ರಜನಿಕಾಂತ್ ಸಿನಿಮಾಗಳಿಂದ ಇಳಯರಾಜ ದೂರ ಸರಿದಿದ್ದಾರಾ? ಟ್ಯೂನ್ ಹಾಕೋಕೆ ಹಿಂದೇಟು ಹಾಕುತ್ತಿರೋದ್ಯಾಕೆ?
ತಮಿಳು ಚಿತ್ರರಂಗದ ಇಬ್ಬರು ದಿಗ್ಗಜರೆಂದರೆ ಇಳಯರಾಜ ಹಾಗೂ ರಜನಿಕಾಂತ್. ಒಬ್ಬರು ನಟನೆಯಲ್ಲಿ ಲೆಜೆಂಡ್ ಆದರೆ, ಮತ್ತೊಬ್ಬ ಸಂಗೀತ ಕ್ಷೇತ್ರದಲ್ಲಿ ಲೆಜೆಂಡ್. ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದು ತೀರಾ ವಿರಳ. ರಜನಿಕಾಂತ್ ಸಿನಿಮಾದಿಂದ ಇಳಯರಾಜ ದೂರ ಉಳಿದರೋ.. ಇಲ್ಲ ಇಳಯರಾಜ ಸಂಗೀತದಿಂದ ರಜನಿ ದೂರ ಉಳಿದರೋ ಅನ್ನೋ ಪ್ರಶ್ನೆ ಅಂತೂ ಸಿನಿಪ್ರಿಯರನ್ನು ಕಾಡಿದ್ದು ಇದೆ.
ದಕ್ಷಿಣ ಭಾರತದಲ್ಲಿ ಇಳಯರಾಜ ಸಂಗೀತಕ್ಕೆ ಅದರದ್ದೇ ಆದ ತಾಕತ್ತು ಇದೆ. ಯಾವುದೇ ಸ್ಟಾರ್ ನಟನಿಗಾದರೂ ಇಳಯರಾಜ ತಮ್ಮ ಒಂದು ಸಿನಿಮಾಗಾದರೂ ಟ್ಯೂನ್ ಹಾಕಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಇಳಯರಾಜ ಸಂಗೀತದಲ್ಲಿ ಪ್ರೀತಿ, ಹಂಬಲ, ಸುಖ, ದುಃಖ ಎಲ್ಲವೂ ಇರುತ್ತೆ. ಹೊಸಬರಿರಲಿ.. ಹಳಬರೇ ಇರಲಿ ಎಲ್ಲರಿಗೂ ಇಳಯರಾಜ ಸಂಗೀತ ಅಂದರೆ ಬಲು ಇಷ್ಟ.

ಸಂಗೀತಕ್ಕೆ ಭಾಷೆ, ದೇಶ ಎಂಬ ಭೇದವಿಲ್ಲ ಎಂಬುದಕ್ಕೆ ಇಳಯರಾಜ ಹಾಡುಗಳೇ ಸಾಕ್ಷಿ. 80ರ ದಶಕದಲ್ಲಿ ಇಳಯರಾಜ ಹಾಕಿದ ಟ್ಯೂನ್‌ಗಳು ಇಂದಿಗೂ ಸಂಗೀತ ಪ್ರಿಯರ ಫೆವರೀಟ್. ಕಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್‌ಗಳಿಗೂ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರಲ್ಲೂ ತಮಿಳಿನ ಇಬ್ಬರು ದಿಗ್ಗಜರಲ್ಲಿ ರಜನಿಕಾಂತ್‌ಗಿಂತ ಕಮಲ್ ಹಾಸನ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದು ಹೆಚ್ಚು.
ಕಮಲ್ ಹಾಸನ್ ಸಿನಿಮಾಗಳಿಗೆ ಇಳಯರಾಜ ನೀಡಿದ ಸಂಗೀತ ಸಂಗೀತ ಪ್ರಿಯರ ಮನಗೆದ್ದಿದ್ದವು. ಹಾಡುಗಳು ಸೂಪರ್ ಹಿಟ್ ಆಗಿದ್ದವು. ಆದರೆ, ತಮಿಳು ಚಿತ್ರರಂಗದ ಮತ್ತೊಬ್ಬ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗಳಿಂದ ಕೊಂಚ ದೂರವೇ ಉಳಿದುಬಿಟ್ಟರು. ಹಾಗಂತ ಸಿನಿಮಾಗೆ ಸಂಗೀತ ನೀಡೇ ಇಲ್ಲ ಎಂದಲ್ಲ. 'ಯಜಮಾನ್', 'ವೀರ' ಅಂತಹ ರಜನಿ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಅದರೆ, ಅದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ.
ಇಳಯರಾಜ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗಳಿಂದ ದೂರ ಉಳಿಯುವುದಕ್ಕೆ ಕಾರಣವೇನು? ಅನ್ನೋ ಪ್ರಶ್ನೆ ಕಾಡದೇ ಇರುವುದಿಲ್ಲ. ಇದಕ್ಕೆ ಕಾರಣ ರಜನಿ ಸಿನಿಮಾಗಳಲ್ಲಿರುವ ಮಾಸ್ ಹಾಡುಗಳು. ರಜನಿಕಾಂತ್ ನಟಿಸುತ್ತಿದ್ದ ಬಹುತೇಕ ಸಿನಿಮಾಗಳಲ್ಲಿ ಮಾಸ್ ಹಾಡುಗಳೇ ಇರುತ್ತಿದ್ದವು. ಇಳಯರಾಜ ಸಂಗೀತ ಶೈಲಿ ಹೆಚ್ಚಾಗಿ ಮಾಸ್ ಪ್ರೇಕ್ಷಕರಿಗೆ ಒಗ್ಗಿಕೊಳ್ಳುತ್ತಿರಲಿಲ್ಲ. ಅಲ್ಲದೇ ಇಳಯರಾಜಗೂ ಅದು ಇಷ್ಟ ಆಗುತ್ತಿರಲಿಲ್ಲ ಎನ್ನಲಾಗಿದೆ.

ಕೆಲವು ಸಮಯದ ನಂತರ ರಜನಿಕಾಂತ್ ಸಿನಿಮಾಗೆ ಮತ್ತೆ ಅಪ್ರೋಚ್ ಮಾಡಲಾಗಿತ್ತು. ರಜನಿ ನಟಿಸುತ್ತಿರುವ 'ಲಿಂಗ' ಚಿತ್ರಕ್ಕೆ ಸಂಗೀತ ನೀಡುವಂತೆ ಇಳಯರಾಜಗೆ ಹೇಳಲಾಗಿತ್ತು. ಆದರೆ, ಇಳಯರಾಜ ಆಫರ್ ಅನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ಆ ಬಳಿಕ 'ಲಿಂಗ' ಸಿನಿಮಾಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಹೀಗಾಗಿ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದಿಂದ ಇಳಯರಾಜ ದೂರವೇ ಉಳಿದುಬಿಟ್ಟರು ಎಂದು ಕಾಲಿವುಡ್‌ನಲ್ಲಿ ಹರಿದಾಡುತ್ತಿರೋ ಸಂಗತಿ.


Click it and Unblock the Notifications











