ಶಾರುಖ್ ಖಾನ್ 'ಜವಾನ್' ರಿಲೀಸ್ ಗೊಂದಲವೇನು? ಸೀನ್‌ನಲ್ಲಿ 'ಆದಿಪುರುಷ್' ಬಂದಿದ್ದೇಕೆ?

ಸತತ ಸೋಲುಗಳ ಬಳಿಕ ಶಾರುಖ್ ಖಾನ್ ಅದ್ಭುತವಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. 'ಪಠಾಣ್' ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಈಗ ಮತ್ತೊಂದು ಸಿನಿಮಾ 'ಜವಾನ್' ಬಿಡುಗಡೆಗೆ ಸಜ್ಜಾಗುತ್ತಿದೆ.

ಸದ್ಯ ಬಾಲಿವುಡ್‌ನಲ್ಲಿ ಶಾರುಖ್ ಅಭಿಮಾನಿಗಳನ್ನು ನಿರಾಸೆ ಮಾಡುವಂತಹ ಸುದ್ದಿಯೊಂದು ಓಡಾಡುತ್ತಿದೆ. ಆಟ್ಲಿ ನಿರ್ದೇಶಿಸುತ್ತಿರುವ ಸಿನಿಮಾ 'ಜವಾನ್' ಅಂದುಕೊಂಡ ದಿನ ರಿಲೀಸ್ ಆಗೋದಿಲ್ಲ. ಇಂತಹದ್ದೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.

Shah Rukh Khan’s Jawan Getting Postponed and Prabhas Adipurush may release on 2nd June?

'ಜವಾನ್' ಸಿನಿಮಾ ಇದೇ ಜೂನ್ 2, 2023ಯಂದು ಬಿಡುಗಡೆಯಾಗಬೇಕಿತ್ತು. ಆದರೆ, ಬಾಲಿವುಡ್‌ನಲ್ಲಿ 'ಜವಾನ್' ಈ ದಿನ ರಿಲೀಸ್ ಆಗುವುದಿಲ್ಲ ಎಂದು ಸುದ್ದಿ ಹರಿದಾಡುತ್ತಿದೆ. ಹೀಗಾಗಿ 'ಆದಿಪುರುಷ್' ಟೀಮ್ ಸ್ಟ್ರಾಟಜಿ ಮಾಡುವುದಕ್ಕೆ ಶುರುಮಾಡಿದೆ ಅನ್ನೋದು ಲೇಟೆಸ್ಟ್ ನ್ಯೂಸ್.

ಶಾರುಖ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಜವಾನ್'

ಶಾರುಖ್ ಖಾನ್ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಲು ನಿರ್ಧರಿಸಿದಾಗ, ಮೂರು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ ಮೊದಲನೇ ಸಿನಿಮಾ 'ಪಠಾಣ್'. ಈ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಎರಡನೇ ಸಿನಿಮಾ ಅಟ್ಲಿ ನಿರ್ದೇಶನದ 'ಜವಾನ್'. ಹಾಗೇ ಮೂರನೇ ಸಿನಿಮಾ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ'.

'ಪಠಾಣ್' ಸೂಪರ್ ಸಕ್ಸಸ್ ಬಳಿಕ 'ಜವಾನ್' ಕ್ಯೂನಲ್ಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೂಡ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಮುಗಿದಿದೆ ಎನ್ನಲಾಗುತ್ತಿದೆ. ಆದರೂ, 'ಜವಾನ್' ರಿಲೀಸ್ ಅನ್ನು ಪೋಸ್ಟ್‌ಪೋನ್ ಮಾಡಿದ್ದಾರೆ ಅನ್ನೋ ಗುಸು ಗುಸು ಓಡಾಡುತ್ತಿದೆ. ಅಷ್ಟಕ್ಕೂ 'ಜವಾನ್' ಪೋಸ್ಟ್‌ಪೋನ್ ಆಗಿದ್ದೇಕೆ? ರಿಲೀಸ್ ಆಗೋದು ಯಾವಾಗ? ಮುಂದೆ ಓದಿ.

Shah Rukh Khan’s Jawan Getting Postponed and Prabhas Adipurush may release on 2nd June?

'ಜವಾನ್' ರಿಲೀಸ್ ಮುಂದಕ್ಕೆ ಹೋಗಿದ್ದೇಕೆ?

ಈ ಮೊದಲು ಜೂನ್ 2ಕ್ಕೆ ಶಾರುಖ್ ಖಾನ್ 'ಜವಾನ್' ರಿಲೀಸ್ ಆಗಬೇಕಿತ್ತು. ಒಂದ್ವೇಳೆ ಅಂದ್ಕೊಂಡ ದಿನವೇ ರಿಲೀಸ್ ಆದರೆ, 'ಜವಾನ್'ಗೆ ಕಾಂಪಿಟೇಷನ್ ಜಾಸ್ತಿ. ಎರಡು ವಾರಗಳ ಬಳಿಕ ಪ್ರಭಾಸ್ ಸಿನಿಮಾ 'ಆದಿಪುರುಷ್' (ಜೂನ್ 16) ರಿಲೀಸ್ ಆಗಲಿದೆ. ಇನ್ನೊಂದು ವಾರದಲ್ಲಿ ಅಜಯ್ ದೇವಗನ್ ಸಿನಿಮಾ 'ಮೈದಾನ್' (ಜೂನ್ 23) ರಿಲೀಸ್ ಆಗುತ್ತಿದೆ.

ಇನ್ನು ಜೂನ್ 29ಕ್ಕೆ ಕಿಯಾರಾ ಅಡ್ವಾಣಿ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ 'ಸತ್ಯಪ್ರೇಮ್ ಕಿ ಕಹಾನಿ' ರಿಲೀಸ್ ಆಗುತ್ತು, ಇದೇ ದಿನವೇ 'ಜವಾನ್' ಬಿಡುಗಡೆ ಮಾಡಲಾಗುತ್ತೆ ಎನ್ನಲಾಗಿದೆ. ಹೀಗಾದರೆ, ಜೂನ್‌ನಲ್ಲಿ ರಿಲೀಸ್ ಆಗಬೇಕಿರೋ ಎಲ್ಲಾ ಸಿನಿಮಾಗಳು ಪೋಸ್ಟ್‌ಪೋನ್ ಆಗುವ ಸಾಧ್ಯತೆಯಿದೆ.

ಜವಾನ್ ಡೇಟ್‌ನಲ್ಲಿ 'ಆದಿಪುರುಷ್'

'ಜವಾನ್' ಪೋಸ್ಟ್‌ಪೋನ್ ಆಗಿರುವುದರಿಂದ 'ಆದಿಪುರುಷ್‌'ಗೆ ಲಾಭ ಎನ್ನಲಾಗುತ್ತಿದೆ. ಜೂನ್ 2 ರಂದು 'ಜವಾನ್' ರಿಲೀಸ್ ಆಗದೇ ಹೋದರೆ, 'ಆದಿಪುರುಷ್' ಆ ಡೇಟ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಒಂದ್ವೇಳೆ ಜೂನ್ 2ಕ್ಕೆ 'ಆದಿಪುರುಷ್' ರಿಲೀಸ್ ಆದರೆ, ಮೂರು ವಾರ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗೋದಿಲ್ಲ. ಹೀಗಾಗಿ 'ಆದಿಪುರುಷ್'ಗೆ ದೊಡ್ಡ ಲಾಭ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.

More from Filmibeat

English summary
Shah Rukh Khan’s Jawan Getting Postponed and Prabhas Adipurush may release on 2nd June?, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X