ಅಲ್ಲು ಅರ್ಜುನ್ ಜೊತೆ ಕುಣಿಯೋದು ಸಮಂತಾ ಅಲ್ಲ ಶ್ರೀಲೀಲಾ: ಊ ಅಂತಿರಾ.. ಊಹೂಂ ಅಂತಿರಾ?

'ಪುಷ್ಪ' ಸಿನಿಮಾದಿಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದರು. ಅಲ್ಲು ಅರ್ಜುನ್ ಲುಕ್, ಗೆಟಪ್, ಮ್ಯಾನರಿಸಂ, ಸ್ಟೈಲ್ ಎಲ್ಲವೂ 'ಪುಷ್ಪ' ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಇದರೊಂದಿಗೆ ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಅಷ್ಟೇ ಸದ್ದು ಮಾಡಿತ್ತು.

ಅದೇ ಮೊದಲ ಬಾರಿಗೆ ಸಮಂತಾ ಐಟಂ ಸಾಂಗ್‌ ಒಂದಕ್ಕೆ ಹೆಜ್ಜೆ ಹಾಕಿದ್ದರು. ಆಗತಾನೇ ನಾಗಚೈತನ್ಯರಿಂದ ದೂರ ಆಗಿದ್ದ ನಟಿ ಇಂತಹದ್ದೊಂದು ಬೋಲ್ಡ್ ಸ್ಟೆಪ್ ತೆಗೆದುಕೊಂಡಿದ್ದರು. ಊ ಅಂಟಾವಾ.. ಊಹೂಂ ಅಂಟಾವಾ ಅಂತ ಹೆಜ್ಜೆ ಹಾಕಿದ ಸ್ಯಾಮ್‌ಗೆ ಥಿಯೇಟರ್‌ ರೂಫ್ ಕಿತ್ತೋಗೋ ಹಾಗೇ ಶಿಳ್ಳೆಗಳು ಬಿದ್ದಿದ್ದವು.

Pushpa 2-Samantha- Sreeleela

ಸಮಂತಾ ಡ್ಯಾನ್ಸ್‌ಗೆ ಹುಡುಗರಂತೂ ಕುಣಿದು ಕುಪ್ಪಳಿಸಿದ್ದರು. ಚಿತ್ರಮಂದಿರದಲ್ಲಿ ಒನ್ಸ್ ಮೋರ್ ಅಂತ ಕೂಗಿದ ಉದಾಹರಣೆಗಳೂ ಕೂಡ ಇವೆ. ಈಗ 'ಪುಷ್ಪ 2'ನಲ್ಲೂ ಸಮಂತಾ ಹೆಜ್ಜೆ ಹಾಕಬಹುದು ಅನ್ನೋದ ನಿರೀಕ್ಷೆಯಿತ್ತು. ಆದರೆ, ಆ ಜಾಗಕ್ಕೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದೆ. ಅಸಲಿಗೆ ಸಮಂತಾನಾ ಇಲ್ಲ ಶ್ರೀಲೀಲಾನಾ? ಏನಿದು ಮ್ಯಾಟರ್ ತಿಳಿಯಲು ಮುಂದೆ ಓದಿ..

'ಪುಷ್ಪ' ಐಟಂ ಸಾಂಗ್ ಕಿಕ್

'ಪುಷ್ಪ' ಸಿನಿಮಾ ಗೆಲ್ಲುವುದಕ್ಕೆ ಸಮಂತಾ ನಟಿಸಿದ "ಊ ಅಂಟಾವಾ.. ಊಹೂಂ ಅಂಟಾವಾ" ಸಾಂಗ್ ಕೂಡ ಪ್ರಮುಖ ಕಾರಣವಾಗಿತ್ತು. 2021 ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಹಿಂದಿ ಬೆಲ್ಟ್‌ನಲ್ಲಿ ಸುಮಾರು 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಅಚ್ಚರಿ ಮೂಡಿಸಿತ್ತು. ಹೀಗಾಗಿ 'ಪುಷ್ಪ 2'ನಲ್ಲೂ ಇಂತಹದ್ದೇ ಒಂದು ಐಟಂ ಸಾಂಗ್ ಇಡುವ ಬಗ್ಗೆ ಚಿತ್ರತಂಡ ಆಲೋಚನೆ ಮಾಡಿದ್ಯಂತೆ.

