ಬಾಲಕೃಷ್ಣಗಿಂತ ಚಿರಂಜೀವಿ ಚಿತ್ರಕ್ಕೆ 50 ಲಕ್ಷ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟ ಶ್ರುತಿ ಹಾಸನ್

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ದಶಕಗಳ ಮೇಲಾಗಿದೆ. ಕಮಲ್ ಹಾಸನ್ ಪುತ್ರಿ ಅನ್ನುವುದನ್ನು ಬಿಟ್ಟರೆ, ಶ್ರುತಿ ಹಾಸನ್ ಎಲ್ಲೂ ತಂದೆ ಹೆಸರನ್ನು ತಂದಿಲ್ಲ. ಇತ್ತ ಕಮಲ್ ಹಾಸನ್ ಕೂಡ ಚಿತ್ರರಂಗದಲ್ಲಿ ಮಗಳ ಬೆಂಬಲಕ್ಕೆ ನಿಂತಿಲ್ಲ. ತನ್ನದೇ ಸ್ವಂತ ಇಮೇಜ್ ಬೆಳೆಸಿಕೊಂಡ ಶ್ರುತಿ ಹಾಸನ್, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿ ಇಮೇಜ್ ಬಿಲ್ಡ್ ಮಾಡಿಕೊಂಡಿದ್ದಾರೆ. ಸದ್ಯ ಶ್ರುತಿ ಹಾಸನ್ ದಿಗ್ಗಜರಿಬ್ಬರ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ, ಆ ಎರಡು ಸಿನಿಮಾಗಳಿಗೆ ಪಡೆದ ಸಂಭಾವನೆ ಬಗ್ಗೆನೇ ಈಗ ಚರ್ಚೆಯಾಗುತ್ತಿದೆ.

ಶ್ರುತಿ ಹಾಸನ್‌ ಮೂರು ಚಿತ್ರರಂಗದಲ್ಲೂ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಶ್ರುತಿ ಹಾಸನ್ ಇದೂವರೆಗೂ ಕೇವಲ ನಟಿಯಾಗಿ ಗುರುತಿಸಿಕೊಂಡಿಲ್ಲ. ಬದಲಾಗಿದೆ ಗಾಯಕಿ, ಡ್ಯಾನ್ಸರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ವೆಬ್ ಸಿರೀಸ್‌ನಲ್ಲೂ ಕಾಣಿಸಿಕೊಂಡಿರುವ ಶ್ರುತಿ ಸಂಭಾವನೆ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಸದ್ಯ ಶ್ರುತಿ ಹಾಸನ್ ಈಗ ಬಾಲಕೃಷ್ಣ ಅಭಿನಯದ ಎನ್‌ಬಿಕೆ 107 ಹಾಗೂ ಚಿರಂಜೀವಿಯ 154ನೇ ಚಿತ್ರಕ್ಕೆ ಜೈ ಎಂದಿದ್ದಾರೆ. ಆದರೆ ಬಾಲಕೃಷ್ಣ ಚಿತ್ರಕ್ಕಿಂತ ಚಿರಂಜೀವಿ ಸಿನಿಮಾಗೇ ಹೆಚ್ಚು ಸಂಭಾವನೆ ಪಡೆದಿದ್ದು ಸುದ್ದಿಯಾಗಿದೆ.

 NBK 107ಕ್ಕೆ ಶ್ರುತಿ ಪಡಿದಿದ್ದೆಷ್ಟು?

NBK 107ಕ್ಕೆ ಶ್ರುತಿ ಪಡಿದಿದ್ದೆಷ್ಟು?

