ರಶ್ಮಿಕಾ-ವಿಜಯ್ ದೇವರಕೊಂಡ ರಹಸ್ಯ ನಿಶ್ಚಿತಾರ್ಥ? ಶೀಘ್ರದಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್?

ರಶ್ಮಿಕಾ ಮಂದಣ್ಣ ಟಾಲಿವುಡ್‌ಗೆ ಕಾಲಿಟ್ಟ ದಿನದಿಂದ ವಿಜಯ್ ದೇವರಕೊಂಡ ಜೊತೆ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇತ್ತು. 'ಗೀತಾ ಗೋವಿಂದಂ' ಸಿನಿಮಾ ಇಬ್ಬರ ವೃತ್ತಿ ಬದುಕಿಗೆ ಏಳಿಗೆ ಕೊಟ್ಟಿದ್ದಷ್ಟೇ ಅಲ್ಲ. ಅವರ ವೈಯಕ್ತಿಕ ಬದುಕಲ್ಲೂ ಬೆಳಕು ಮೂಡಿಸಿತ್ತು. ಹೀಗೆ ಕಳೆದ ಕೆಲವು ವರ್ಷಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗುತ್ತಲೇ ಇತ್ತು. ಆದರೆ, ಈ ಜೋಡಿ ಮಾತ್ರ ತಮ್ಮ ಲವ್ ಸ್ಟೋರಿ ಬಗ್ಗೆ ಇಂದಿಗೂ ಓಪನ್ ಆಗಿ ಮಾತಾಡಲೇ ಇಲ್ಲ.

ರಕ್ಷಿತ್ ಶೆಟ್ಟಿ ಜೊತೆ ನಿಶ್ವಿತಾರ್ಥ ಮುರಿದುಕೊಂಡ ಬಳಿಕ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ಮೂರು ಭಾಷೆಯ ಸಿನಿಮಾಗಳೊಂದು ಸುದ್ದಿಯಾಗುತ್ತಿದ್ದರು. ಇಲ್ಲವೇ ವಿಜಯ್ ದೇವರಕೊಂಡ ಜೊತೆ ಆಗಾಗ ಕಾಣಿಸಿಕೊಂಡು ಗಾಸಿಪ್ ಕಾಲಂಗಳಲ್ಲಿ ಸದ್ದು ಮಾಡುತ್ತಿದ್ದರು. ಇಲ್ಲಿವರೆಗೂ ಸ್ನೇಹಿತರು ಎಂದುಕೊಂಡೇ ಈ ಜೋಡಿ ಮುಂದೆ ನಡೆಯುತ್ತಿದೆ.

Telugu actor Vijay Deverakonda and Rashmika Mandanna Secret Engagement Rumors Spark Buzz Online

ಹೀಗಾಗಿ ಟಾಲಿವುಡ್‌ ಅಂಗಳದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ನಿಶ್ಚಿತಾರ್ಥದ ಬಗ್ಗೆ ಸುದ್ದಿಯೊಂದು ಹಬ್ಬಿದೆ. ಈ ಯುವ ಜೋಡಿ ಇಲ್ಲಿವರೆಗೂ ತಮ್ಮೊಂದಿಗೆ ಸುತ್ತಾಡುತ್ತಿದ್ದ ಗಾಳಿ ಸುದ್ದಿಗಳು ಶಾಶ್ವತವಾಗಿ ತೆರೆ ಎಳೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಸಲಿಗೆ ಇವರ ಎಂಗೇಜ್‌ಮೆಂಟ್ ಸ್ಟೋರಿ ಏನು ಅನ್ನೋದನ್ನು ನೋಡುವುದಾರೇ,