Pushpa 2-Samantha- Sreeleela

'ಪುಷ್ಪ 2'ನಲ್ಲಿ ಹಾಡುಗಳಿಗೆ ಹೆಚ್ಚು ಒತ್ತು

'ಪುಷ್ಪ'ಗೆ ಹಾಡುಗಳು ಪ್ರಮುಖ ಪಾತ್ರವಹಿಸಿದ್ದವು. ಈ ಕಾರಣಕ್ಕೆ ನಿರ್ದೇಶಕ ಸುಕುಮಾರ್ 'ಪುಷ್ಪ 2'ನಲ್ಲೂ ಹಾಡುಗಳಿಗೆ ಹೆಚ್ಚು ಗಮನ ಕೊಡುತ್ತಿದ್ದಾರಂತೆ. ಅದರಲ್ಲೂ 'ಪುಷ್ಪ'ಗಿಂತ ದೊಡ್ಡ ಮಟ್ಟದಲ್ಲಿ ಗೆಲ್ಲಿಸಬೇಕು ಅಂತ ಪಣ ತೊಟ್ಟಿರೋ ತಂಡ ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿ ಊ ಅಂಟಾವಾದಂತೆಯೇ ಐಟಂ ಸಾಂಗ್ ಕೂಡ ಇರುತ್ತೆ ಅನ್ನೋ ಸುದ್ದಿ ಓಡಾಡುತ್ತಿದೆ.

ಸಮಂತಾ ಅಲ್ಲ ಶ್ರೀಲೀಲಾ

ಈಗಾಗಲೇ ಸಮಂತಾ "ಊ ಅಂಟಾವ ಮಾವ.." ಅಂತ ಸದ್ದು ಮಾಡಿದ್ದಾರೆ. ಮತ್ತೆ ಇವರಿಂದಲೇ ಹೆಜ್ಜೆ ಹಾಕಿಸೋದು ಕಷ್ಟ ಆಗಬಹುದು ಅಂತ ಚಿತ್ರತಂಡಕ್ಕೆ ಅನಿಸಿರಬಹುದು. ಅಲ್ಲದೆ ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅಪ್ರೋಚ್ ಮಾಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಚಿತ್ರತಂಡ ಶ್ರೀಲೀಲಾರನ್ನು ಅಪ್ರೋಚ್ ಮಾಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಶ್ರೀಲೀಲಾನೇ ಯಾಕೆ?

ಶ್ರೀಲೀಲಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿದ್ದು, ಈಕೆ ಕೈಯಲ್ಲಿ ಸುಮಾರು 10ಕ್ಕೂ ಅಧಿಕ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ಡ್ಯಾನ್ಸ್ ಮೂವ್ಸ್ ಬಗ್ಗೆನೂ ಟಾಲಿವುಡ್ ಮಂದಿ ಫಿದಾ ಆಗಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್ ಹಾಗೂ ಶ್ರೀಲೀಲಾ ಇಬ್ಬರೂ ಜೊತೆಗೆ ಹೆಜ್ಜೆ ಹಾಕಿದರೆ, ಹಾಡು ಸೂಪರ್‌ ಹಿಟ್ ಆಗುತ್ತೆ ಅನ್ನೋದು ನಂಬಿಕೆ ಚಿತ್ರತಂಡದ್ದು ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

More from Filmibeat

English summary
Sreeleela replacing Samantha in Allu Arjun Starrer Pushpa 2 Song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X