ಉಪೇಂದ್ರ, ಸುದೀಪ್ ಸಿನಿಮಾ 'ಕಬ್ಜ'ವನ್ನು ಥಿಯೇಟರ್‌ನಲ್ಲೇ ಯಾಕೆ ನೋಡ್ಬೇಕು? 5 ಪ್ರಮುಖ ಕಾರಣಗಳಿವು!

2023ಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡಿರೋದ್ರಿಂದ 'ಕಬ್ಜ' ಬಗ್ಗೆನೂ ನಿರೀಕ್ಷೆ ದುಪ್ಪಟ್ಟಾಗಿದೆ. ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳ ಒಟ್ಟಿಗೆ ಕಾಣಿಸಿಕೊಂಡಿರುವ ಈ ಸಿನಿಮಾ ರಿಲೀಸ್‌ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರಚಾರವನ್ನೂ ಆರಂಭಿಸಿದೆ. ಸುಮಾರು 7 ಭಾಷೆಗಳಲ್ಲಿ ಸಿನಿಮಾ ರಿಲೀಸ್ ರೆಡಿಯಾಗಿರುವುದರಿಂದ 'ಕಬ್ಜ' ಬಗ್ಗೆ ನಿರೀಕ್ಷೆಗಳು ಗಗನಕ್ಕೇರಿವೆ.

ಆರ್.ಚಂದ್ರು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನೊಂದು ಕಡೆ ಸಿನಿಮಾದಲ್ಲಿರೋ ಒಂದೊಂದೇ ಸರ್ಪ್ರೈಸ್‌ ಅನ್ನು ಈಗ ರಿಲೀಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಕಬ್ಜ' ಟೀಂ ಈಗಾಗಲೇ ಒಂದು ರಾಜ್ಯದಲ್ಲಿ ಒಂದೊಂದು ಇವೆಂಟ್‌ಗಳನ್ನು ಹಮ್ಮಿಕೊಂಡಿದ್ದು, ಸಿನಿಮಾವನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಅಷ್ಟಕ್ಕೂ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ವನ್ನು ಥಿಯೇಟರ್‌ನಲ್ಲೇ ಯಾಕೆ ನೋಡಬೇಕು? ಅದಕ್ಕೆ ಪ್ರಮುಖ ಕಾರಣ ಇಲ್ಲಿದೆ.

These Are the Main Reason to Upendra and Kichcha Sudeep Starrer Kabzaa in Theaters

ಭಾರತದಲ್ಲಿ ಅಂಡರ್‌ವರ್ಲ್ಡ್ ಉಗಮದ ಕಥೆ

'ಕಬ್ಜ' ಸಿನಿಮಾ ಕಥೆ ಬಗ್ಗೆ ನಿರ್ದೇಶಕ ಆರ್ ಚಂದ್ರು ಹೆಚ್ಚೇನು ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದೆ. 'ಕೆಜಿಎಫ್' ಸಿನಿಮಾದೊಂದಿಗೆ ಹೋಲಿಕೆ ಮಾಡಿದರೂ, ಅಂಡರ್‌ವರ್ಲ್ಡ್‌ ಅನ್ನು ವಿಸ್ತಾರವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. 1950ರಿಂದ ಕಥೆ ಆರಂಭ ಆಗಲಿದ್ದು, ಭಾರತದಲ್ಲಿ ಅಂಡರ್‌ ವರ್ಲ್ಡ್ ಉಗಮ ಹೇಗಾಯ್ತು? ಅನ್ನೋದನ್ನು ತೋರಿಸಲಾಗಿದೆ ಎನ್ನಲಾಗಿದೆ.

ಉಪೇಂದ್ರ, ಸುದೀಪ್ ಕಾಂಬಿನೇಷನ್

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೇನು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ 'ಮುಕುಂದ ಮುರಾರಿ' ಸಿನಿಮಾದಲ್ಲಿ ಜೊತೆಯಾಗಿದ್ದರು. ಈಗ ಮತ್ತೊಮ್ಮೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಸಿನಿಮಾದಲ್ಲಿ ಸುಮಾರು 20 ನಿಮಿಷಗಳ ಕಾಲ ಇರುತ್ತಾರೆ ಅಂತ ಮೂಲಗಳು ಹೇಳುತ್ತಿವೆ. ಇನ್ನು ಅಂಡರ್‌ವರ್ಲ್ಡ್‌ ಕಥೆ ಉಪ್ಪಿಗೆ ಹೊಸದೇನು ಅಲ್ಲ. ಈ ಸಿನಿಮಾದಲ್ಲಿ ಅರ್ಕೇಶ್ವರ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಇಬ್ಬರ ಕಾಂಬಿನೇಷನ್ ತೆರೆಮೇಲೆ ಕಿಕ್ ಕೊಡೋದು ಗ್ಯಾರಂಟಿ.

