಲಿವುಡ್ ಮಾಧ್ಯಮಗಳಲ್ಲಿ ಸಮಂತಾ ಬಳಿ ಇಷ್ಟೊಂದು ಹಣವಿಲ್ಲ ಎಂದು ವರದಿಯಾಗಿವೆ. ಹಾಗಿದ್ದರೆ ಸಮಂತಾ ಬಳಿ ಸದ್ಯಕ್ಕೆ ಇರುವ ಆಸ್ತಿ ಏನು ಅನ್ನುವುದನ್ನು ತಿಳಿಯಲು ಮುಂದೆ ಓದಿ...

ಸಮಂತಾ ಬಾಡಿಗೆ ಮನೆಯಲ್ಲಿ ವಾಸ
ವಿವಾಹದ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಡ್ಯೂಪ್ಲೆಕ್ಸ್ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್‌ನಲ್ಲೇ ನಾಲ್ಕು ವರ್ಷ ಸಂಸಾರ ಕೂಡ ನಡೆಸಿದ್ದರು. ಆದರೆ, ವಿಚ್ಛೇದನದ ಬಳಿಕ ಸಮಂತಾ ಇದೇ ಫ್ಲ್ಯಾಟ್‌ನಲ್ಲಿ ವಾಸವಿದ್ದು ನಾಗಚೈತನ್ಯ ಬಳಿಕ ಜೀವನಾಂಶ ರೂಪದಲ್ಲಿ ಫ್ಲ್ಯಾಟ್ ಇಟ್ಟಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ತೆಲುಗು ಮಾಧ್ಯಮಗಳ ವರದಿ ಪ್ರಕಾರ, ಸಮಂತಾ ಆ ಫ್ಲ್ಯಾಟ್ ತೊರೆದಿದ್ದು, ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಿದ್ದಾರಂತೆ. ಈ ಡ್ಯೂಪ್ಲೆಕ್ಸ್ ಫ್ಲ್ಯಾಟ್ ಅನ್ನು ನಾಗಚೈತನ್ಯ ಮಾರಿದ್ದಾರೆ ಎಂದು ವರದಿಯಾಗಿದೆ.

ಸಮಂತಾ ಬಳಿ ಇದೆ ಎರಡು ಫ್ಲ್ಯಾಟ್
ಸಮಂತಾ ಬಳಿ ಎರಡು ಫ್ಲ್ಯಾಟ್ ಇದೆಯಂತೆ. ಚೆನ್ನೈ ಹಾಗೂ ಹೈದರಾಬಾದಿನಲ್ಲೊಂದು ಪ್ಲ್ಯಾಟ್ ಇದೆ ಎನ್ನಲಾಗಿದೆ. ಇದರೊಂದಿಗೆ ಹೈದರಾಬಾದಿನ ಎಸ್ ಎಲ್ ಎನ್ ಟರ್ಮಿನಸ್ ಬಳಿ ಕಮರ್ಷಿಯಲ್ ಪ್ರಾಪರ್ಟಿ ಇದೆಯಂತೆ. ಇಷ್ಟು ಬಿಟ್ಟರೆ ಬೇರೆ ಆಸ್ತಿಯನ್ನು ಸಮಂತಾ ಹೊಂದಿಲ್ಲ ಎಂದು ತೆಲುಗು ಮಾಧ್ಯಮಗಳು ಹೇಳುತ್ತಿವೆ. ಈ ಎರಡು ಫ್ಲ್ಯಾಟ್ ಹಾಗೂ ಕಮರ್ಷಿಯಲ್ ಜಾಗದಿಂದ ಸಾವಿರ ರೂಪಾಯಿಗಳಲ್ಲಿ ಬಾಡಿಗೆ ಬರುತ್ತಿದೆ ಎಂದು ವರದಿಯಾಗಿದೆ.

ಒಂದು ದಶಕ ಸಿನಿಮಾದಲ್ಲಿ ದುಡಿದ ಹಣ ಏನಾಯ್ತು?
ಸಮಂತಾ ಮಧ್ಯಮ ವರ್ಗದಿಂದ ಬಂದ ನಟಿ. ಹೀಗಾಗಿ ಆರಂಭದ ದಿನಗಳಲ್ಲಿ ಸಮಂತಾಗೆ ಹೆಚ್ಚು ಸಂಭಾವನೆ ಸಿಕ್ಕಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಅವರಿಗೆ ಹೆಚ್ಚು ಸಂಭಾವನೆ ಸಿಗುತ್ತಿದೆ. ಆದರೆ, ತಾನು ದುಡಿದಿದ್ದರಲ್ಲಿ ಮನೆಯನ್ನೂ ನೋಡಿಕೊಳ್ಳಬೇಕಿದೆ. ಇಷ್ಟು ದಿನ ದುಡಿದ ಹಣವನ್ನು ಎರಡು ಫ್ಲ್ಯಾಟ್ಸ್ ಹಾಗೂ ಕಮರ್ಷಿಯಲ್ ಪ್ರಾಪರ್ಟಿಗೆ ಹಾಕಿದ್ದಾರೆ. ಹೀಗಾಗಿ ನಾಗಚೈತನ್ಯರಿಂದ 200 ಕೋಟಿ ಜೀವನಾಂಶ ಪಡೆದಿದ್ದಾರೆ ಅನ್ನುವುದೆಲ್ಲಾ ಸುಳ್ಳು ಎಂದು ಟಾಲಿವುಡ್ ವರದಿ ಮಾಡಿದೆ.

ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾ
ಸಮಂತಾ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗಚೈತನ್ಯರಿಂದ ದೂರವಾದ ಬಳಿಕ ಸಮಂತಾ ಸಿನಿಮಾ ಅಷ್ಟೇ ಅಲ್ಲದೆ ವೆಬ್ ಸಿರೀಸ್‌ಗಳಲ್ಲೂ ನಟಿಸುತ್ತಿದ್ದಾರೆ. ಇಂಗ್ಲಿಷ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಾಲಿವುಡ್ ಎಂಟ್ರಿಗೆ ವೇದಿಕೆ ರೆಡಿಯಾಗುತ್ತಿದೆ. ಒಟ್ಟಿನಲ್ಲಿ ಸಮಂತಾ 2022ರಲ್ಲಿ ಬಿಡುವಿಲ್ಲದೆ ನಟನೆ ಮಾಡುತ್ತಿದ್ದಾರೆ. ಈ ಮೂಲಕ ವಿಚ್ಛೇದನದ ನೋವಿನಿಂದ ಹೊರಬರಲು ನಿರ್ಧರಿಸಿದ್ದಾರೆ.


Click it and Unblock the Notifications











