ಮಗಳ ಸಿನಿಮಾಗೇ 25 ಕೋಟಿ ಸಂಭಾವನೆ ಕೇಳಿದ್ರಾ ರಜನಿಕಾಂತ್? ಯಾವುದು ಆ ಸಿನಿಮಾ?

ಸೂಪರ್‌ಸ್ಟಾರ್ ರಜನಿಕಾಂತ್ ಸಂಭಾವನೆ ಬಗ್ಗೆ ಆಗಾಗ ಗಾಳಿಸುದ್ದಿಗಳು ಓಡಾಡುತ್ತಲೇ ಇರುತ್ತೆ. ಈ ವಯಸ್ಸಿನಲ್ಲೂ ರಜನಿಕಾಂತ್ ಬೇಡಿಕೆಯ ನಟ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಜನಿಕಾಂತ್ ಪ್ರತಿ ಸಿನಿಮಾನೂ ಸದ್ದು ಮಾಡುತ್ತೆ.

ರಜನಿಕಾಂತ್ ಪ್ರತಿ ಸಿನಿಮಾಗೂ ಸಂಭಾವನೆ ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ. ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಾಗಲೆಲ್ಲಾ ಸೂಪರ್‌ಸ್ಟಾರ್ ಪಡೆದ ಸಂಭಾವನೆ ಚರ್ಚೆಗೆ ಬರುತ್ತೆ. ಆದ್ರೀಗ ರಜನಿ ತಮ್ಮ ಮಗಳೇ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಮಗಳಿಗೆ ರಜನಿಕಾಂತ್ ಬೆಂಬಲ

ಮಗಳಿಗೆ ರಜನಿಕಾಂತ್ ಬೆಂಬಲ

ಸೂಪರ್‌ಸ್ಟಾರ್ ರಜನಿಕಾಂತ್ ಯಾವಾಗಲೂ ತಮ್ಮ ಮಕ್ಕಳ ಬೆಂಬಲಕ್ಕೆ ನಿಲ್ಲುತ್ತಾರೆ. ಅವರ ಸಿನಿ ಕರಿಯರ್‌ಗೆ ಸಪೋರ್ಟ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಸೌಂದರ್ಯ ರಜನಿಕಾಂತ್ ನಿರ್ದೇಶನಕ್ಕೆ ಇಳಿದಾಗಲೂ ರಜನಿ ಆ ಸಿನಿಮಾದಲ್ಲಿ ನಟಿಸುವುದಕ್ಕೆ ಮುಂದಾಗಿದ್ದರು. ಈಗ ಐಶ್ವರ್ಯಾ ರಜನಿಕಾಂತ್ ಡೈರೆಕ್ಷನ್‌ಗೆ ಮುಂದಾಗುತ್ತಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಲಾಲ್ ಸಲಾಮ್' ಸಿನಿಮಾದಲ್ಲೂ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅದಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನೂ ಕೇಳಿದ್ದಾರಂತೆ.

'ಲಾಲ್ ಸಲಾಮ್‌'ಗೆ ರಜನಿ ಸಂಭಾವನೆ ಎಷ್ಟು?

'ಲಾಲ್ ಸಲಾಮ್‌'ಗೆ ರಜನಿ ಸಂಭಾವನೆ ಎಷ್ಟು?

ರಜನಿಕಾಂತ್ 'ಲಾಲ್‌ ಸಲಾಮ್' ಸಿನಿಮಾದಲ್ಲಿ ಅಥಿತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸುಮಾರು 7 ದಿನಗಳ ಕಾಲ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಸಿನಿಮಾದಲ್ಲಿ ನಟಿಸುವುದಕ್ಕೆ ರಜನಿ ಬರೋಬ್ಬರಿ 25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಇಂತಹದ್ದೊಂದು ಸುದ್ದಿ ಕಾಲಿವುಡ್‌ನಲ್ಲಿ ಜೋರಾಗಿಯೇ ಓಡಾಡುತ್ತಿದೆ. ಆದರೆ, ಅಧಿಕೃತವಾಗಿ ಚಿತ್ರತಂಡ ಈ ಬಗ್ಗೆ ಎಲ್ಲೂ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಲೈಕಾ ಪ್ರೊಡಕ್ಷನ್ ನಿರ್ಮಾಣ

ಲೈಕಾ ಪ್ರೊಡಕ್ಷನ್ ನಿರ್ಮಾಣ

ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ 'ಲಾಲ್ ಸಲಾಮ್' ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ರಜನಿಕಾಂತ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಬೆಸ್ಟ್ ಟೆಕ್ನಿಷಿಯಲ್ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರಂತೆ.

'ಜೈಲರ್‌'ಗೆ ದುಬಾರಿ ಸಂಭಾವನೆ

'ಜೈಲರ್‌'ಗೆ ದುಬಾರಿ ಸಂಭಾವನೆ

ರಜನಿಕಾಂತ್ 'ಜೈಲರ್' ಸಿನಿಮಾಗೂ ದುಬಾರಿ ಸಂಭಾವನೆ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ರಜನಿಕಾಂತ್ ಬರೋಬ್ಬರಿ 140 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರಂತೆ. ಇದೇ ಸಿನಿಮಾದಲ್ಲಿ ರಜನಿಕಾಂತ್ ಜೊತೆ ತಮನ್ನಾ ಹೀರೊಯಿನ್ ಆಗಿ ನಟಿಸುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ.

More from Filmibeat

English summary
Superstar Rajinikanth Taking 25 Crores For 7 Days For Daughter Directional Movie Lal Salaam, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X