ಬೆಳ್ಳುಳ್ಳಿ ಕಬಾಬ್ ಚಂದ್ರು ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಯಾವುದು ಆ ಸಿನಿಮಾ?

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದವರೆಲ್ಲ ಸ್ಟಾರ್ ಆಗುತ್ತಿದ್ದಾರೆ. ಸಿನಿಮಾ ರಂಗ ಇವರನ್ನು ಕೈ ಬೀಸಿ ಕರೆಯುತ್ತಿದೆ. ಕೆಲವರು ಈಗಾಗಲೇ ಕೆಲವು ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಈಗ ಯೂಟ್ಯೂಬ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರೋ ಬೆಳ್ಳುಳ್ಳಿ ಕಬಾಬ್ ಚಂದ್ರು ಸರದಿ.

ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಫೇಮಸ್ ಆಗುವುದಕ್ಕೂ ಮುನ್ನ ನಾನ್ ಹೋಟೆಲ್‌ನ ಮಾಲೀಕರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೂ ಮುನ್ನವೇ ಚಂದ್ರುಗೆ ಸಿನಿಮಾರಂಗದ ನಂಟು ಇತ್ತು. ಆದರೆ, ನಟನೆ ಕಡೆಗೆ ಎಂದೂ ಮುಖ ಮಾಡಿರಲಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಂತೆ ಮೊಟ್ಟ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Social media star Bellulli Kabab Chandru acting in Legend Director movie

ಹೌದು, ಇದೇ ಮೊದಲ ಬಾರಿಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಬಣ್ಣ ಹಚ್ಚುತ್ತಿದ್ದಾರಂತೆ. ಸಿನಿಮಾ ಮೇಲೆ ಆಸಕ್ತಿ ಇಟ್ಟುಕೊಂಡಿರೋ ಯುವಕ ತಂಡ ಕೈಗೆತ್ತಿಕೊಂಡಿರೋ ಪ್ರಾಜೆಕ್ಟ್‌ನಲ್ಲಿ ಚಂದ್ರು ಅವರಿಗೆ ನಟಿಸುವಂತೆ ಆಹ್ವಾನ ನೀಡಲಾಗಿತ್ತಂತೆ. ಅದಕ್ಕೆ ಬೆಳ್ಳುಳ್ಳಿ ಕಬಾಬ್ ಚಂದ್ರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ನವಿಲುಗರಿ ನವೀನ್ ಅನ್ನುವವರು ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಂದ್ಹಾಗೆ ಈ ಸಿನಿಮಾದ ಹೆಸರು 'ಲೆಜೆಂಡ್ ಡೈರೆಕ್ಟರ್'. ಇದೇ ಸಿನಿಮಾದಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಸಿನಿಮಾ ಮಾಡುತ್ತಿದ್ದಾರೆ ಅಂತ ಯೂಟ್ಯೂಬ್ ಚಾನೆಲ್‌ಗಳು ಸುದ್ದಿ ಮಾಡಿವೆ. ಅಲ್ಲದೆ ಕೆಲವು ಫೋಟೊಗಳನ್ನು ರಿವೀಲ್ ಮಾಡಿವೆ.

Social media star Bellulli Kabab Chandru acting in Legend Director movie

ಆದರೆ, ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸಿನಿಮಾ ತಂಡ ಆಗಲಿ, ಬೆಳ್ಳುಳ್ಳಿ ಕಬಾಬ್ ಚಂದ್ರು ಆಗಲಿ ಇದೂವರೆಗೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಅನ್ನೋದು ಇನ್ನಷ್ಟೆ ಬೆಳಕಿಗೆ ಬರಬೇಕಿದೆ.

ಇನ್ನು ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಫೇಮಸ್ ಆಗುವುದಕ್ಕೂ ಮುನ್ನವೇ ಇವರಿಗೆ ಸಿನಿಮಾರಂಗದ ನಂಟಿದೆ. ನಾನ್ ವೆಜ್ ಹೋಟೆಲ್ ಆರಂಭಿಸುವುದಕ್ಕೂ ಮುನ್ನ ಚಂದ್ರು ಸಿನಿಮಾರಂಗದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಹಿರಿಯ ನಟಿ ಮಾಲಾಶ್ರೀಯವರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಸುಮಾರು 72 ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿದ್ದರು ಎಂದು ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮಾಲಾಶ್ರೀ ಅನಾರೋಗ್ಯ ಸಂಬಂಧ ಜಿಂದಾಲ್‌ಗೆ ಸೇರಿಕೊಂಡಿದ್ದರು. ಆಗ ಚಂದ್ರು ಬೀದಿ ಬದಿಯ ಗಾಡಿಯಲ್ಲಿ ಅಡುಗೆ ಮಾಡುಗೆ ಮಾಡುವುದಕ್ಕೆ ನಿರ್ಧರಿಸಿದ್ದರು. ಅಲ್ಲಿಂದ ಅಡಿಗೆ ಕೈ ಹಿಡಿಯಲಾರಂಭಿಸಿತ್ತು. ಅಲ್ಲಿಂದ ಹೋಟೆಲ್ ಮಾಡಿ ಅಡುಗೆ ಮಾಡುವುದಕ್ಕೆ ಆರಂಭಿಸಿದ್ದರು. ಅಂಬರೀಶ್, ಪುನೀತ್ ರಾಜ್‌ಕುಮಾರ್‌ರಿಂದ ದಿಗ್ಗಜರೆಲ್ಲರು ಇವರ ಕೈ ರುಚಿಗೆ ಫ್ಯಾನ್ ಆಗಿದ್ದವರು. ಈಗ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುತ್ತಿದ್ದಂತೆ ನಟನೆಗೂ ಕಾಲಿಟ್ಟಿದ್ದಾರೆ.

More from Filmibeat

English summary
Bellulli Kabab Chandru in Legend Director movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X