Vijay-Trisha: ವಿವಾಹ ವಾರ್ಷಿಕೋತ್ಸವದಂದು ಪತ್ನಿಯನ್ನು ಮರೆತ್ರಾ ವಿಜಯ್? ನಟಿ ತ್ರಿಶಾ ಜೊತೆ ಸ್ವೀಡನ್‌ನಲ್ಲಿ ದಳಪತಿ?

ನಿನ್ನೆ (ಆಗಸ್ಟ್ 25) ತಮಿಳು ಚಿತ್ರರಂಗದ ದಿಗ್ಗಜ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ವಿವಾಹ ವಾರ್ಷಿಕೋತ್ಸವವಿತ್ತು. ಆದರೆ, ವಿಜಯ್ ತಮ್ಮ ಪತ್ನಿಯೊಂದಿಗೆ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿಕೊಂಡಿಲ್ಲ ಅನ್ನೋ ಸುದ್ದಿ ದಟ್ಟವಾಗಿ ಓಡಾಡುತ್ತಿದೆ. ಇದಕ್ಕೆ ಕಾರಣ ತ್ರಿಶಾ ಸ್ವೀಡನ್‌ನಿಂದ ಹಂಚಿಕೊಂಡಿರೋ ಒಂದು ಫೋಟೊ.

ಕಳೆದ ಕೆಲವು ದಿನಗಳಿಂದ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಸೋರ್ನಲಿಂಗಂ ಸಂಬಂಧ ಸರಿಯಾಗಿಲ್ಲ. ಇಬ್ಬರೂ ಒಟ್ಟಿಗೆ ಬೆರೆಯುತ್ತಿಲ್ಲ ಅನ್ನೋ ಸುದ್ದಿಗಳು ಓಡಾಡಿದ್ದವು. ಅಲ್ಲದೆ ದಳಪತಿ ವಿಜಯ್ ಬೇರೊಬ್ಬ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.

thalapathy-vijay-trisha-sweden

ದಳಪತಿ ವಿಜಯ್ ಹಾಗೂ ಸಂಗೀತಾ 1999, ಆಗಸ್ಟ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಸಂಜಯ್ ಹಾಗೂ ದಿವ್ಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಇವರು ವಿದೇಶದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹೀಗಿರುವಾಗ ವಿಜಯ್ ಹಾಗೂ ತ್ರಿಶಾ ನಡುವೆ ಸಂಥಿಂಗ್ ಸಂಥಿಂಗ್‌ ಎನೋ ನಡೆಯುತ್ತಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ. ಅದಕ್ಕೆ ನೆಟ್ಟಿಗರೇ ಒಂದಿಷ್ಟು ಸಾಕ್ಷಿಗಳನ್ನು ಹುಡುಕಿಕೊಂಡಿದ್ದಾರೆ. ಲೆಟೆಸ್ಟ್ ಆಗಿ ತ್ರಿಶಾ ಹಂಚಿಕೊಂಡಿರೋ ಒಂದು ಫೋಟೊ ಕೂಡ ಸೇರಿಕೊಂಡಿದೆ.

ನಟಿ ತ್ರಿಶಾ ಫೋಟೊ ವೈರಲ್

ನಟಿ ತ್ರಿಶಾ ಹಾಗೂ ವಿಜಯ್ ಇಬ್ಬರೂ ಒಟ್ಟಿಗೆ 'ಲಿಯೋ' ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಈಗಾಗಲೇ ಈ ಸಿನಿಮಾ ಕೂಡ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಜೋರಾಗಿ ನಡೆಯುತ್ತಿದೆ. ಸಿನಿಮಾ ಮುಗಿದ ಬಳಿಕ ತ್ರಿಶಾ ವಿದೇಶ ಪ್ರವಾಸದಲ್ಲಿದ್ದಾರೆ. ಇತ್ತೀಚೆಗೆ ಸ್ವೀಡನ್‌ನಲ್ಲಿರೋ ಫೋಟೊ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಈ ಫೋಟೊ ಶೇರ್ ಆದ ಬಳಿಕ ವಿಜಯ್ ಕೂಡ ತ್ರಿಶಾ ಜೊತೆ ಇದ್ದಾರೆ ಎಂದು ಕಮೆಂಟ್‌ಗಳು ಬರುತ್ತಿವೆ.

thalapathy-vijay-trisha-sweden

ವಿವಾಹ ವಾರ್ಷಿಕೋತ್ಸವ ಮರೆತರೇ ವಿಜಯ್?

