Rajini-Himalaya: 'ಜೈಲರ್'ಗೆ ಅದ್ಭುತ ಪ್ರತಿಕ್ರಿಯೆ.. ದಿಢೀರನೇ ಹಿಮಾಲಯಕ್ಕೆ ಹೊರಟ ರಜನಿ?
ಸೂಪರ್‌ಸ್ಟಾರ್ ರಜನಿಕಾಂತ್ ತನ್ನ ಸಿನಿಮಾ ರಿಲೀಸ್ ವೇಳೆ ಊರಲ್ಲೇ ಇರೋದಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಪದ್ಧತಿ. ಸಿನಿಮಾಗೆ ಬೇಕಾಗಿರೋ ಪ್ರಚಾರವನ್ನೆಲ್ಲ ಮುಗಿಸಿ ಹಿಮಾಲಯದ ಕಡೆಗೆ ಹೊರಟು ಬಿಡುತ್ತಿದ್ದರು. ಆದ್ರೀಗ ಇತ್ತೀಚೆಗೆ ಸಿನಿಮಾ ರಿಲೀಸ್ ಆದ ವೇಳೆ ಹಿಮಾಲಯಕ್ಕೆ ಹೋಗುವುದನ್ನು ನಿಲ್ಲಿಸಿದ್ದರು.
ರಜನಿಕಾಂತ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಜೈಲರ್' ಬಿಡುಗಡೆಯ ಕೊನೆಯ ಹಂತದಲ್ಲಿದೆ. ಇನ್ನೇನು ಎರಡು ದಿನಗಳಲ್ಲಿ 'ಜೈಲರ್' ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಬೆನ್ನಲ್ಲೇ ರಜನಿಕಾಂತ್ ಹಿಮಾಲಯದ ಕಡೆಗೆ ಪಯಣ ಬೆಳೆಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಈ ಸಿನಿಮಾ ಗೆಲ್ಲಲೇ ಬೇಕಿದೆ. ಅತ್ತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‌ಗೂ 'ಜೈಲರ್' ಗೆಲುವು ಅನಿವಾರ್ಯ. ಹೀಗಾಗಿ ಇಡೀ ದೇಶವೇ 'ಜೈಲರ್' ಕಥೆ ಏನಾಗಬಹುದು ಎಂದು ಎದುರು ನೋಡುತ್ತಿದೆ. ಈ ಮಧ್ಯೆ ರಜನಿ ಹಿಮಾಲಯಕ್ಕೆ ಹೊರಟಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಅದಕ್ಕೆ ಬಲವಾದ ಕಾರಣ ಇಲ್ಲಿದೆ.
ರಜನಿ-ದಿಲೀಪ್ ಕುಮಾರ್ ಕಾಂಬೋ
'ಬೀಸ್ಟ್' ಸಿನಿಮಾದ ಸೋಲಿನ ಬಳಿಕ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‌ಗೆ ತೀವ್ರ ಹಿನ್ನೆಡೆಯಾಗಿತ್ತು. ಅದೇ ಇನ್ನೊಂದು ಕಡೆ ರಜನಿ ನಟಿಸಿದ 'ದರ್ಬಾರ್' ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಹಾಗೇ 'ಅಣ್ಣಾತ್ತೆ' ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ರಜನಿ ವರ್ಚಸ್ಸಿನಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಹೀಗಾಗಿ ಇಬ್ಬರಿಗೂ ಈ ಸಿನಿಮಾ ಗೆಲ್ಲಲೇ ಬೇಕಾಗಿ ಅನಿವಾರ್ಯತೆಯಿದೆ. ಅದಕ್ಕೆ 'ಜೈಲರ್' ಸಿನಿಮಾ ರಿಲೀಸ್‌ಗಾಗಿ ಇಡೀ ವಿಶ್ವದಲ್ಲಿರುವ ರಜನಿ ಅಭಿಮಾನಿಗಳೇ ಎದುರು ನೋಡುತ್ತಿದ್ದಾರೆ.

