For Quick Alerts
  ALLOW NOTIFICATIONS  
  For Daily Alerts

  ಮಹಿಳಾ ಪ್ರಧಾನ ಚಿತ್ರಕ್ಕೆ ಶ್ವೇತಾ ಶ್ರೀವಾತ್ಸವ್‌ಗೆ ಸಿಕ್ಕಿದ್ದು 40 ಲಕ್ಷ ಸಂಭಾವನೆ: ಇದು ನಿಜವೇ?

  |

  ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಾ ಶ್ರೀವಾತ್ಸವ್ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಆರಂಭ ಆಗಿದೆ. ಒಂದಷ್ಟು ದಿನ ಸಿನಿಮಾದಿಂದ ದೂರ ಉಳಿದಿದ್ದ ನಟಿ ಮತ್ತೀಗ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಶ್ವೇತಾ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಗಲೇ ಮೂರನೇ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ. ಹಾಗಂತ ಶ್ವೇತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂತಲ್ಲ. ಈ ನಟಿಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

  'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ಕಿರುಗೂರಿನ ಗೈಯ್ಯಾಳಿಗಳು', 'ಫೇರ್ ಅಂಡ್ ಲವ್ಲಿ' ಅಂತಹ ಸಿನಿಮಾ ಶ್ವೇತಾ ಶ್ರೀವಾತ್ಸವ್ ಕೆರಿಯರ್‌ಗೆ ಸಕ್ಸಸ್ ಕೊಟ್ಟ ಸಿನಿಮಾ. ಆದರೆ, ವಿವಾಹದ ಬಳಿಕ ಈ ನಟಿ ನಟನೆಯಿಂದ ಕೊಂಚ ದೂರ ಉಳಿದಿದ್ದರು. ಆದ್ರೀಗ ಮತ್ತೆ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಶ್ವೇತಾ ಶ್ರೀವಾತ್ಸವ್ ಸೆಕೆಂಡ್ ಇನ್ಸಿಂಗ್ಸ್‌ನಲ್ಲಿ ಹೊಸ ಸಿನಿಮಾಗೆ ಭರ್ಜರಿ ಸಂಭಾವನೆ ಸಿಕ್ಕಿದ್ಯಂತೆ. ಹೀಗಂತಾ ಸ್ಯಾಂಡಲ್‌ವುಡ್‌ನಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ.

  ದೊಡ್ಡ ವಿರಾಮದ ಬಳಿಕ 'ರಾಘವೇಂದ್ರ ಸ್ಟೋರ್ಸ್‌'ಗೆ ಬಂದ ಶ್ವೇತ ಶ್ರೀವಾತ್ಸವ್ದೊಡ್ಡ ವಿರಾಮದ ಬಳಿಕ 'ರಾಘವೇಂದ್ರ ಸ್ಟೋರ್ಸ್‌'ಗೆ ಬಂದ ಶ್ವೇತ ಶ್ರೀವಾತ್ಸವ್

   ಶ್ವೇತಾ ಶ್ರೀವಾತ್ಸವ್‌ಗೆ 40 ಲಕ್ಷ ಸಂಭಾವನೆ

  ಶ್ವೇತಾ ಶ್ರೀವಾತ್ಸವ್‌ಗೆ 40 ಲಕ್ಷ ಸಂಭಾವನೆ

  ಶ್ವೇತಾ ಶ್ರೀವಾತ್ಸವ್ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟಿ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇವರ ಸಹಜ ಅಭಿನಯಕ್ಕೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ದುಡಿದಿದ್ದಕ್ಕೆ ಶ್ವೇತಾ ಶ್ರೀವಾತ್ಸವ್‌ಗೆ ಭರ್ಜರಿ ಸಂಭಾವನೆ ಸಿಕ್ಕಿದೆ ಅಂತ ಗುಲ್ಲೆದ್ದಿದೆ. ಅಂದಹಾಗೆ ಈ ನಟಿ ಮಹಿಳಾ ಪ್ರಧಾನ ಸಿನಿಮಾವೊಂದಕ್ಕೆ ಆಯ್ಕೆ ಆಗಿದ್ದಾರೆ. ಆ ಸಿನಿಮಾಗೆ ನಿರ್ಮಾಪಕರು ಬರೋಬ್ಬರಿ 40 ಲಕ್ಷ ಸಂಭಾವನೆಯಾಗಿ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

   ಶ್ವೇತಾ ಶ್ರೀವಾತ್ಸವ್ ಸಂಭಾವನೆ ಏರಿಸಿಕೊಂಡ್ರಾ?

  ಶ್ವೇತಾ ಶ್ರೀವಾತ್ಸವ್ ಸಂಭಾವನೆ ಏರಿಸಿಕೊಂಡ್ರಾ?