ಹಲವು ವರ್ಷಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿರೋ ಸುದ್ದಿ ಸದ್ದು ಮಾಡುತ್ತಲೇ ಇತ್ತು. ವಿಶೇಷ ಸಂದರ್ಭದಲ್ಲಿ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದ ಪೋಸ್ಟ್‌ಗಳು ಅವರ ಅಭಿಮಾನಿಗಳೇ ಡಿಕೋಡ್ ಮಾಡಿ ಪೋಸ್ಟ್ ಮಾಡುತ್ತಿದ್ದರು. ಇದ್ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ಓಡಾಡುತ್ತಿದ್ದ ಜೋಡಿ ಈಗ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಶೀಘ್ರದಲ್ಲಿಯೇ ಮದುವೆ ಆಗುತ್ತಾರೆಂಬ ಸುದ್ದಿ ಹರಿದಾಡುತ್ತಿದೆ.

ಟಾಲಿವುಡ್‌ನಲ್ಲಿ ಓಡಾಡುತ್ತಿರುವ ಸುದ್ದಿಯ ಪ್ರಕಾರ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿಶ್ಛಿತಾರ್ಥವನ್ನು ತೀರಾ ಗೌಪ್ಯವಾಗಿ ಮಾಡಿಕೊಳ್ಳಲಾಗಿದೆ. ಖಾಸಗಿ ಸಮಾರಂಭದಲ್ಲಿ ಕೇವಲ ಉದ್ಯಮದ ಗೆಳೆಯರು, ಸ್ನೇಹಿತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ. ದಸರಾ ಹಬ್ಬದ ಈ ವಿಶೇಷ ದಿನದಂದು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

Telugu actor Vijay Deverakonda and Rashmika Mandanna Secret Engagement Rumors Spark Buzz Online

ರಶ್ಮಿಕಾ ಮಂದಣ್ಣ ವೃತ್ತಿ ಜೀವನ ಉತ್ತಮವಾಗಿ ಮುನ್ನಡೆಯುತ್ತಿದೆ. ಬ್ಯಾಕ್ ಟು ಬ್ಯಾಕ್ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾಗಳನ್ನು ಕೊಟ್ಟು ಮಿಂಚುತ್ತಿದ್ದಾರೆ. ಹೀಗಾಗಿ ಸ್ವಲ್ಪ ತಡವಾಗಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುವುದಕ್ಕೆ ಇಬ್ಬರು ನಿರ್ಧರಿಸಿದ್ದರು. ಆದರೆ, ವಿಜಯ್ ದೇವರಕೊಂಡ ವಯಸ್ಸು 35 ದಾಟುತ್ತಿದ್ದರಿಂದ ಈ ಜೋಡಿ ಈಗ ದಾಂಪತ್ಯಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ. ತೆಲುಗು ಮಾಧ್ಯಮಗಳಲ್ಲಿ ಇಬ್ಬರಿಬ್ಬರ ನಿಶ್ಚಿತಾರ್ಥದ ಸುದ್ದಿಯೇ ಸಿಕ್ಕಾಪಟ್ಟೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ರಶ್ಮಿಕಾ ಕೈಯಲ್ಲಿ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ಇವೆ. 'ಥಮ್ಮಾ', 'ದಿ ಗರ್ಲ್‌ಫ್ರೆಂಡ್', 'ಕಾಕ್‌ಟೈಲ್ 2' ಹಾಗೂ ಅಲ್ಲು ಅರ್ಜುನ್ ಸಿನಿಮಾಗಳು ಕೈಯಲ್ಲಿವೆ. ಇನ್ನು ವಿಜಯ್ ದೇವರಕೊಂಡ ಜೊತೆನೂ ರಶ್ಮಿಕಾ ಸಿನಿಮಾ ಮಾಡುತ್ತಿರೋ ಬಗ್ಗೆ ಸುದ್ದಿಯಾಗಿತ್ತು. ಬಹುಶ: ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆಯಿದೆ.

More from Filmibeat

English summary
Buzz: Tollywood’s most loved pair Vijay Deverakonda and Rashmika Mandanna have secretly engaged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X