Thalapathy Vijay: ದಳಪತಿ ವಿಜಯ್ ರಹಸ್ಯವಾಗಿ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಭೇಟಿಯಾದ್ರಾ?
ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಒಂದು ಸಿನಿಮಾ ಬಳಿಕ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬೀಸ್ಟ್' ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದು ಕಡೆ 67ನೇ ಸಿನಿಮಾದ ಶೂಟಿಂಗ್ ಬೇರೆ ನಡೀತಿದೆ. ಇಷ್ಟೆಲ್ಲಾ ಬ್ಯುಸಿ ನಡುವೆ ದಳಪತಿ ವಿಜಯ್ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್‌ರನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಮೊದಲಿಂದೂ ದಳಪತಿ ವಿಜಯ್ ರಾಜಕೀಯ ಸೇರ್ಪಡೆ ಬಗ್ಗೆ ಕಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇವರ ಅಸಂಖ್ಯಾತ ಅಭಿಮಾನಿಗಳಲ್ಲಿ ಹಲವರಿಗೆ ವಿಜಯ್ ರಾಜಕೀಯ ಪ್ರವೇಶ ಮಾಡಬೇಕು ಅನ್ನುವ ಆಸೆಯಿದೆ. ಇನ್ನು ಕೆಲವು ಮಂದಿಗೆ ವಿಜಯ್ ರಾಜಕೀಯ ಪ್ರವೇಶ ಮಾಡುವುದು ಇಷ್ಟವಿಲ್ಲ. ಹೀಗಿದ್ದರೂ, ದಳಪತಿ ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಒಂದೇ ಒಂದು ಸುಳಿವು ಕೂಡ ನೀಡಿಲ್ಲ. ಬಹುತೇಕ ರಾಜಕೀಯ ಪ್ರವೇಶವನ್ನು ಅವರು ತಳ್ಳಿ ಹಾಕುತ್ತಲೇ ಬಂದಿದ್ದಾರೆ.
ದಳಪತಿ ವಿಜಯ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿವೆ. ಪ್ರತಿ ಸಿನಿಮಾನೂ ಒಂದೊಂದು ದಾಖಲೆಯನ್ನು ಬರೆಯುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಬಿಟ್ಟರೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಮಿಳು ನಟ ದಳಪತಿ ವಿಜಯ್ ಅಂತಲೇ ಹೇಳಲಾಗುತ್ತಿದೆ. ಯಶಸ್ಸಿನ ತುತ್ತ ತುದಿಯಲ್ಲಿರುವಾಗ ವಿಜಯ್ ರಾಜಕೀಯ ಪ್ರವೇಶ ಮಾಡುತ್ತಾರಾ? ಮೋದಿ, ದೀದಿ ರಾಜಕೀಯ ವಿಶ್ಲೇಷಕರಾಗಿದ್ದ ಪ್ರಶಾಂತ್ ಕಿಶೋರ್‌ರನ್ನು ಭೇಟಿಯಾಗಿದ್ದು ನಿಜನಾ? ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಅಸಲಿ ವಿಷಯವೇನು? ತಿಳಿಯಲು ಮುಂದೆ ಓದಿ.

