ಸಮಂತಾಗೆ ತೆಲುಗಿನಲ್ಲಿ ಆಫರ್ ಕಮ್ಮಿ ಆಯ್ತಾ? ಮುಂಬೈನಲ್ಲಿ ಹೊಸ ಮನೆ ಹುಡುಕುತ್ತಿರೋದ್ಯಾಕೆ?

ಸಮಂತಾ ಅನಾರೋಗ್ಯ ಹಿನ್ನೆಲೆ ಒಂದು ವರ್ಷ ನಟನೆಯಿಂದ ದೂರು ಉಳಿಯಲು ನಿರ್ಧರಿಸಿದ್ದರು. ಅದರಂತೆಯೇ ಒಂದಿಷ್ಟು ದಿನ ಸಿನಿಮಾದಿಂದ ದೂರು ಉಳಿದಿದ್ದು, ಆರೋಗ್ಯದ ಕಡೆಗೆ ಗಮನ ಹರಿಸಿದ್ದರು. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸಿದ ಕೊನೆಯ ಸಿನಿಮಾ ಖುಷಿ ರಿಲೀಸ್ ಆಗಿದ್ದು ಬಿಟ್ಟರೆ, ಮತ್ಯಾವ ಸಿನಿಮಾವೂ ರಿಲೀಸ್ ಆಗಿಲ್ಲ.

ಸದ್ಯ ಸಮಂತಾ ಕೈಯಲ್ಲಿ 'ಸಿಟಾಡೆಲ್' ವೆಬ್ ಸಿರೀಸ್ ಮಾತ್ರ ಇದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಪ್ರಾಜೆಕ್ಟ್ ರಿಲೀಸ್ ಬಳಿಕ ಸಮಂತಾ ಮತ್ತೆ ಸಿನಿಮಾರಂಗದಲ್ಲಿ ಆಕ್ಟಿವ್ ಆಗುವ ಸಾಧ್ಯತೆಗಳು ಇವೆ. ನಟನೆಯಿಂದ ಒಂದಿಷ್ಟು ದಿನ ಬ್ರೇಕ್ ತೆಗೆದುಕೊಂಡು ಮರಳಿದ ಸಮಂತಾ ಮುಂಬೈ ಕಡೆ ಮುಖ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Samantha Ruth Prabhu planning to shift in new house in Mumbai

ಸಮಂತಾ ಅನಾರೋಗ್ಯದ ಬಳಿಕ ತೆಲುಗು ಪ್ರಾಜೆಕ್ಟ್‌ಗಳಿಗಿಂತ ಹೆಚ್ಚಾಗಿ ಬಾಲಿವುಡ್‌ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದೇ ವೇಳೆ ಟಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ಸದ್ದು ಮಾಡುತ್ತಿದ್ದು, ಮುಂಬೈನಲ್ಲಿ ಸಮಂತಾ ಹೊಸ ಮನೆಯನ್ನು ಹುಡುಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮಂತಾ ಹಿಂದೆ ಒಪ್ಪಿಕೊಂಡು ಬಾಲಿವುಡ್ ಪ್ರಾಜೆಕ್ಟ್‌ಗಾಗಿ ಮುಂಬೈಗೆ ಶಿಫ್ಟ್ ಆಗುವುದಕ್ಕೆ ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ 'ಸಿಟಾಡೆಲ್' ವೆಬ್ ಸೀರಿಸ್ ಬಳಿಕ ಬಾಲಿವುಡ್‌ನಲ್ಲಿ ಆಫರ್ ಸಿಗಬಹುದು ಅನ್ನೋ ನಿರೀಕ್ಷೆ ಮೇಲೆ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ಆದರೆ, ಇನ್ನು ಕೆಲವರು ಈಗ ಸಿನಿಮಾಗಳು ಭಾಷೆಯ ಅಡೆ ತಡೆಗಳನ್ನು ಮೀರಿ ಮುಂದುವರೆದಿವೆ. ಯಾರೇ ಆಗಲಿ, ಯಾವುದೇ ಭಾಷೆಯಲ್ಲಿ ನಟಿಸಿದರೂ ಅದು ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತವೆ. ಜನರು ಆ ಸಿನಿಮಾವನ್ನು ನೋಡುತ್ತಿದ್ದಾರೆ. ಹೀಗಾಗಿ ಸಮಂತಾ ಇನ್ನೂ ಉತ್ತಮ ಅವಕಾಶಗಳಿಗಾಗಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ.

Samantha Ruth Prabhu planning to shift in new house in Mumbai

ಸಮಂತಾ ತನ್ನ ಅನಾರೋಗ್ಯದ ಬಗ್ಗೆ ರಿವೀಲ್ ಮಾಡಿದ ದಿನದಿಂದ ಟಾಲಿವುಡ್‌ನಲ್ಲಿ ಆಫರ್‌ಗಳು ಕಡಿಮೆ ಆಗಿವೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದನ್ನೇ ಸವಾಲಾಗಿ ಸ್ವೀಕರಿಸಿರೋ ನಟಿ ತನ್ನ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಿಗ್ ಪ್ರಾಜೆಕ್ಟ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿವೆ. ಒಟ್ನಲ್ಲಿ ಇವೆಲ್ಲಾ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಗಳು.

ಇನ್ನು ಸಮಂತಾ ಇತ್ತೀಚೆಗೆ 'ಸಿಟಾಡೆಲ್' ಶೂಟಿಂಗ್ ವೇಳೆ ತನ್ನ ಅನಾರೋಗ್ಯದಿಂದ ಆದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೆಬ್ ಸೀರಿಸ್‌ನ ಆಕ್ಷನ್ ಸೀನ್‌ಗಳಲ್ಲಿ ನಟಿಸುವಾಗ ದೈಹಿಕವಾಗಿ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡಿದ್ದಾರೆ. ಶೇ.50ರಷ್ಟು ವೀಕ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Buzz is that Samantha planning shift Mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X