ವಿಜಯ್ ಹಾಗೂ ನಟಿ ತ್ರಿಶಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಕಡೆ ಇದೆಲ್ಲಾ ಸುಳ್ಳು ಸುದ್ದಿ ದಳಪತಿ ವಿಜಯ್ ಹಾಗೂ ಸಂಗೀತಾ ಇಬ್ಬರೂ ತಮ್ಮ ಮಕ್ಕಳೊಂದಿಗೆ ವಿದೇಶದಲ್ಲಿರುವ ಬಗ್ಗೆನೂ ವರದಿಯಾಗಿದೆ. ಆದರೆ, ವಿಜಯ್ ಹಾಗೂ ಪತ್ನಿ ಸಂಗೀತಾ ಇಬ್ಬರೂ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಬಗ್ಗೆ ವರದಿಯಾಗಿಲ್ಲ. ಹೀಗಾಗಿ ವಿಜಯ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಮರೆತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೇ ವೇಳೆ ಅಭಿಮಾನಿಗಳೇ ಇಬ್ಬರ ಫೋಟೊ ಶೇರ್ ಮಾಡಿ ಟ್ರೆಂಡ್ ಮಾಡಲು ಮುಂದಾಗಿದ್ದರು. ಆದರೆ, ತ್ರಿಶಾ ಸ್ವೀಡನ್ ಫೋಟೊ ವೈರಲ್ ಆಯ್ತು.

ತ್ರಿಶಾ ಫೋಟೊ ತೆಗೆದಿದ್ದು ವಿಜಯ್

ಸ್ವೀಡನ್‌ನಲ್ಲಿರುವ ಫೋಟೊವನ್ನು ತ್ರಿಶಾ ಶೇರ್ ಮಾಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದರು. ಈ ಫೋಟೊವನ್ನು ದಳಪತಿ ವಿಜಯ್ ತೆಗೆದಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಹೀಗಾಗಿ ಇಬ್ಬರ ಬಗ್ಗೆ ಗಾಳಿ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಸುದ್ದಿಯಲ್ಲಿದ್ದ ಕೀರ್ತಿ ಸುರೇಶ್

ಕೆಲವು ದಿನಗಳ ಹಿಂದೆ ದಳಪತಿ ವಿಜಯ್ ನಟಿ ಕೀರ್ತಿ ಸುರೇಶ್ ಜೊತೆ ರಿಲೇಷನ್‌ಶಿಫ್‌ನಲ್ಲಿದ್ದಾರೆ ಅನ್ನೋ ವದಂತಿಗಳು ಹಬ್ಬಿತ್ತು. ಆದರೆ, ಕೀರ್ತಿ ಸುರೇಶ್ ಅಮ್ಮ ಮಗಳ ಮದುವೆ ಸ್ಪಷ್ಟನೆ ಕೊಟ್ಟ ಬಳಿಕ ಗಾಳಿ ಸುದ್ದಿ ತಣ್ಣಗಾಗಿತ್ತು. ಈಗ ದಳಪತಿ ವಿಜಯ್ ಹೆಸರು ನಟಿ ತ್ರಿಶಾ ಜೊತೆ ತಳುಕು ಹಾಕಿಕೊಂಡಿದೆ. ಅಲ್ಲದೆ 40 ವರ್ಷದ ನಟಿ ತ್ರಿಶಾ ಇನ್ನೂ ಮದುವೆ ಆಗದೆ ಒಂಟಿ ಜೀವನ ನಡೆಸುತ್ತಿದ್ದಾರೆ.

More from Filmibeat

English summary
Thalapathy Vijay is on holiday with Trisha in Sweden
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X