'ಜೈಲರ್' ಸಿನಿಮಾ ಹೆಚ್ಚಿದ ಕ್ರೇಜ್
ಸೂಪರ್‌ಸ್ಟಾರ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್ ಸಿನಿಮಾ 'ಜೈಲರ್'ಗೆ ಕ್ರೇಜ್ ಇದೆ. ವಿದೇಶದಲ್ಲಂತೂ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಆಗಿದೆ. ಇತ್ತ ಭಾರತದಲ್ಲೂ 'ಜೈಲರ್' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅಡ್ವಾನ್ಸ್ ಬುಕಿಂಗ್ ಅತ್ಯುತ್ತಮವಾಗಿದೆ ಎಂಬ ವರದಿಗಳು ಬರುತ್ತಿವೆ. ಅಮೆರಿಕದಲ್ಲಿ ಮೂರು ವಾರ ಸಿನಿಮಾ ಹೌಸ್‌ಫುಲ್ ಆಗಿವೆ ಎಂದು ಹೇಳಲಾಗುತ್ತಿದೆ.
ಹಿಮಾಲಯಕ್ಕೆ ಹೊರಟ ರಜನಿ?
'ಜೈಲರ್' ಸಿನಿಮಾ ಬಿಡುಗಡೆಗೂ ಮುನ್ನ ರಜನಿಕಾಂತ್ ಹಿಮಾಲಯಕ್ಕೆ ಹೊರಡುತ್ತಿದ್ದಾರೆಂದು ವರದಿಯಾಗಿದೆ. ನಾಳೆ (ಆಗಸ್ಟ್ 8) ರಜನಿ ಹಿಮಾಲಯಕ್ಕೆ ತೆರಳುತ್ತಿರೋದಾಗಿ ವರದಿಯಾಗಿವೆ. ಅದಕ್ಕೆ ಅಭಿಮಾನಿಗಳು ಕುಣಿಸು ಕುಪ್ಪಳಿಸಿದ್ದಾರೆ. ಯಾಕಂದ್ರೆ, ರಜನಿ ಹಿಮಾಲಯಕ್ಕೆ ಹೋಗಿ ಬಂದ ಸಿನಿಮಾಗಳೆಲ್ಲಾ ಮೆಗಾ ಹಿಟ್ ಆಗಿವೆ. ಹೀಗಾಗಿ 'ಜೈಲರ್' ಗೆಲುವು ಖಚಿತ ಅಂತ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ.
ರಜನಿ Vs ದಳಪತಿ ವಿಜಯ್
ಕಾಲಿವುಡ್‌ನಲ್ಲಿ ರಜನಿಕಾಂತ್ ಹಾಗೂ ದಳಪತಿ ವಿಜಯ್ ಮಧ್ಯೆ ಟೈಟಲ್‌ಗಾಗಿ ಯುದ್ಧ ನಡೆಯುತ್ತಿದೆ. ರಜನಿಕಾಂತ್ ಬಳಿ ಇರುವ ಸೂಪರ್‌ಸ್ಟಾರ್ ಟೈಟಲ್ ಮೇಲೆ ವಿಜಯ್ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ಇದಕ್ಕೆ ರಜನಿ ಕಾಗೆ ಹಾಗೂ ಹದ್ದು ಕಥೆ ಹೇಳಿ ಟಾಂಗ್ ಕೊಟ್ಟಿದ್ದರು. ಇಲ್ಲಿಂದ ರಜನಿ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆ. 'ಜೈಲರ್' ಯಶಸ್ಸಿನ ಮೇಲೆ ಈ ಫ್ಯಾನ್ಸ್ ವಾರ್ ತೀವ್ರತೆಯನ್ನು ಪಡೆದುಕೊಳ್ಳಲಿದೆ.


Click it and Unblock the Notifications











