'ಮಿರಾಯ್'ಗೆ ಹೀರೋ ಆಗ್ಬೇಕಿತ್ತು ನಾನಿ? ಟಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿರೋ ಸಿನಿಮಾ ಬಿಟ್ಟು ತಪ್ಪು ಮಾಡಿದರೇ?
'ಹನುಮಾನ್' ಹೀರೋ ಅದೃಷ್ಟವೋ ಅದೃಷ್ಟ. ಇಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮತ್ತೊಂದು ಬ್ಲಾಕ್‌ಬಸ್ಟರ್ ನೀಡಿ ಫಿಲ್ಮ್ ಮೇಕರ್ಸ್ ಹುಬ್ಬೇರಿಸಿದ್ದಾರೆ. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ 'ಮಿರಾಯ್' ತೆಲುಗು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ನಾಲ್ಕು ದಿನಗಳಲ್ಲೇ ₹100 ಕೋಟಿ ಹತ್ತಿರ ಸಮೀಪದಲ್ಲಿದೆ. ತೇಜ ಸಜ್ಜಾ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.
'ಮಿರಾಯ್' ಒಂದು ಸೈನ್ಸ್ ಫಿಕ್ಷನ್ ಸಿನಿಮಾ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ತೆಲುಗು ಹಾಗೂ ಹಿಂದಿಯಲ್ಲಿ 'ಮಿರಾಯ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿರುವ ಈ ಸಿನಿಮಾ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಇನ್ನೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಅದೇನು ಅಂದರೆ, 'ಮಿರಾಯ್' ಸಿನಿಮಾದ ಕಥೆಯನ್ನು ಮೊದಲು ನ್ಯಾಚುರಲ್ ಸ್ಟಾರ್ ನಾನಿಗೆ ಹೇಳಿದ್ದರಂತೆ. ಆದರೆ, ಆ ಸಿನಿಮಾವನ್ನು ನಾನಿ ರಿಜೆಕ್ಟ್ ಮಾಡಿದ್ದರು ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ 'ಮಿರಾಯ್' ಒಪ್ಪದೇ ಇರುವುದಕ್ಕೆ ನಾನಿ ಕೊಟ್ಟಿರುವ ಕಾರಣಗಳೇನು? ಗುಲ್ಲೆದ್ದಿರೋ ಸುದ್ದಿಯೇನು? ಬ್ಲಾಕ್ ಬಸ್ಟರ್ ಸಿನಿಮಾವನ್ನು ಮಿಸ್ ಮಾಡಿಕೊಂಡರೇ ನಾನಿ?
ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ 'ಮಿರಾಯ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ಸುಮಾರು ₹40 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದು, ಬಿಡುಗಡೆಯಾದ ನಾಲ್ಕೇ ದಿನಕ್ಕೆ ಅಸಲು ಬಂದಿದ್ದು, ಲಾಭದ ಕಡೆ ಮುನ್ನುಗ್ಗುತ್ತಿದೆ. ತೆಲುಗು ಅಷ್ಟೇ ಅಲ್ಲದೆ ಹಿಂದಿ ಏರಿಯಾಗಳಲ್ಲೂ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇಂತಹ ಸಿನಿಮಾವನ್ನು ನಾನಿ ಕೈ ಬಿಟ್ಟಿದ್ದೇಕೆ? ಅನ್ನೋದು ಎಲ್ಲರನ್ನೂ ಕಾಡುತ್ತಿದೆ.
ನ್ಯಾಚುರಲ್ ಸ್ಟಾರ್ ನಾನಿ ಸಾಮಾನ್ಯವಾಗಿ ಒಳ್ಳೆಯ ಸ್ಟೋರಿಗಳನ್ನು ಬಿಡುವುದಿಲ್ಲ. ವಿಶಿಷ್ಠ ಕಥೆಗಳು ಬಂದರೆ ನಾನಿ ಹುಡುಕಿ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, 'ಮಿರಾಯ್' ಸಿನಿಮಾವನ್ನು ಯಾಕೆ ಬಿಟ್ಟರು ಎಂಬ ಮಾತುಗಳು ಹರಿದಾಡುತ್ತಿದೆ. ಟಾಲಿವುಡ್‌ನಲ್ಲಿ ಎರಡು ಕಾರಣಗಳನ್ನಿಟ್ಟುಕೊಂಡು ಚರ್ಚೆಯಾಗುತ್ತಿದೆ. ನಾನಿ ಅದಾಗಲೇ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಈ ಕಾರಣಕ್ಕೆ ಸಿನಿಮಾ ಬಿಟ್ಟಿರಬಹುದು. ಇನ್ನೊಂದು ಮಾಸ್, ಆಕ್ಷನ್ ಸ್ಟೋರಿಗಳ ಕಡೆಗೆ ಗಮನ ಹರಿಸಿದ್ದರಿಂದ ಸೈನ್ಸ್ ಫಿಕ್ಷನ್ ಕಥೆಗಳನ್ನು ಒಪ್ಪದೆ ಇರಬಹುದೆಂದು ಹೇಳುತ್ತಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿ ಈ ಸಿನಿಮಾವನ್ನು ಕೈ ಬಿಟ್ಟಿದ್ದರಿಂದ ತೇಜ ಸಜ್ಜಾಗೆ ಈ ಅವಕಾಶ ಸಿಕ್ಕಿತ್ತು. ಅದನ್ನು ಒಪ್ಪಿಕೊಂಡು ತೇಜ ಸಜ್ಜಾ ಗೆದ್ದುಬಿಟ್ಟರು. ನಾನಿ ಇಂತಹ ಸಿನಿಮಾವನ್ನು ಬಿಟ್ಟು ತಪ್ಪು ಮಾಡಿದರು. ಅವರ ಸ್ಟಾರ್‌ಢಮ್‌ಗೆ ಈ ಸಿನಿಮಾ ಇನ್ನೂ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಈ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವುದೇನೋ ನಿಜ. ಈ ಬಗ್ಗೆ ಚಿತ್ರತಂಡ ಆಗಲಿ, ನಾನಿ ಆಗಲಿ ಎಲ್ಲೂ ಹೇಳಿಕೊಂಡಿಲ್ಲ.
'ಮಿರಾಯ್' ಟಾಲಿವುಡ್‌ನಲ್ಲಿ ಈಗಾಗಲೇ ಸೂಪರ್ ಹಿಟ್ ಅಂತ ಸಾಬೀತಾಗಿದೆ. ತೇಜಾ ಸಜ್ಜಾ ಹಾಗೂ ಮಂಚು ಮನೋಜ್‌ಗೆ ಈ ಸಿನಿಮಾ ಸೂಪರ್ ಸಕ್ಸಸ್ ಕೊಟ್ಟಿದೆ. ಬಾಕ್ಸಾಫೀಸ್‌ನಲ್ಲಿ ಕೇವಲ ಮೂರು ದಿನಗಳಿಗೆ ₹70 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ 'ಹನುಮಾನ್' ಬಳಿಕ ತೇಜ ಸಜ್ಜಾಗೆ ಮತ್ತೊಂದು ಸೂಪರ್ ಸಕ್ಸಸ್ ಸಿಕ್ಕಂತಾಗಿದೆ.


Click it and Unblock the Notifications