ಪ್ರಶಾಂತ್ ಕಿಶೋರ್ ಭೇಟಿ ಮಾಡಿದ್ರಾ ಕಿಶೋರ್?
ಕಾಲಿವುಡ್‌ನಲ್ಲಿ ಸೂಪರ್ ಸುದ್ದಿಯೊಂದು ಓಡಾಡುತ್ತಿದೆ. ತಮಿಳಿನ ಸೂಪರ್‌ಸ್ಟಾರ್ ದಳಪತಿ ವಿಜಯ್ ರಹ್ಯಸ್ಯವಾಗಿ ರಾಜಕೀಯ ವಿಶ್ಲೇಷಕರನ್ನು ಭೇಟಿ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಶಾಂತ್ ಕಿಶೋರ್ ಜೊತೆ ರಹ್ಯಸವಾಗಿ ರಾಜಕೀಯ ಎಂಟ್ರಿ ಬಗ್ಗೆ ಚರ್ಚಿಸಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಸೂಪರ್‌ಸ್ಟಾರ್ ಪಟ್ಟದಲ್ಲಿರುವ ವಿಜಯ್ ರಾಜಕೀಯ ಎಂಟ್ರಿಗೆ ಇದು ಸರಿಯಾದ ಸಮಯವೆಂದು ಭಾವಿಸಿದ್ದು, ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಪ್ರಶಾಂತ್ ಕಿಶೋರ್‌ರನ್ನು ಭೇಟಿ ಮಾಡಿದ್ದಾರೆ. 2024ರ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ರಾಜಕೀಯಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಯಾರೀ ಪ್ರಶಾಂತ್ ಕಿಶೋರ್?
ಪ್ರಶಾಂತ್ ಕಿಶೋರ್ ತನ್ನ 'ಐ ಪ್ಯಾಕ್' ಸಂಸ್ಥೆಯ ಮೂಲಕ ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅಧಿಕಾರದ ಗದ್ದುಗೆ ಹಿಡಿಯಲು ಪ್ರಶಾಂತ್ ಕಿಶೋರ್ ಸ್ಟ್ರ್ಯಾಟಜಿ ತುಂಬಾನೇ ಸಹಕಾರಿಯಾಗಿತ್ತು. ಇದೇ ಕಾರಣಕ್ಕೆ ದಳಪತಿ ವಿಜಯ್ ಪ್ರಶಾಂತ್ ಕಿಶೋರ್‌ರನ್ನು ಭೇಟಿ ಮಾಡಿದ್ದರು ಎನ್ನುವ ಸುದ್ದಿ ಹಬ್ಬಿದೆ.

ಅಸಲಿ ಮ್ಯಾಟರ್ ಏನು?
ದಳಪತಿ ವಿಜಯ್ ಆಪ್ತರ ಪ್ರಕಾರ, ಕಾಲಿವುಡ್‌ನಲ್ಲಿ ಹಬ್ಬಿರುವ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ. ದಳಪತಿ ವಿಜಯ್ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್‌ರನ್ನು ಭೇಟಿ ಮಾಡಿಯೇ ಇಲ್ಲ ಎನ್ನುತ್ತಿದ್ದಾರೆ. ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡುವ ಯಾವುದೇ ಆಲೋಚನೆ ಇಲ್ಲ. ಅವರು ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ತಂದೆಗೆ ಪುತ್ರನನ್ನುರಾಜಕೀಯಕ್ಕೆ ತರುವ ಆಸೆ
ದಳಪತಿ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ 2020ರ ನವೆಂಬರ್‌ನಲ್ಲಿ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಕ್ಷವನ್ನು ನೋಂದಣಿ ಮಾಡಿಸಿದ್ದರು. ಇದು ವಿಜಯ್‌ಗೆ ಇಷ್ಟವಿರಲಿಲ್ಲ. ಆದರೆ, ತಂದೆ ಮುಂದೆ ಮಗ ಈ ಪಕ್ಷದ ಮೂಲಕವೇ ರಾಜಕೀಯ ಪ್ರವೇಶ ಮಾಡಬೇಕು ಎಂದು ಬಯಸಿದ್ದರು. ತಂದೆಗೆ ಮಗ ಎಚ್ಚರಿಕೆ ನೀಡಿದ್ದರೂ, ಪಕ್ಷದ ಸಭೆ ಕರೆದಿದ್ದರಿಂದ, ವಿಜಯ್ ತಂದೆಯನ್ನೂ ಸೇರಿ 11 ಮಂದಿಯ ವಿರುದ್ಧ ದೂರ ದಾಖಲಿಸಿದ್ದರು. ತನ್ನ ಹೆಸರನ್ನು ಎಲ್ಲಿಯೂ ಬಳಸಬಾರದು ಎಂದು ವಿಜಯ್ ದೂರಿನಲ್ಲಿ ದಾಖಲಿಸಿದ್ದರು.


Click it and Unblock the Notifications