  ಹೊಸಬರ ತಂಡವೊಂದು ದುಬಾರಿ ಮಹಿಳಾ ಪ್ರಧಾನ ಸಿನಿಮಾವನ್ನು ನಿರ್ಮಿಸಲು ಮುಂದಾಗಿದ್ಯಂತೆ. ಆ ಸಿನಿಮಾಗೆ ನಿರ್ದೇಶಕರು ಪರಭಾಷೆಯಿಂದ ನಾಯಕಿಯನ್ನು ಕರೆದುಕೊಂಡು ಬರಲು ಮುಂದಾಗಿದ್ದರಂತೆ. ತೆಲುಗಿನ ಇಬ್ಬರು ಸ್ಟಾರ್ ನಟಿಯರಿಗೆ ಅಪ್ರೋಚ್ ಮಾಡಿದ್ದರು. ಆದರೆ, ಅವರು ಕೇಳಿದ ಸಂಭಾವನೆಗೆ ನಿರ್ಮಾಪಕರು ಬೆಚ್ಚಿಬಿದ್ದರು. ಹೀಗಾಗಿ ಪರಭಾಷೆ ನಟಿಯರನ್ನು ಪಕ್ಕಕ್ಕೆ ತಳ್ಳಿ ಕನ್ನಡದ ನಟಿಯನ್ನೇ ಹುಡುಕೋಣ ಅಂತ ಹೊರಟಾಗ ಶ್ವೇತಾ ಶ್ರೀವಾತ್ಸವ್ ಓಕೆ ಅಂತ ಅನಿಸಿತ್ತಂತೆ. ಮಹಿಳಾ ಪ್ರಧಾನ ಸಿನಿಮಾ ಆಗಿದ್ದರಿಂದ ಈ ನಟನೇ ಸೂಕ್ತ ಚಿತ್ರತಂಡಕ್ಕೆ ಅನಿಸಿದೆ. ಹೀಗಾಗಿ ಶ್ವೇತಾರನ್ನೇ ಚಿತ್ರತಂಡ ಆಯ್ಕೆ ಮಾಡಿದೆ ಅನ್ನುವುದು ಸುದ್ದಿ.

   ಶ್ವೇತಾ ಶ್ರೀವಾತ್ಸವ್ ನಟಿಸಿದ 2 ಸಿನಿಮಾ ಕಾರಣ

  ಶ್ವೇತಾ ಶ್ರೀವಾತ್ಸವ್ ನಟಿಸಿದ 2 ಸಿನಿಮಾ ಕಾರಣ

  ಶ್ವೇತಾ ಶ್ರೀವಾತ್ಸವ್ ಈ ಮಹಿಳಾ ಪ್ರಧಾನ ಚಿತ್ರಕ್ಕೆ ಆಯ್ಕೆ ಆಗಲು ಅವರೇ ನಟಿಸಿದ ಎರಡು ಸಿನಿಮಾಗಳು ಕಾರಣವಂತೆ. ಈ ಚಿತ್ರತಂಡ ಶ್ವೇತಾ ನಟಿಸಿದ 'ಫೇರ್ ಅಂಡ್ ಲವ್ಲಿ' ಹಾಗೂ ಕಿರುಗೂರಿನ ಗೈಯ್ಯಾಳಿಗಳು ಈ ಎರಡು ಸಿನಿಮಾಗಳನ್ನು ನೋಡಿದೆ. ಇದರಲ್ಲಿ ಶ್ವೇತಾ ಶ್ರೀವಾತ್ಸವ್ ಪಾತ್ರ ಕಂಡು ಬೆರಗಾಗಿದ್ದರು ಎನ್ನಲಾಗಿದೆ. ಪರಭಾಷೆ ನಟಿಯರಿಗೆ ಅಷ್ಟೊಂದು ಹಣ ಕೊಡುವುದಕ್ಕಿಂತ ಕನ್ನಡ ನಟಿಗೆ ಒಳ್ಳೆ ಸಂಭಾವನೆ ಕೊಡೋಣ ಅಂತ ನಿರ್ಮಾಪಕರು ನಿರ್ಧರಿಸಿದ್ದರಂತೆ.

   2 ಸಿನಿಮಾಗಳಲ್ಲಿ ಶ್ವೇತಾ ಶ್ರೀವಾತ್ಸವ್ ಬ್ಯುಸಿ

  2 ಸಿನಿಮಾಗಳಲ್ಲಿ ಶ್ವೇತಾ ಶ್ರೀವಾತ್ಸವ್ ಬ್ಯುಸಿ

  ಶ್ವೇತಾ ಶ್ರೀವಾತ್ಸವ್ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಹೋಪ್' ಹಾಗೂ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್'. ಈ ಎರಡೂ ಸಿನಿಮಾಗಳು ಶ್ವೇತಾ ಶ್ರೀವಾತ್ಸವ್ ಸೂಪರ್‌ ಕಮ್ ಬ್ಯಾಕ್ ಸಿನಿಮಾ ಆಗುತ್ತೆ ಅನ್ನುವ ನಂಬಿಕೆಯಲ್ಲಿದ್ದಾರೆ. ಕನ್ನಡ ನಟಿಯೊಬ್ಬರಿಗೆ ಇಷ್ಟು ದೊಡ್ಡ ಸಂಭಾವನೆ ಸಿಕ್ಕಿದ್ದು ಖುಷಿ ವಿಷಯ. ಇನ್ನೊಂದು ವಿಷಯ ಏನೆಂದರೆ, ಶ್ವೇತಾ ಶ್ರೀವಾತ್ಸವ್ ಇಷ್ಟೇ ಸಂಭಾವನೆ ಬೇಕು ಅಂತ ಡಿಮ್ಯಾಂಡ್ ಮಾಡಿರಲಿಲ್ಲ. ನಿರ್ಮಾಪಕರೇ ಕನ್ನಡ ನಟಿಗೆ ಒಳ್ಳೆ ಸಂಭಾವನೆ ಸಿಗಬೇಕು ಅಂತ ಕೊಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು. ಆದರೆ, ಅಧಿಕೃತವಾಗಿ ಈ ತಂಡ ಇನ್ನೂ ಸಿನಿಮಾ ಬಗ್ಗೆ ಅನೌನ್ಸ್ ಮಾಡಿಲ್ಲ. ಸಂಭಾವನೆ ಬಗ್ಗೆ ಶ್ವೇತಾ ಶ್ರೀವಾತ್ಸವ್ ಕೂಡ ಮಾಹಿತಿ ನೀಡಿಲ್ಲ.

  English summary
  Shwetha Srivatsav got a huge amount for her next women oriented movie. Young team of movie makers gave 40 lakhs to Shwetha Srivatsav.
  Thursday, February 24, 2022, 9:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X