These Are the Main Reason to Upendra and Kichcha Sudeep Starrer Kabzaa in Theaters

ರವಿಬಸ್ರೂರು ಬ್ಯಾಕ್‌ಗ್ರೌಂಡ್ ಮ್ಯೂಸಿಕ್

'ಕೆಜಿಎಫ್' ಅಂತಹ ಸಿನಿಮಾ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್ ಕೊಟ್ಟು ಜನಮನ ಗೆದ್ದಿರೋ ರವಿಬಸ್ರೂರು 'ಕಬ್ಜ'ಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈಗಾಗಲೇ ಟೀಸರ್‌ನಲ್ಲಿ ಬ್ರಸೂರು ಮ್ಯೂಸಿಕ್ ಕಿಕ್ ಕೊಟ್ಟಿದೆ. ಹಾಗೇ ಟ್ಯೂನ್ ಕೂಡ ಹಾಕಿರುವುದರಿಂದ ಸಂಗೀತದ ಬಗ್ಗೆ ಹೆಚ್ಚು ನಿರೀಕ್ಷೆಯಿದೆ. ಈ ಹಾಡುಗಳನ್ನು ಬಿಗ್ ಸ್ಕ್ರೀನ್ ಮೇಲೆ ನೋಡುವುದಕ್ಕೆ ಮಜಾ ಕೊಡುತ್ತವೆ.

ಶ್ರಿಯಾ ಶರಣ್ ಟ್ರೆಡಿಷನಲ್ ಲುಕ್

'ಕಬ್ಜ' ಸಿನಿಮಾದ ಮತ್ತೊಂದು ಆಕರ್ಷಣೆ ಅಂದ್ರೆ, ಅದು ಶ್ರಿಯಾ ಶರಣ್. ಈ ಸಿನಿಮಾದಲ್ಲಿ ಶ್ರಿಯಾ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಧುಮತಿ ಅನ್ನೋ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ನಮಾಮಿ ನಮಾಮಿ ಹಾಡಿನಲ್ಲಿ ಈ ಬಹುಭಾಷಾ ನಟಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳಬಹುದು ಅನ್ನೋ ನಿರೀಕ್ಷೆಯಿದೆ.

ಕ್ಯಾಮರಾ ವರ್ಕ್.. ಆರ್‌ ಚಂದ್ರು ನಿರ್ದೇಶನ

'ಕಬ್ಜ' ಸಿನಿಮಾ ಕ್ಯಾಮರಾ ವರ್ಕ್ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಸಿನಿಮಾದ ಒಂದೊಂದು ದೃಶ್ಯವೂ ಕಣ್ಣಿಗೆ ಹಬ್ಬ ಎನ್ನಲಾಗಿದೆ. ಛಾಯಾಗ್ರಾಹಕ ಎ ಜೆ ಶೆಟ್ಟಿ ಸಿನಿಮಾದ ಪ್ರತಿಯೊಂದು ಶಾಟ್ ಅನ್ನು ವಿಭಿನ್ನವಾಗಿಯೇ ಚಿತ್ರೀಕರಿಸಿದ್ದಾರೆ ಅನ್ನೋ ಮಾತಿದೆ. ಜೊತೆಗೆ ಇಲ್ಲಿವರೆಗೂ ಹೆಚ್ಚಾಗಿ ಲವ್ ಸ್ಟೋರಿಗಳನ್ನೇ ನಿರ್ದೇಶನ ಮಾಡಿದ್ದ ಆರ್‌ ಚಂದ್ರು ಈ ಬಾರಿ ಅಂಡರ್‌ವರ್ಲ್ಡ್ ಕಥೆ ಹೇಳುವುದಕ್ಕೆ ಹೊರಟಿದ್ದಾರೆ. ಹೀಗಾಗಿ ಥಿಯೇಟರ್‌ನಲ್ಲಿ ನೋಡಲೇ ಬೇಕಾದ ಸಿನಿಮಾಗಳಲ್ಲಿ 'ಕಬ್ಜ' ಕೂಡ ಒಂದಾಗಬಹುದು.

More from Filmibeat

English summary
These Are the Main Reason to Upendra and Kichcha Sudeep Starrer Kabzaa in Theaters, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X