ಶ್ರುತಿ ಹಾಸನ್ NBK 107 ಸಿನಿಮಾ ಸೆಟ್ಟಿಗೆ ಎಂಟ್ರಿಕೊಟ್ಟಿದ್ದಾರೆ. ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾ ಇದಾಗಿದ್ದು, ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ದುನಿಯಾ ವಿಜಯ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ 'ಬಲುಪು' ಹಾಗೂ 'ಕ್ರ್ಯಾಕ್' ಈ ಎರಡು ಸಿನಿಮಾಗಳಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ ಈ ಸಿನಿಮಾ ಶ್ರುತಿ ಹಾಸನ್ 1.5 ಕೋಟಿ ಸಂಭಾವನೆ ಪಡೆದಿದ್ದಾರೆ. 'ಪುಷ್ಪ' ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

 ಚಿರಂಜೀವಿ ಜೊತೆ ಶ್ರುತಿ ನಟನೆ

ಚಿರಂಜೀವಿ ಜೊತೆ ಶ್ರುತಿ ನಟನೆ

ಇದೇ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಚಿರಂಜೀವಿ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ. ಮೆಗಾಸ್ಟಾರ್ 154ನೇ ಸಿನಿಮಾವನ್ನು ಬಾಬಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದು ಟಾಲಿವುಡ್‌ನ ಸೀನಿಯರ್ ಸೂಪರ್‌ಸ್ಟಾರ್‌ಗಳ ಜೊತೆ ಶ್ರುತಿ ಹಾಸನ್ ನಟಿಸುತ್ತಿರುವ ಎರಡನೇ ಸಿನಿಮಾ. ಈ ಸಿನಿಮಾಗೆ ಶ್ರುತಿ ಹಾಸನ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಈ ಸಿನಿಮಾ ಬಗ್ಗೆ ಪಡೆದ ಸಂಭಾವನೆ ಬಗ್ಗೆನೇ ಟಾಲಿವುಡ್‌ನಲ್ಲೀಗ ಚರ್ಚೆಯಾಗುತ್ತಿದೆ.

 ಚಿರಂಜೀವಿ ಚಿತ್ರಕ್ಕೆ ಹೆಚ್ಚು ಸಂಭಾವನೆ

ಚಿರಂಜೀವಿ ಚಿತ್ರಕ್ಕೆ ಹೆಚ್ಚು ಸಂಭಾವನೆ

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ ಶ್ರುತಿ ಹಾಸನ್ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಬಾಲಕೃಷ್ಣ ಸಿನಿಮಾ 1.5 ಕೋಟಿ ಪಡೆದಿರುವ ಶ್ರುತಿ ಹಾಸನ್, ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ 2 ಕೋಟಿ ಸಂಭಾವನೆ ಕೇಳಿದ್ದಾರೆ. ಬಾಲಯ್ಯಗಿಂತ ಚಿರಂಜೀವಿ ಚಿತ್ರಕ್ಕೆ 50 ಲಕ್ಷ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದೇ ವಿಚಾರದ ಬಗ್ಗೆ ಟಾಲಿವುಡ್‌ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಒಂದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳಿಗೆ ಶ್ರುತಿ ಎರಡು ವಿಭಿನ್ನ ಸಂಭಾವನೆ ಪಡೆದಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

 ಹಿರಿಯ ನಟರಿಗೆ ನಾಯಕರೇ ಇಲ್ಲ

ಹಿರಿಯ ನಟರಿಗೆ ನಾಯಕರೇ ಇಲ್ಲ

ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಹಾಗೂ ಮೆಗಾಸ್ಟಾರ್ ಚಿರಂಜೀವಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಇಬ್ಬರು ದಿಗ್ಗಜರಿಗೆ ನಿರ್ದೇಶಕರು ಸಿಗುತ್ತಿದ್ದಾರೆ. ಕಥೆ ಸಿಗುತ್ತಿದೆ. ಆದರೆ, ಇವರ ಇಮೇಜ್‌ಗೆ ಹೊಂದಿಕೊಳ್ಳುವಂತಹ ನಾಯಕಿಯರು ಮಾತ್ರ ಸಿಗುತ್ತಿಲ್ಲ. ಈ ಕಾರಣಕ್ಕೆ 36 ವರ್ಷದ ನಟಿ ಶ್ರುತಿ ಹಾಸನ್‌ಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಇದನ್ನ ಅರಿತ ಶ್ರುತಿ ಹಾಸನ್ 50 ಲಕ್ಷ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Shruti Haasan charged 50 lakhs extra for Chiranjeevi movie than Balakrishna movie. Shruti Haasan cost 1.5 crore for Balakrishna starrer NBK 107' movie. She charged 2 crore for Chiranjeevi starrer 154th movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X